ಎಂ ಎನ್ ಕೋಟೆ :
ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿಯ ಕಾಳಿಂಗದೇವರಹಟ್ಟಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗಲಿ 4 ಗುಡಿಸಲುಗಳು ಭಸ್ಮವಾಗಿರುವಂತಹ ಘಟನೆ ನಡೆದಿದೆ.
ಶುಕ್ರವಾರ ಬೆಳಗ್ಗೆ ರೇಣುಕಪ್ಪ, ಶಂಕರಪ್ಪ, ಕನಕದಾಸಪ್ಪ ಹಾಗೂ ಈರಣ್ಣ ಅನ್ನುವವರ ಮನೆಗಳಿಗೆ ಬೆಂಕಿತಗಲಿದ್ದು ಸಂಪೂರ್ಣ ಸುಟ್ಟು ಕರಕಲಾಗಿದೆ ರೆಣುಕಪ್ಪ ನವರ ಮನೆಯಲ್ಲಿ ಮಗಳ ಮಧುವೆಗೆ ಸಂಗ್ರಹ ಮಾಡಿದ್ದ ಹಣ 5ಲಕ್ಷ ಮತ್ತು 50 ಗ್ರಾಂ ಚಿನ್ನ ಹಾಗೂ ಸ್ಕೂಟರ್ ಹಾಗೂ ಮನೆಯ ವಸ್ತುಗಳು ಸುಟ್ಟು ಕರಕಲಾಗಿದೆ ಇನ್ನೂ ಒಟ್ಟು ನಾಲ್ಕು ಮನೆಯಿಂದ ರಾಗಿ,ಕೂಬ್ಬರಿ ಸೇರಿದಂತೆ ಮನೆಯ ವಸ್ತುಗಳು ನಾಶವಾಗಿದೆ. ಬೇಸಿಗೆಯ ಅವಧಿ ಇರುವುದರಿಂದ ಬೆಂಕಿಯ ಕೆನ್ನಾಲೆಗೆ ಹತ್ತಿರದಲ್ಲಿದ್ದ ಅಡಿಕೆ ಮರಗಳಿಗೂ ಸಹ ತಗಲಿದೆ ಸಾಕಷ್ಟು ಮರಗಳು ಸಹ ಸುಟ್ಟಿದ್ದು ಅವರ ಜೀವನ ಬೀದಿಗೆ ಬಿದ್ದಾಂತಾಗಿದೆ
ಅಗ್ನಿ ಶಾಮಕ ದಳ ಬರುವ ವೇಳೆಗೆ ಸಾಕಷ್ಟು ಮನೆಯು ಸುಟ್ಟಿತ್ತು. ವಿಚಾರವಾಗಿ ಚೇಳೂರು ಠಾಣೆಯ ಪೊಲೀಸರು ಬೇಟಿ ನೀಡಿದ್ದಾರೆ ಹಾಗೂ ಗ್ರಾಮಲೆಕ್ಕಧಿಕಾರಿ ಶರತ್ ಪಂಚಾಯತಿ ಅಧ್ಯಕ್ಷ ವಿಜಯ್‍ದೇವ್ ಇನ್ನಿತರರು ಬೇಟಿ ನೀಡಿದ್ದರು.