ಹರಪನಹಳ್ಳಿ,
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಬೇಕು, ಸರ್ಕಾರಿ ಶಾಲಾ ಮಕ್ಕಳು ಇಂಗ್ಲೀಷ್ ಕಲಿಯಬೇಕು, ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆಂಗ್ಲ ಮಾದ್ಯಮ ಶಾಲೆ ಆರಂಭಿಸಲಿದ್ದು, ಆ ನಿಟ್ಟಿನಲಿ ತಾಲೂಕಿನಲ್ಲಿ ನಾಲ್ಕು ಶಾಲೆಗಳನ್ನು ಆಂಗ್ಲ ಮಾದ್ಯಮ ಕ್ಕೆ ಆಯ್ಕೆ ಮಾಡಲಾಗಿದೆ.
ಈ ಕುರಿತು ಕ್ಷೇತ್ರಶಿಕ್ಷಣಾಧಿಕಾರಿ ಮಂಜುನಾಥಸ್ವಾಮಿ ಮಾಹಿತಿ ನೀಡಿದ್ದು, ಪಟ್ಟಣದ ಸರ್ಕಾರಿ ಬಾಲಕೀಯರ ಪ್ರಾಥಮಿಕ ಶಾಲೆ, ಕೆಪಿಎಸ್ ಸರ್ಕಾರಿ ಶಾಲೆ ಹಲುವಾಗಲು, ಸ.ಹಿ.ಪ್ರಾ ಶಾಲೆ ನಿಟ್ಟೂರು, ಹಾಗೂ ಸ.ಹಿ.ಪ್ರಾ ಶಾಲೆ ಮತ್ತಿಹಳ್ಳಿ ಗ್ರಾಮಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾದ್ಯಮ ಆರಂಭಿಸಲು ಸಿದ್ದತೆ ನಡೆದಿದೆ ಎಂದು ಅವರು ತಿಳಿಸಿದರು.
ಖಾಸಗಿ ಶಾಲೆಗಳಲ್ಲಿ ದುಬಾರಿ ಡೊನೇಷನ್ ತೆರಲಾಗದೆ, ಅನೇಕರು ಅನಿವಾರ್ಯವಾಗಿ ಕನ್ನಡ ಮಾದ್ಯಮಕ್ಕೆ ಸೇರಿಸುತ್ತಲಿದ್ದರು, ಇನ್ನೂ ಕೆಲ ಬಡವರು ತಮ್ಮ ಮಕ್ಕಳಿಗೆ ಇಂಗ್ಲೀಷ್ ಮಾದ್ಯಮದಲ್ಲಿ ಗುಣ ಮಟ್ಟದ ಶಿಕ್ಷಣ ಕೊಡಿಸಬೇಕು ಎಂಬ ಮಹಾದಾಸೆ ಹೊಂದಿದ್ದರೂ ಆರ್ಥಿಕ ಸಮಸ್ಯೆಯಿಂದ ತಮ್ಮ ಕನಸ್ಸು ಕೈ ಬಿಡುವಂತಾಗಿತ್ತು ಅಂತಹವರ ಕನಸು ನನಸಾಗಿಸಲು ರಾಜ್ಯ ಸರ್ಕಾರವೇ ಇಂಗ್ಲೀಷ್ ಮಾದ್ಯಮ ಶಾಲೆಗಳನ್ನು ಆರಂಭಿಸುತ್ತಲಿದೆ ಎಂದು ಅವರು ಹೇಳಿದ್ದಾರೆ.
ಆಯ್ಕೆ ಮಾನದಂಡ –
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಎಂದರೆ ವಿವಿಧ ಕಾರಣಗಳಿಂದ ದೂರ ಹೋಗುವವರೆ ಹೆಚ್ಚು, ಆದರೂ ಕಳೆದ ಎರಡು ಮೂರು ವರ್ಷಗಳಿಂದ 1ನೇ ತರಗತಿಗೆ ಕನಿಷ್ಠ 30 ಮಕ್ಕಳು ದಾಖಲಾತಿ ಇರಬೇಕು, ಶಾಲೆಯಲ್ಲಿ ಸುಸಜ್ಜಿತ ಕಟ್ಟಡ ಇರಬೇಕು, ಮೂಲ ಸೌಕರ್ಯ ಹೊಂದಿರಬೇಕು, ಅಂತಹ ಶಾಲೆಗಳನ್ನು ಆಂಗ್ಲ ಮಾದ್ಯಮ ಶಾಲೆ ಆರಂಭ್ಸಿಸಲು ಆಯ್ಕಿ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಸುಣ್ಣ, ಬಣ್ಣ ದೊಂದಿಗೆ, ಶಾಲೆಯನ್ನು ಸಿದ್ದಗೊಳಿಸಲು ಸೂಚಿಸಲಾಗಿದೆ, ಆಂಗ್ಲ ಮಾದ್ಯಮ ಬೋಧಿಸಲು ಆಯಾ ಶಾಲೆಯ ಇಬ್ಬರು ಶಿಕ್ಷಕರಿಗೆ ಡಯಟ್ ನಿಂದ ಈಗಾಗಲೇ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
