ಹಿಪಪಾಟಮಸ್ ದಂತ ಮಾರಾಟ : 5 ಜನರ ಬಂಧನ

ಶಿವಮೊಗ್ಗ:

    ಕಳೆದ ವಾರ ಕರ್ನಾಟಕದ ಶಿವಮೊಗ್ಗದಲ್ಲಿ ವಶಕ್ಕೆ ಪಡೆಯಲಾದ ಹಿಪಪಾಟಮಸ್  ದಂತಗಳ ಮೂಲವನ್ನು ಬಿಚ್ಚಿಡಲು ಎರಡು ರಾಜ್ಯ ಅರಣ್ಯ ಇಲಾಖೆಗಳು ಮತ್ತು ಪೊಲೀಸರ ಜಂಟಿ ಪ್ರಯತ್ನ ಮುಂದುವರಿದಿದೆ. ಈ ಸರಕುಗಳ ಕಳ್ಳಸಾಗಣೆ ವ್ಯಾಪ್ತಿ ಏಷ್ಯಾಖಂಡಕ್ಕೂ ಆಚಿನದ್ದಾಗಿದೆ ಎಂದು ಅಧಿಕಾರಿಯೊಬ್ಬರು  ಹೇಳಿದ್ದಾರೆ. ಪ್ರಕರಣ ಸಂಬಂಧ ಕರ್ನಾಟಕ ಹಾಗೂ ಗೋವಾದಲ್ಲಿ ಐವರನ್ನು ಬಂಧಿಸಲಾಗಿದೆ.

   “ಕಳೆದ ಸೋಮವಾರ, ನಾವು ಹಿಪಪಾಟಮಸ್  ದಂತವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂವರನ್ನು ಬಂಧಿಸಿದ್ದೇವೆ. ಅವರು ಒದಗಿಸಿದ  ಸಾಕ್ಷಿಗಳೊಂದಿಗೆ ನಾವು ಕೆಲವು ಸುಳಿವುಗಳನ್ನು ಪಡೆದುಕೊಂಡಿದ್ದೇವೆ ಮತ್ತು ಸರಬರಾಜುದಾರರು ಗೋವಾದಿಂದ ಬಂದವರು ಎಂದು ತಿಳಿದುಬಂದಿದೆ” ಎಂದು ಶಿವಮೊಗ್ಗ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಆರ್. ರವಿಶಂಕರ್ ಐಎಎನ್‌ಎಸ್‌ಗೆ ತಿಳಿಸಿದರು.

    ಮೊಹಮ್ಮದ್ ಡ್ಯಾನಿಶ್, ಮುಜಾಫರ್ ಹಸನ್ ಮತ್ತು ಝಾಕಿರ್ ಖಾನ್ ಅವರನ್ನು ಶಿವಮೊಗ್ಗದ ಚಂದ್ರಗುತ್ತಿಯಿಂದ  12 ಕೆಜಿ ವರೆಗಿನ ಹಿಪಪಾಟಮಸ್  ದಂತದ ಮಾರಾಟ ಯತ್ನ ಪ್ರಕರಣದಲ್ಲಿ ಬಂಧಿಸಿಅಲಾಗಿದೆ. ಇಷ್ಟಕ್ಕೂ ಹಿಪಪಾಟಮಸ್  ಗಳು ಬಾರತದ ಕಾಡಿನಲ್ಲಿ ಕಾಣಸಿಕ್ಕುವುದಿಲ್ಲ. ಕೆಲ ಪ್ರಾಣಿಸಂಗ್ರಹಾಲಯಗಳಲ್ಲಿ ಮಾತ್ರ  ಇದೆ. ಹಾಗಾಗಿ ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಈ ಪ್ರಕರಣ ಅಚ್ಚರಿ ತಂದಿದೆ. ಆದರೆ ತನಿಖೆಯ ಬೆಳವಣಿಗೆಯ ನಂತರ ಮೂವರು ಆರೋಪಿಗಳು ಫ್ರಿಕನ್ ಪ್ರಾಣಿಗಳ ದಂತವನ್ನು ಸಂಗ್ರಹಿಸಿದ ಮೂಲವನ್ನು ಪತ್ತೆ ಮಾಡಿದ್ದಾರೆ. ತನಿಖೆಗೆ ಅಂತರರಾಜ್ಯ ಸಹಕಾರ ಅಗತ್ಯವಿರುವುದರಿಂದ, ಕರ್ನಾಟಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಮ್ಮ ಗೋವಾದ ಸಹವರ್ತಿಗಳೊಂದಿಗೆ  ಸಂಪರ್ಕ ಸಾಧಿಸಿದ್ದಾರೆ. “ನಾವು ನಮ್ಮ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ಉನ್ನತ ಮಟ್ಟದಲ್ಲಿ, ಅವರು ಸಂಪೂರ್ಣ ಸಹಕಾರಕ್ಕಾಗಿ ಚರ್ಚಿಸಿದ್ದಾರೆ.  ಒಂದು ತಂಡವು ಗೋವಾಕ್ಕೆ ತೆರಳಿದೆ”ವಿಶಂಕರ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap