ಬೆಂಗಳೂರು :
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 15 ಕ್ಯಾಟಗರಿಯಲ್ಲಿ ಕೊರೊನಾ 4 ಟೆಸ್ಟ್ ಮಾಡಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೋಮವಾರ ಟಾಸ್ ಫೋರ್ಸ್ ಕಮಿಟಿ ಸಭೆ ಇದೆ, ಸಭೆಯಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಬಗ್ಗೆ ಹಾಗೂ ಲಾಕ್ ಡೌನ್ ಮಾಡಬೇಕೇ? ಬೇಡವೇ? ಎನ್ನುವುದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು,
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಮಾಹಿತಿ ಕೂಡ ಇದೆ. ಹಾಗಾಗಿ ಇದು ಸಮುದಾಯಕ್ಕೆ ಆಗುತ್ತಿದೆಯಾ ಎನ್ನುವುದರ ಬಗ್ಗೆ ತಿಳಿದುಕೊಳ್ಳಲು ಇನ್ನು ಮುಂದೆ ಪರೀಕ್ಷೆಯನ್ನು 15 ಕ್ಯಾಟಗರಿಯಲ್ಲಿ ಮಾಡಲಾಗುವುದು ಎಂದರು.
ಹೊರಗಿನಿಂದ ಬಂದವರು ವ್ಯಾಪಾರಿಗಳು, ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು ಮಾರುಕಟ್ಟೆಗಳಲ್ಲಿ ಕೆಲಸ ಮಾಡುವವರು ಸೇರಿದಂತೆ 15 ಕ್ಯಾಟಗರಿಯಲ್ಲಿ ಕೊರೊನಾ ಟೆಸ್ಟ್ ಮಾಡುತ್ತೇವೆ ಎಂದು ಹೇಳಿದರು. ಹಿರಿಯ ನಾಗರಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಎಂದು ಹೇಳಿದ ಸಚಿವರು, ಇದರಿಂದ ಸಮುದಾಯಕ್ಕೆ ಹೇಗೆ ಹರಡುತ್ತದೆ ಎಂಬುದು ತಿಳಿದು ಬರಲಿದೆ ಎಂದರು.
ಮುಂಜಾಗ್ರತಾ ಕ್ರಮ :
ನಾಳೆಯಿಂದ ಎಸ್‍ಎಸ್‍ಎಲ್ ಸಿ ಪರೀಕ್ಷೆ ಆರಂಭವಾಗಲಿದ್ದು, ಸುಮಾರು 4.84 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ, ಯಾವೊಬ್ಬ ವಿದ್ಯಾರ್ಥಿಯೂ ಆತಂಕಕ್ಕೆ ಒಳಗಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು, ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮುಂಚೆ ವಿದ್ಯಾರ್ಥಿಗಳು ಬರಬೇಕು, ಥರ್ಮಲ್ ಸ್ಮಿನಿಂಗ್ ಕಡ್ಡಾಯ ಹಾಗೂ ಕಂಟೆಂಟ್ ಝೋನ್ ನಿಂದ ಬರುವ ಪ್ರತ್ಯೇಕವಾಗಿ ಕೂರಿಸಲು ತೀರ್ಮಾನಿಸಲಾಗಿದೆ ಎಂದರು. ಲಾಕ್ ಡೌನ್ ಮತ್ತೆ ಬೇಕಾ?, ಬೇಡವಾ? ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ನನ್ನ ವೈಯಕ್ತಿಕ ಅಭಿಪ್ರಾಯಗಳು ಬೇರೆ, ಹೊರಗಡೆಯಿಂದ ಬರುವವರಿಂದ ಹೆಚ್ಚು ಬರುತ್ತಿದೆ.ಈಗಾಗಲೇ ಕೆಲ ಭಾಗಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ