ಚಳ್ಳಕೆರೆ
ಈಗಾಗಲೇ ತಾಲ್ಲೂಕಿನಾದ್ಯಂತ ಬೇಸಿಗೆಯ ರಣಬಿಸಿಲು ಪ್ರಾರಂಭವಾಗಿದ್ದು, ಎಲ್ಲೆಡೆ ಬಿಸಿಲಿನ ತಾಪಕ್ಕೆ ಜನ, ಜಾನುವಾರುಗಳು ನಲುಗಿ ಹೋಗಿವೆ. ವಿಶೇಷವಾಗಿ ಮಧ್ಯಾಹ್ನದ ಸಮಯದಲ್ಲಿ ರಸ್ತೆಗಳಲ್ಲಿ ಓಡಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಎಲ್ಲಿ ನೋಡಿದರೂ ಬಿಸಿಲಿನ ಝಳ ಜನರನ್ನು ಕಂಗೆಡಿಸಿದೆ.
ಇಂತಹ ಬೇಸಿಗೆಯ ಬಿಸಿಲಿನ ತಾಪಕ್ಕೆ ಪರಿತಪಿಸುವ ಸಂದರ್ಭದಲ್ಲೇ ತಾಲ್ಲೂಕಿನ ಯಾದಲಗಟ್ಟೆ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಬಿದ್ದ ಆಕಸ್ಮಿಕ ಬೆಂಕಿ ಜ್ವಾಲೆ ಕೆಲವೇ ನಿಮಿಷಗಳಲ್ಲಿ ನಾಲ್ಕು ಬಣವೆ, ಒಂದು ಎತ್ತಿನ ಟಯರ್ ಗಾಡಿ, ಎರಡು ಕುರಿ ರೊಪ್ಪಗಳನ್ನು ಸಂಪೂರ್ಣವಾಗಿ ಸುಟ್ಟುಹಾಕಿದ್ದಲ್ಲದೆ, 10ಕ್ಕೂ ಹೆಚ್ಚು ಕುರಿಗಳು ಸುಟ್ಟಗಾಯಗಳಿಂದ ನರಳತೊಡಗಿವೆ. ಬೆಂಕಿ ಆಕಸ್ಮಿಕಕ್ಕೆ ಕಾರಣ ತಿಳಿದು ಬಂದಿಲ್ಲ.
ಗ್ರಾಮದ ದಾಸಯ್ಯರ ರಂಗಣ್ಣ, ಮೂಗಜ್ಜ ಬಸಯ್ಯ ಎಂಬುವವರಿಗೆ ಸೇರಿದ ಬಣವೆ ಮತ್ತು ರೊಪ್ಪಗಳಾಗಿದ್ದು, ಅಗ್ನಿಶಾಮಕ ಪಡೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ದಾವಿಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿವೆ. ಈ ಅಗ್ನಿ ಅವಗಡದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
