ಜಿಲ್ಲೆಯಲ್ಲಿ 46 ಡೆಂಗ್ಯೂ ಪ್ರಕರಣ ಪತ್ತೆ;ಡಾ.ಪಾಲಾಕ್ಷ

ಚಿತ್ರದುರ್ಗ:

     ಜಿಲ್ಲೆಯಲ್ಲಿ ಈ ಬಾರಿ ಹಿಂಗಾರು ಮಳೆ ಉತ್ತಮವಾಗಿದ್ದು, ಕೆರೆ ಕಟ್ಟೆ ಗುಂಡಿಗಳಲ್ಲಿ ನೀರು ಹೆಚ್ಚು ಸಂಗ್ರಹವಾಗಿರುವುದರಿಂದ ಸೊಳ್ಳೆಗಳ ಸಂತತಿ ಹೆಚ್ಚಾಗಿ ಡೆಂಗ್ಯೂ ಚಿಕುಂಗುನ್ಯಾ ಪ್ರಕರಣಗಳು ಕಳೆದ ಬಾರಿಗಿಂತ ಈ ಬಾರಿ ಹೆಚ್ಚಾಗಿ ವರದಿಯಾಗುತ್ತಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ಅವರು ತಿಳಿಸಿದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಕೀಟ ಜನ್ಯ ರೋಗಗಳ ನಿಯಂತ್ರಣದ ಕ್ರಮಗಳ ಪ್ರಗತಿ ಪರಿಶೀಲನಾ ಸಭೆ’ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಡಿಸೆಂಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಮಲೇರಿಯಾ-04, ಡೆಂಗ್ಯು-406 ಹಾಗೂ ಚಿಕುಂಗುನ್ಯಾ-177 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಚಿತ್ರದುರ್ಗ ತಾಲ್ಲೂಕು ಒಂದರಲ್ಲೇ ಡೆಂಗ್ಯು-252 ಹಾಗೂ ಚಿಕುಂಗುನ್ಯಾ-105 ಪ್ರಕರಣಗಳು ವರದಿಯಾಗಿವೆ.

    ಕಳೆದ ವರ್ಷ 2018 ರಲ್ಲಿ ಮಲೇರಿಯಾ-14, ಡೆಂಗ್ಯು-108 ಹಾಗೂ ಚಿಕುಂಗುನ್ಯಾ-161 ಪ್ರಕರಣಗಳು ವರದಿಯಾಗಿವೆ ಎಂದರು ಈ ವರ್ಷ ಹಿಂಗಾರು ಉತ್ತಮವಾಗಿದ್ದು, ಎಲ್ಲ ಕೆರೆಕಟ್ಟೆಗಳಲ್ಲಿ ನೀರು ತುಂಬಿದ್ದು ಸೊಳ್ಳೆಗಳ ಹರಡುವಿಕೆಗೆ ಉತ್ತಮ ಸ್ಥಿತಿ ನಿರ್ಮಾಣವಾದಂತಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಈ ಬಾರಿ ಸೊಳ್ಳೆಗಳ ನಿಯಂತ್ರಣಕ್ಕೆ ಹೆಚ್ಚಿನ ಶ್ರಮ ವಹಿಸುವುದು ಅಗತ್ಯವಾಗಿದೆ. ಕೀಟಜನ್ಯ ರೋಗಗಳಾದ ಡೆಂಗ್ಯೂ ಚಿಕುಂಗುನ್ಯಾ ಮಲೇರಿಯಾ ರೋಗಗಳ ಕುರಿತು ಲಾರ್ವಾ ಸಮೀಕ್ಷೆ, ಜ್ವರ ಸಮೀಕ್ಷೆ ಹಾಗೂ ಕೀಟ ಜನ್ಯ ರೋಗಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು, ಸೊಳ್ಳೆಗಳ ನಿಯಂತ್ರಿಸುವಂತೆ ಕರೆ ನೀಡಲು ‘ನಾಗರಿಕರಿಗೊಂದು ಸವಾಲು’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು

   ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ನೀರು ಸಂಗ್ರಹ ಸ್ಥಳಗಳಿಗೆ ಲಾರ್ವಾಹಾರಿ ಮೀನುಗಳನ್ನು ಬಿಟ್ಟು, ಜೈವಿಕವಾಗಿ ರೋಗ ಹತೋಟಿಗೆ ತರಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಫಾಲಾಕ್ಷ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸೂಚಿಸಿದರು.

   ಜಿಲ್ಲಾ ಆರೋಗ್ಯ ಮೇಲ್ವಿಚಾರಕರುಗಳಾದ ಖಾಸಿಂಸಾಬ್, ಹನುಮಂತಪ್ಪ, ಅಬುಸ್ವಾಲೇಹ ಅವರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ವರದಿಯಾದ ಕೀಟಜನ್ಯ ರೋಗ ಪ್ರಕರಣಗಳಿಗೆ ಕೈಗೊಂಡ ಕ್ರಮಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಫಾಗಿಂಗ್ ಮಾಸ್ಟರ್ ರುದ್ರಮುನಿಯವರು ಧೂಮಲೀಕರಣ ನಿರ್ವಹಿಸಿದ ಬಗ್ಗೆ ಸಭೆಗೆ ತಿಳಿಸಿದರು. ಸಭೆಯಲ್ಲಿ ಜಿಲ್ಲೆಯ ಕೀಟಜನ್ಯ ವಿಭಾಗದ ಎಲ್ಲಾ ಆರೋಗ್ಯ ಸಹಾಯಕರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link