ನಾಲ್ಕು ದಿನಗಳ ಕೃಷಿ ಮೇಳ ಪ್ರಾರಂಭ

ಬೆಂಗಳೂರು

         ಗಿರ್ ಹೆಸರಿನ ಗುಜರಾತ್ ಮೂಲದ ಹೋರಿ ಹಾಗೂ ಕಪ್ಪು ರಕ್ತದ ಖಡಾಕ್‍ನಾಥ್ ಕೋಳಿ ಗುರುವಾರದಿಂದ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ಆರಂಭಗೊಂಡಿರುವ ನಾಲ್ಕು ದಿನಗಳ ಕೃಷಿ ಮೇಳದ ಪ್ರಮುಖ ಅಕರ್ಷಣೆಯಾಗಿದೆ.

         ಮೇಳದಲ್ಲಿ ರೈತರನ್ನು ಆಕರ್ಷಿಸಿರುವುದು ಗಿರಿ ತಳಿ ದೇಶದಲ್ಲಿ 5 ಸಂಖ್ಯೆಯಲ್ಲಿ ಮಾತ್ರವಿದ್ದು ಒಂದು ಹೋರಿಯ ಬೆಲೆ ಬರೋಬರಿ 25 ಲಕ್ಷ ವಂಶಾಭಿವೃದ್ಧಿ ಹಾಗೂ ಕೃಷಿಗೆ ಈ ತಳಿಯ ಹೋರಿಯನ್ನು ಬಳಸಿಕೊಳ್ಳಲಾಗುತ್ತಿದೆ.ಇದೇ ಪ್ರಥಮ ಬಾರಿಗೆ ಕೃಷಿ ಮೇಳದಲ್ಲಿ ಈ ಹೋರಿ ಪ್ರದರ್ಶಿಸಿ ಗಿರ್ ತಳಿಯನ್ನು ರೈತರಿಗೆ ಪರಿಚಯಿಸಿಕೊಡಲಾಯಿತು.ಮೇಳದ ಮತ್ತೊಂದು ವಿಶೇಷ ಆಕರ್ಷಣೆಯಾಗಿರುವ ಖಡಾಕ್ ನಾಥ್ ಕೋಳಿ ಕಪ್ಪು ರಕ್ತವುಳ್ಳದ್ದಾಗಿದೆ.

         ಈ ಕೋಳಿಯಿಂದ ಅಂದಾಜು 2 ರಿಂದ ಎರಡೂವರೆ ಕೆ.ಜಿ. ಮಾಂಸ ದೊರೆಯಲಿದೆ. ಮಾಂಸ ಸಹ ಕಪ್ಪು ಬಣ್ಣದಾಗಿದ್ದು, ಕೊಬ್ಬು ರಹಿತ ಅತಿ ಹೆಚ್ಚು ಪೆಷಕಾಂಶವನ್ನು ಹೊಂದಿರುತ್ತದೆ.ಈ ಕೋಳಿಗಳನ್ನು ರಾಜ್ಯದಲ್ಲಿಯು ಕೋಳಿ ಸಾಕಾಣಿಕೆಯಡಿ ಬೆಳೆಸಬಹುದಾದ ಕ್ರಮಗಳ ಕುರಿತಂತೆ ರೈತರಿಗೆ ಸೂಕ್ತ ಮಾಹಿತಿ ಒದಗಿಸಲಾಗಿತ್ತು. ಸಾಕಾಣಿಕೆ ಲಾಭಗಳ ಕುರಿತಂತೆ ಮಾಹಿತಿ ನೀಡಲಾಯಿತು.

ಯಂತ್ರಗಳ ಪ್ರದರ್ಶನ

           ಉಳಿದಂತೆ ಕೃಷಿ ಕ್ಷೇತ್ರದಲ್ಲಿ ಸುಲಭ ವ್ಯವಸಾಯಕ್ಕಾಗಿ ಅಗತ್ಯವಿರುವ ಉಳುಮೆ ಯಂತ್ರಗಳು, ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿತೆ, ಸಿರಿಧಾನ್ಯಗಳು, ಹನಿ ಮತ್ತು ತುಂತುರು ನೀರಾವರಿಗೆ ಅವಶ್ಯಕವಿರುವ ಹಾಗೂ ನೂತನವಾಗಿ ಆವಿಷ್ಕರಿಸರಿಸುವ ಯಂತ್ರಗಳ ಪ್ರದರ್ಶನ, ಮಳೆ ಮತ್ತು ಮೇಲ್ಫಾವಣಿ ನೀರಿನ ಕೊಯ್ಲಿಗೆ ಅಳವಡಿಸಿಕೊಳ್ಳುವ ಉಪಕರಣಗಳನ್ನು ಪ್ರದರ್ಶನಕ್ಕಿಡಲಾಗಿದೆ.

          ಆನ್ ಲೈನ್ ವ್ಯವಸ್ಥೆಯಲ್ಲಿ ಕೃಷಿ ಸಮೀಕ್ಷೆ ಕೊಯ್ಲಿನ ನಂತರ ತಾಂತ್ರಿಕತೆ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯ ನೈಪುಣ್ಯತೆ ಮಾಹಿತಿ, ಕೃಷಿಯಲ್ಲಿ ನೂತನ ಮಾಹಿತಿ ತಂತ್ರಜ್ಞಾನ, ಜೈವಿಕ ಹಾಗೂ ನವೀಕರಿಸಲ್ಪಡುವ ಇಂಧನ, ಕೃಷಿ ಪರಿಕರಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯನ್ನು ಮಾಡಲಾಗಿತ್ತು. ಮತ್ತು 740ಕ್ಕೂ ಅಧಿಕ ಮಾರಾಟ ಮಳಿಗೆಗಳಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನೊಳಗೊಂಡಂತೆ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap