ಉದ್ಯಮಿಯ ಸಿಮ್ ಕಾರ್ಡ್ ಬಳಸಿ 45.7 ಲಕ್ಷ ಪಂಗನಾಮ

ಬೆಂಗಳೂರು

    ಸಿಮ್ ಕಾರ್ಡ್‌ನ್ನು ಸ್ಥಗಿತಗೊಳಿಸಿ ಅದನ್ನು ದುರುಪಯೋಗ ಪಡಿಸಿಕೊಂಡು ಮಹಿಳಾ ಉದ್ಯಮಿಯೊಬ್ಬರ ಬ್ಯಾಂಕ್ ಖಾತೆಯಿಂದ 45.7 ಲಕ್ಷರೂಗಳನ್ನು ಸೈಬರ್ ಕಳ್ಳರು ದೋಚಿರುವ ಘಟನೆ ವಿಜಯನಗರದ ಬಿಸಿಸಿ ಲೇಔಟ್‌ನಲ್ಲಿ ನಡೆದಿದೆ.ಎರ್‌ಟೆಲ್ ಸಿಮ್ ಖರೀದಿಸಿ ಅದೇ ಸಂಖ್ಯೆಯನ್ನು ನೆಟ್ ಬ್ಯಾಂಕಿಂಗ್ ಗೂ ನೀಡಿ, ವ್ಯವಹಾರ ನಡೆಸುತ್ತಿದ್ದ ಬಿಸಿಸಿ ಲೇಔಟ್‌ನ ಉದ್ಯಮಿ ಮಂಗಳಾ ಜಗದೀಶ್ ಅವರು ಬಳಸುತ್ತಿದ್ದ ಸಿಮ್ ಕಾರ್ಡ್ ಕಳೆದ ಜ.4ರ ಸಂಜೆ 6ರ ವೇಳೆ ದಿಢೀರ್ ಸ್ಥಗಿತಗೊಂಡಿತ್ತು. ಇದರಿಂದಾಗಿ ಗ್ರಾಹಕ ಸೇವಾ ಕೇಂದ್ರದ ಪ್ರತಿನಿಧಿಗೆ ಕರೆ ಮಾಡಿ ವಿಚಾರಿಸಿದಾಗ ನಿಮ್ಮ ಸಿಮ್ ಕಾರ್ಡ್ ಬೇರೆಯವರ ಹೆಸರಿನಲ್ಲಿ ಆಕ್ಟೀವ್ ಆಗಿರುವುದಾಗಿ ತಿಳಿಸಿದ್ದಾರೆ.

     ತಕ್ಷಣವೇ ತಮ್ಮ ಬ್ಯಾಂಕ್ ಗೆ ತೆರಳಿ ಖಾತೆಯ ಬಗ್ಗೆ ಪರಿಶೀಲನೆ ನಡೆಸಿದಾಗ ಬರೋಬ್ಬರಿ ರೂ.45.7 ಲಕ್ಷ ಸೈಬರ್ ವಂಚಕರು ದೋಚಿರುವುದು ಪತ್ತೆಯಾಗಿದೆ.ಮಂಜುಳಾ ಅವರ ಮೊಬೈಲ್ ಸಂಖ್ಯೆ ಇಟ್ಟುಕೊಂಡ ಸೈಬರ್ ವಂಚಕರು, ಅವರ ಕೆನರಾ ಬ್ಯಾಂಕ್ ಖಾತೆಯ ಯೂಸರ್ ಐಟಿ ಮತ್ತು ಪಾಸ್ ವರ್ಡ್ ಬದಲಾಯಿಸಿ ಓವರ್ ಡ್ರಾಫ್ಟ್ ಖಾತೆಯಿಂದ 43 ಲಕ್ಷ ರೂಪಾಯಿ ಹಾಗೂ ಜಾಲ್ತಿ ಖಾತೆಯಿಂದ 2.7 ಲಕ್ಷ ರೂಗಳನ್ನು ಆರ್ ಟಿ ಜಿ ಎಸ್ ಮೂಲಕ ಕೊಲ್ಕತ್ತಾ, ಗುಜರಾತ್ ನ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.

      ಸೈಬರ್ ವಂಚಕರು ತಮ್ಮ ಖಾತೆಗೆ ಕನ್ನ ಹಾಕಿರುವುದು ಗೊತ್ತಾಗಿ ತಮ್ಮ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ ಮಂಜುಳಾ ಅವರು, ಸೈಬರ್ ಠಾಣೆಗೆ ದೂರು ನೀಡಿದ್ದು, ತಮ್ಮ ಖಾತೆಯಿಂದ ಕನ್ನಕ್ಕೆ ಒಳಗಾಗಿರುವ ರೂ.45.7 ಲಕ್ಷವನ್ನು ಮರಳಿ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link