3ಡಿ ಪ್ರೋಜೆಕ್ಷನ್ ಮ್ಯಾಪಿಂಗ್ ಶೋ ಪ್ರದರ್ಶನ

ಬೆಂಗಳೂರು

      ಪ್ರವಾಸದ್ಯೋಮ ಇಲಾಖೆ ಹಾಗೂ ಮೈಸೂರು ಜಿಲ್ಲಾಡಳಿತ ಮೈಸೂರು ಅರಸರ ದಸರಾ ಉತ್ಸವ ಆಚರಣೆಗೆ ನೀಡಿರುವ ಕೊಡುಗೆ ಮತ್ತು ಅರಮನೆಯ ಇತಿಹಾಸವನ್ನು ತೋರಿಸುವ 3ಡಿ ಪ್ರೋಜೆಕ್ಷನ್ ಮ್ಯಾಪಿಂಗ್ ಶೋ ಪ್ರದರ್ಶನವನ್ನು ಮೈಸೂರಿನ ಪುರಭವನದಲ್ಲಿ ವ್ಯವಸ್ಥೆ ಮಾಡಿದೆ.

      ಈ ಮ್ಯಾಪಿಂಗ್ ಪ್ರದರ್ಶನ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕ್ರಿಯೆಟಿವ್ ನಿರ್ದೇಶಕ, ಹಿತೇಶ್ ಕುಮಾರ್, 12 ನಿಮಿಷಗಳ ಮ್ಯಾಪಿಂಗ್ ಪ್ರದರ್ಶನ ಮೈಸೂರು ಪ್ರಾಂತ್ಯವನ್ನು ಅಳಿರುವ ಅರಸರ ಕೊಡುಗೆ ಮತ್ತು ಇತಿಹಾಸ ಕುರಿತು ಮಾಹಿತಿ ನೀಡಲಿದೆ ಎಂದು ತಿಳಿಸಿದರು.

      ಈ ಮಧ್ಯೆ ಮೈಸೂರು ದಸರಾ ಮಹೋತ್ಸವದ ಮೆರುಗು ಹೆಚ್ಚಾಗುತ್ತಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಬಾರಿ ದಸರಾ ಅವಧಿಯಲ್ಲಿ 25 ಲಕ್ಷಕ್ಕೂ ಅಧಿಕ ಪ್ರವಾಸಿಗರು ಮೈಸೂರು ನಗರಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap