ಬಳ್ಳಾರಿ:
ತೀವ್ರ ಕುತೂಹಲ ಕೆರಳಿಸಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ರಣಕಣದಲ್ಲಿ 4 ಜನ ಅಂತಿಮವಾಗಿ ಉಳಿದಿದ್ದಾರೆ . ಬೇರೆ ಕಡೆಯಿಂದ ಬಂದು ನಾಮಪತ್ರ ಸಲ್ಲಿಸಿದ್ದ ಎಸ್.ತಿಪ್ಪೇಸ್ವಾಮಿ ಅವರು ಕೊನೆ ಕ್ಷಣದಲ್ಲಿ ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ ೆಂದು ಅಧಿಕೃತವಾಗಿ ಘೋಷಣೆಯಾಗಿದೆ .
ಮುಂದಿನ ತಿಂಗಳು ನಡೆಯುವ ಉಪ ಚುನಾಣೆಗೆ ಬಳ್ಳಾರಿಯಲ್ಲಿ ಎರಡು ಪಕ್ಷಗಳ ಮಧ್ಯೆ ತೀರ್ವ ಹಣಾಹಣಿ ಎರ್ಪಟಿದೆ . ಬಳ್ಳಾರಿ ಉಪ ಚುನಾವಣೆಗೆ ನಾಮಪತ್ರವನ್ನು ವಾಪಸ್ ಪಡೆಯಲು ಕೊನೆಯ ದಿನವಾದ ಶನಿವಾರ ತಿಪ್ಪೇಸ್ವಾಮಿ ನಾಮಪತ್ರ ವಾಪಸ್ ಪಡೆದಿದ್ದಾರೆ . ಒಟ್ಟು 7 ಅಭ್ಯರ್ಥಿಗಳು ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು ಅವರಲ್ಲಿ ಮೂವರು ನಾಮಪತ್ರವನ್ನು ವಾಪಸ್ ಪಡೆದಿದ್ದು ನಾಲ್ವರು ಕಣದಲ್ಲಿ ಉಳಿದಿದ್ದಾರೆ ಎಂದು ಅಧಿಕೃತವಾಗಿ ಘೋಷಣೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ