4 ಕೋಟಿ ವೆಚ್ಚದಲ್ಲಿ ಮಸೀದಿ, ಕಬರಸ್ತಾನ ಅಭಿವೃದ್ದಿ

ಚಿತ್ರದುರ್ಗ;

         ಜಿಲ್ಲೆಯಲ್ಲಿ ಮಸೀದಿ, ಕಬರಸ್ತಾನ, ಮದರಸಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುವುದರ ಜೋತೆಗೆ ಆಡಳಿತದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿರುವ ತೃಪ್ತಿ ತಮಗಿದೆ ಎಂದು ಜಿಲ್ಲಾ ವಕ್ಷ್ ಬೋರ್ಡ್ ಅಧ್ಯಕ್ಷ ಡಾ.ಕೆ.ಅನ್ವರ್ ಬಾಷ ಹೇಳಿದ್ದಾರೆ
ಕರ್ನಾಟಕ ರಾಜ್ಯ ವಕ್ಷ್ ಬೋರ್ಡ್‍ನ ಚಿತ್ರದುರ್ಗ ಜಿಲ್ಲಾ ಘಟಕಕ್ಕೆ ಅಧ್ಯಕ್ಷರಾಗಿ ನೇಮಕಗೊಂಡು ಒಂದು ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ `ಪ್ರಜಾಪ್ರಗತಿ’ಯೊಂದಿಗೆ ಮಾತನಾಡಿದ ಅವರು, ತಮ್ಮ ಅವಧಿಯಲ್ಲಿ ಮಾಡಿರುವ ಹಲವು ಅಭಿವೃದ್ದಿ ಕಾರ್ಯಗಳ ಕುರಿತು ವಿವರಣೆ ನೀಡಿದ್ದಾರೆ.

          ತಮ್ಮ ಒಂದು ವರ್ಷದ ಅವಧಿಯಲ್ಲಿ ವಕ್ಛ್ ಬೋರ್ಡ್ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ. ಆಡಳಿತದಲ್ಲಿಯೂ ಸುಧಾರಣೆ ತರಲಾಗಿದೆ. ಈ ಅವಧಿಯಲ್ಲಿ ಮಂಡಳಿಯ ಸದಸ್ಯರು, ಸಮಾಜದ ಮುಖಂಡರು, ಸಿಬ್ಬಂದಿಗಳ ಸಹಕಾರದಿಂದಾಗಿ ಕೋಟ್ಯಾಂತರ ರೂಪಾಯಿ ಅನುದಾನ ತಂದು ಅಭಿವೃದ್ದಿ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು

          ಚಿತ್ರದುರ್ಗದಲ್ಲಿ ಮಸೀದಿ, ಕಬರಸ್ತಾನ ಮತ್ತು ಮದರಸಗಳ ದುರಸ್ಥಿ ಮತ್ತು ಪುನಶ್ವೇತನ ಕಾಮಗಾರಿಗಳಿಗೆ ಸುಮಾರು 3.36 ಕೋಟಿ ರೂಪಾಯಿಗಳನ್ನು ವೆಚ್ಚಮಾಡಲಾಗಿದೆ. ಅಗಸನಕಲ್ಲು ಪ್ರದೇಶದಲ್ಲಿ ಸುಮಾರು ಎರಡು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೊಸದಾಗಿ ಶಾದಿ ಮಹಲ್ ನಿರ್ಮಿಸಲಾಗಿದೆ. ಜೊತೆಗೆ ಕೋಳಿ ಬುರುಜನಹಟ್ಟಿಯಲ್ಲಿ ಶಾದಿಮಹಲ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು

         ಚಳ್ಳಕೆರೆ, ಹಿರಿಯೂರು, ಭರಮಸಾಗರ ಮತ್ತು ಹೊಳಲ್ಕೆರೆಯಲ್ಲಿಯೂ ಶಾದಿಮಹಲ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಪೈಕಿ ಹೊಳಲ್ಕೆರೆ ಮತ್ತು ಭರಮಸಾಗರದಲ್ಲಿ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಕಾಮಗಾರಿಯೂ ಆರಂಭವಾಗಿದೆ. ಈ ಎಲ್ಲಾ ಶಾದಿಮಹಲ್‍ಗಳನ್ನು ತಲಾ ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಕೆ.ಅನ್ವರ್ ಬಾಷ ತಿಳಿಸಿದರು
ಚಿತ್ರದುರ್ಗದಲ್ಲಿ ಮುಸ್ಲಿಂ ಮಹಿಳೆಯರ ವಿದ್ಯಾರ್ಥಿನಿಲಯ ಮತ್ತು ಅಬ್ದುಲ್ ಕಲಾಂ ಭವನ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದು, ಅದಕ್ಕಾಗಿ ಈಗಾಗಲೇ ಸರ್ಕಾರದವತಿಯಿಂದ ಜಮೀನು ಖರೀದಿ ಮಾಡಲಾಗಿದೆ ಎಂದರು

         ಬರುವ ದಿನಗಳಲ್ಲಿ ಜಿಲ್ಲೆಯ ಸುಮಾರು 70ಕ್ಕೂ ಹೆಚ್ಚು ಮಸೀದಿ, ಕಬರಸ್ತಾನ ಮತ್ತು ಮದರಸಗಳ ಪುನಶ್ವೇತನ ಮತ್ತು ದುರಸ್ತಿಗಳಿಗಾಗಿ ಹಣ ಮಂಜೂರಾತಿ ಕೋರಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಹಣ ಮಂಜೂರಾತಿ ಬಳಿಕ ಆದ್ಯತೆಯ ಮೇರೆಗೆ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು

          ತಾವು ವಕ್ಛ್ ಬೋರ್ಡ್‍ಗೆ ಅಧ್ಯಕ್ಷರಾದ ಬಳಿಕ ಸುಮಾರು 40ರಿಂದ 50 ರಷ್ಟು ಮಸೀದಿಗಳ ಕಾರ್ಯಕಾರಿ ಸಮಿತಿಗಳನ್ನು ರಚನೆ ಮಾಡಲಾಗಿದೆ. ತಮ್ಮ ಸಂಸ್ಥೆವತಿಯಿಂದ ಕೈಗೊಳ್ಳಬೇಕಾದ ಎಲ್ಲಾ ರೀತಿಯ ಕೆಲಸಗಳನ್ನು ತುರ್ತಾಗಿ ಅನುಷ್ಟಾನಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು

ರಾಜ್ಯ ಸಮಿತಿಗೆ ಸ್ಪರ್ದೆ;

          ಕರ್ನಾಟಕ ರಾಜ್ಯ ವಕ್ಛ್ ಬೋರ್ಡ್‍ಗೆ ಸದ್ಯದಲ್ಲೇ ಚುನಾವಣೆ ನಡೆಯಲಿದ್ದು, ಸದಸ್ಯ ಸ್ಥಾನಕ್ಕೆ ಸ್ಪರ್ದಿಸಲು ತಯಾರಿ ನಡೆಸುತ್ತಿರುವುದಾಗಿಯೂ ಕೆ.ಅನ್ವರ್ ಬಾಷ ಹೇಳಿದರು

        ಈ ಚುನಾವಣೆಯಲ್ಲಿ ರಾಜ್ಯಾದ್ಯಂತ ಸುಮಾರು ಒಂದು ಸಾವಿರದಷ್ಟು ಮತದಾರರಿದ್ದು, ಈಗಾಗಲೇ ಪ್ರವಾಸ ಕೈಗೊಂಡು ಮತದಾರರನ್ನು ಬೇಟಿಯಾಗುತ್ತಿರುವುದಾಗಿಯೂ ಅವರು ತಿಳಿಸಿದರು

         ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಜೊತೆಗೆ ಗುತ್ತಿಗೆದಾರರಾಗಿಯೂ ಕೆಲಸ ಮಾಡುತ್ತಿದ್ದೇನೆ. ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿಯೂ ತಾವು ತೊಡಗಿಸಿಕೊಂಡಿದ್ದು, ಹಿತೈಷಿಗಳ ಮತ್ತು ಸಮಾಜದ ಮುಖಂಡರ ಬೆಂಬಲದೊಂದಿಗೆ ಚುನಾವಣೆಗೆ ಸ್ಪರ್ದಿಸುತ್ತಿರುವುದಾಗಿ ಅವರು ಹೇಳಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link