ಪಾವಗಡ
ಇತ್ತೀಚಿಗೆ ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಪ್ರಕರಣಗಳು ವರದಿಯಾಗಿದ್ದು, ಸದರಿ ಪ್ರಕರಣಗಳ ಪತ್ತೆಗಾಗಿ ಶ್ರೀ ಎಸ್.ಪಿ.ಧರಣೇಶ್, ಡಿ.ಎಸ್.ಪಿ. ಮಧುಗಿರಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಪಾವಗಡ ವೃತ್ತ ನಿರೀಕ್ಷಕರಾದ ಶ್ರೀ ಸಿ.ವೆಂಕಟೇಶ್ ಮತ್ತು ಪಿ.ಎಸ್.ಐ. ಮಧುಸೂದನ್ ರವರ ನೇತೃತ್ವದಲ್ಲಿ ತಂಡ ರಚಿಸಿದ್ದು, ಸದರಿ ತಂಡವು ತನಿಖೆ ಮುಂದುವರೆಸಿ ಮಧುಗಿರಿ ಉಪಬಂಧಿಖಾನೆಯಲ್ಲಿದ್ದ ಆರೋಪಿಗಳಾದ 1) ರಾಮಾಂಜಿ, 2) ಶೇಖ್‍ಬುಡೇನ್‍ಸಾಬ್, 3) ವಡ್ಡರಾಜೇಶ್ ಮತ್ತು 4) ರಾಜ ರವರುಗಳನ್ನು ಪೊಲೀಸ್ ವಶಕ್ಕೆ ಪಡೆದು ಪಾವಗಡ ಟೌನ್ ಮತ್ತು ಪಾವಗಡ ತಾಲ್ಲೋಕಿನ ಮರಡಿಪಾಳ್ಯ, ಗೌಡೇಟಿ ಗ್ರಾಮಗಳಲ್ಲಿನ ಮನೆಗಳಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದ ಸುಮಾರು 3 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತೆ.
ಆರೋಪಿಗಳ ವಿರುದ್ದ ಈ ಹಿಂದೆ ಪಾವಗಡ, ತಿರುಮಣಿ, ಮಧುಗಿರಿ ಮತ್ತು ನೆರೆಯ ಆಂದ್ರದ ಹಿಂದೂಪುರ, ಸೋಮಂದೆಪಲ್ಲಿ ಹಾಗೂ ಬಾಗೇಪಲ್ಲಿ ಠಾಣೆಗಳಲ್ಲಿ ದರೋಡೆ, ಕಳವು ಮತ್ತು ವಂಚನೆ ಪ್ರಕರಣಗಳು ದಾಖಲಾಗಿರುತ್ತೆ ಹಾಗೂ ಆರೋಪಿ ಶೇಖ್‍ಬುಡೇನ್‍ಸಾಬ್ ಈಗಾಗಲೇ ಮನೆ ಕಳವು ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿರುತ್ತಾನೆ. ಮತ್ತು ಆರೋಪಿ ರಾಜ ಪಾವಗಡ ತಾಲ್ಲೂಕ್ ಗುಜ್ಜನಡು ಗ್ರಾಮದ ವಾಸಿಯಾಗಿದ್ದು ಅರಸೀಕೆರೆ ಪೊಲೀಸ್ ಠಾಣೆಯ ಎಂ.ಓ.ಬಿ. ಅಸಾಮಿ ಆಗಿರುತ್ತಾನೆ.
ಆರೋಪಿಗಳು ಮತ್ತು ಮಾಲು ಪತ್ತೆಕಾರ್ಯದಲ್ಲಿ ಭಾಗಿಯಾಗಿದ್ದ ಪಾವಗಡ ವೃತ್ತ ನಿರೀಕ್ಷಕರಾದ ಶ್ರೀ ಸಿ.ವೆಂಕಟೇಶ್ ಮತ್ತು ಪಿ.ಎಸ್.ಐ. ಮಧುಸೂದನ್ ಮತ್ತು ಸಿಬ್ಬಂದಿಗಳಾದ ಜಿ.ಟಿ.ಶ್ರೀನಿವಾಸ್, ಸೋಮಶೇಖರ್, ಮಂಜುನಾಥ್, ಭರತ್, ಶಶಿಕುಮಾರ್, ರಾಮಕೃಷ್ಣ, ಶ್ರೀರಂಗಪ್ಪ, ಗಂಗಾಧರಪ್ಪರವರುಗಳನ್ನು ಪೊಲೀಸ್ ಅಧೀಕ್ಷಕರು ರವರು ಅಭಿನಂದಿಸಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ