ತುಮಕೂರು: 5 ಮಕ್ಕಳಿಗೆ ವಕ್ಕರಿಸಿದ ಕೊರೊನಾ ಮಾರಿ

ತುಮಕೂರು

      ಕೊರೊನಾ ಸೋಂಕಿಗೆ ಜಿಲ್ಲೆಯ ಮತ್ತೊಬ್ಬರು ಬಲಿಯಾಗಿದ್ದಾರೆ. ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿದೆ. ತುಮಕೂರು ತಾಲ್ಲೂಕು ನಾಗವಲ್ಲಿಯ 55 ವರ್ಷದ ಮಹಿಳೆ ಮೃತರಾಗಿದ್ದಾರೆ. ಇವರಿಗೆ ಸಕ್ಕರೆ ಕಾಯಿಲೆ ಇದ್ದು, ಕಾಯಿಲೆ ಉಲ್ಬಣವಾದ ಸ್ಥಿತಿಯಲ್ಲಿ ಈ ತಿಂಗಳ 6ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಇವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಇವರ ಗಂಟಲು ದ್ರವ ಪಡೆದು ಪರೀಕ್ಷೆಗೆ ಒಳಪಡಿಸಿದ್ದು ಪಾಸಿಟೀವ್ ವರದಿ ಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

      ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕಂಡುಬರುತ್ತಿಲ್ಲ, ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮಂಗಳವಾರ ಮತ್ತೆ 24 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟೀವ್ ದೃಢಪಟ್ಟವರ ಸಂಖ್ಯೆ 292ಕ್ಕೆ ಏರಿಕೆಯಾಗಿ, ತ್ರಿಶತಕದತ್ತ ದಾಪುಗಾಲು ಹಾಕಿದೆ.

      ಮಂಗಳವಾರ ವರದಿಯಾದ 24 ಪ್ರಕರಣಗಳಲ್ಲಿ ಪಾವಗಡ ತಾಲ್ಲೂಕಿನ 14, ಗುಬ್ಬಿ ತಾಲ್ಲೂಕಿನ 3, ಕೊರಟಗೆರೆ ತಾಲ್ಲೂಕಿನ 2 ಹಾಗೂ ತುಮಕೂರು, ಕುಣಿಗಲ್, ಮಧುಗಿರಿ, ತುರುವೇಕೆರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ತಲಾ ಒಂದು ಪಾಸಿಟೀವ್ ಪ್ರಕರಣ ವರದಿಯಾಗಿವೆ. 215 ಜನರಲ್ಲಿ ಸೋಂಕು ಸಕ್ರಿಯವಾಗಿದೆ ಎಂದು ಡಿಹೆಚ್‍ಓ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

     ಪಾವಗಡ:-  ಪಾವಗಡ ತಾಲ್ಲೂಕಿನ ಚಿತ್ತಗಾನಹಳ್ಳಿಯ 38 ವರ್ಷದ ಪುರುಷ, ಪಾವಗಡ ಪಟ್ಟಣದ 7 ವರ್ಷದ ಬಾಲಕಿ, ಕೆಂಚಗಾನಹಳ್ಳಿಯ 11 ವರ್ಷದ ಬಾಲಕಿ, ಮೂಗದಾಳಬೆಟ್ಟದ 47 ವರ್ಷದ ಮಹಿಳೆ, ಕ್ಯಾತಗಾನಹಳ್ಳಿಯ 7 ವರ್ಷದ ಬಾಲಕ, ವೈ.ಎನ್.ಹೊಸಕೋಟೆಯ 40 ವರ್ಷದ ಗಂಡಸು, 38 ವರ್ಷದ ಮಹಿಳೆ, 42 ವರ್ಷದ ಗಂಡಸು, ದೇವಲಾಹಿಹಳ್ಳಿಯ 8 ವರ್ಷದ ಬಾಲಕಿ, ಪಾವಗಡ ಪಟ್ಟಣದ 17 ವರ್ಷದ ಯುವಕ, ಕುಂಬಾರ ಬೀದಿಯ 18 ವರ್ಷದ ಯುವಕ, ತಾಲ್ಲೂಕಿನ ರೊಪ್ಪದ 65 ವರ್ಷದ ಪುರುಷ, ಹೊಸಹಳ್ಳಿಯ 2 ವರ್ಷದ ಮಗು, ಹೊಸಹಳ್ಳಿಯ 21 ವರ್ಷದ ಯುವತಿಗೆ ಸೋಂಕು ಖಚಿತವಾಗಿದೆ.

    ಗುಬ್ಬಿ:- ಗುಬ್ಬಿಯ ಕೋಟೆಬೀದಿಯ 60 ವರ್ಷದ ಗಂಡಸು, ತಾಲ್ಲೂಕಿನ ಬಿಳಿನಂದಿಯ 32 ವರ್ಷದ ಹೆಂಗಸು, ಮಾವಿನಹಳ್ಳಿ ಗೊಲ್ಲರಹಟ್ಟಿಯ 21 ವರ್ಷದಯುವಕನಿಗೆ ಕೊರೊನಾ ದೃಢಪಟ್ಟಿದೆ.ಕೊರಟಗೆರೆ:-ಕೊರಟಗೆರೆಯ 60 ವರ್ಷದ ಮಹಿಳೆ, ಸೋಮಾಪುರ ಅಮ್ಮನಹಳ್ಳಿಯ 21 ವರ್ಷದ ಯುವತಿಗೆ ಪಾಸಿಟೀವ್ ವರದಿ ಬಂದಿದೆ. ತುಮಕೂರು ತಾಲ್ಲೂಕು ನಾಗವಲ್ಲಿಯ 55 ವರ್ಷದ ಮಹಿಳೆ, ಕುಣಿಗಲ್ ತಾಲ್ಲೂಕಿನ ಸಿದ್ಧರಾಮಯ್ಯನಪಾಳ್ಯದ 60 ವರ್ಷದ ಮಹಿಳೆ, ಮಧುಗಿರಿ ಪಟ್ಟಣದ ಕೆ.ಆರ್.ಬಡಾವಣೆಯ 56 ವರ್ಷದ ಗಂಡಸು, ತುರುವೇಕೆರೆ ತಾಲ್ಲೂಕಿನ ಮೇಲಿನಹೊರಗೇರಹಳ್ಳಿಯ 29 ವರ್ಷದ ಮಹಿಳೆಗೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಾಡೇನಹಳ್ಳಿಯ 70 ವರ್ಷದ ವೃದ್ಧರಿಗೆ ಕೋವಿಡ್ ಸೋಂಕು ವರದಿಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap