ಶಿರಾ ಕಸ್ತೂರಿ ರಂಗಪ್ಪನಾಯಕನ ಕೋಟೆ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ : ಶಾಸಕ ಬಿ.ಸತ್ಯನಾರಾಯಣ್

ಶಿರಾ

       ಶಿರಾ ನಗರದ ಐತಿಹಾಸಿಕ ಪ್ರಸಿದ್ಧ ರಾಜಾ ಕಸ್ತೂರಿ ರಂಗಪ್ಪನಾಯಕನ ಕೋಟೆ ಅಭಿವೃದ್ಧಿಗೆ ರಾಜ್ಯ ಸರ್ಕಾರವು 2017-18ನೇ ಸಾಲಿನಲ್ಲಿ 5 ಕೋಟಿ ರೂ.ಗಳ ಅನುದಾನ ನೀಡಿದೆ ಎಂದು ಶಾಸಕ ಬಿ.ಸತ್ಯನಾರಾಯಣ್ ತಿಳಿಸಿದರು.

       ನಗರದ ಕಸ್ತೂರಿ ರಂಗಪ್ಪನಾಯಕನ ಕೋಟೆಯ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ವಿವಿಧ ವಾಲ್ಮೀಕಿ ಸಂಘಟನೆಗಳ ಸಹಯೋಗದಲ್ಲಿ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಸ್ತುತ ದಿನಮಾಗಳಲ್ಲಿ ಶಿರಾ ನಗರದ ಇತಿಹಾಸವನ್ನು ಕಾಪಾಡಿದೆ ಎಂದರೆ ಅದು ಇಲ್ಲಿನ ಕೋಟೆಯಿಂದ ಮಾತ್ರ. ಶತ ಶತಮಾನಗಳ ಐತಿಹ್ಯವನ್ನು ಹೊಂದಿರುವ ಸದರಿ ಕೋಟೆಯೊಳಗಿನ ಪ್ರತಿಯೊಂದು ಕಲ್ಲುಗಳು ಕೂಡ ಇಲ್ಲಿನ ಇತಿಹಾಸದ ಪುಟಗಳನ್ನು ತಿರುವಿ ಹಾಕುತ್ತವೆ. ಈ ಕೋಟೆಯು ವಿನಾಶದ ಅಂಚನ್ನು ತಲುಪುವ ಹಂತದಲ್ಲಿದ್ದಾಗ ಹಂತ ಹಂತವಾಗಿ ರಾಜ್ಯ ಸರ್ಕಾರಗಳು ಅನುದಾನ ಬಿಡುಗಡೆ ಮಾಡಿದ ಪರಿಣಾಮ ಈ ಕೋಟೆಯ ಬದಲಾವಣೆ ಸಾಧ್ಯವಾಗಿದೆ ಎಂದರು.

      ಹೇಗಾದರೂ ಸರಿ ರಾಜ್ಯ ಸರ್ಕಾರದಿಂದ ಮತ್ತಷ್ಟು ಅನುದಾನವನ್ನು ಮಂಜೂರು ಮಾಡಿಸುವ ಹಂಬಲ ನನಗೆ ಮೂಡಿದ್ದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮುಂದೆ ಪಟ್ಟು ಕೂತು ಕೋಟೆಯ

        ಅಭಿವೃದ್ಧಿಗೆ 5 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿದ್ದೇನೆ. ಈ ಸಂಬಂಧ ಮೊದಲ ಹಂತವಾಗಿ 2.5 ಕೋಟಿ ರೂ. ಮಂಜೂರಾಗಿದೆ. ಸದರಿ 5 ಕೋಟಿ ರೂ.ಗಳ ಅನುದಾನದಲ್ಲಿ ಕೋಟೆಯ ಸುತ್ತಲೂ ಚೈನ್‍ಲಿಂಕ್ ಫೆÉನ್ಸಿಂಗ್, ಮೋಟ್ ಅಭಿವೃದ್ಧಿ, ನೂತನ ಸೇತುವೆ ನಿರ್ಮಾಣ, ಹೊರಭಾಗದಲ್ಲಿ ಗೇಟ್ ನಿರ್ಮಾಣ, ಕೋಟೆಯ ಹೆಬ್ಬಾಗಿಲಿನಲ್ಲಿ ನೂತನ ದ್ವಾರದ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯಲಿವೆ ಎಂದರು.

         ಪ್ರಪ್ರಥಮವಾಗಿ ಸಾಂಸ್ಕøತಿಕ ಹಾಗೂ ದೈವಿಕ ಕಾರ್ಯಗಳು ಕೋಟೆಯ ಆವರಣದಲ್ಲಿ ವಾಲ್ಮೀಕಿ ಜಯಂತೋತ್ಸವದ ಮೂಲಕ ಆರಂಭಗೊಂಡಿರುವುದು, ನಿಜಕ್ಕೂ ಈ ಕೋಟೆಯ ಸಮಗ್ರ ಅಭಿವೃದ್ಧಿಯ ಸಂಕೇತವೂ ಆಗಿದೆ. ಮಹಾಕಾವ್ಯಗಳು ಜಗತ್ತಿಗೆ ಶ್ರೇಷ್ಠವಾಗಿದ್ದು, ಅದರಲ್ಲೂ ರಾಮಾಯಣದ ಸಮಗ್ರ ಮಾಹಿತಿಯನ್ನು ವಾಲ್ಮೀಕಿ ನೀಡಿದ್ದು, ಯುವ ಪೀಳಿಗೆಯು ವಾಲ್ಮೀಕಿಯವರ ಸಮಗ್ರ ಮಾಹಿತಿ ಅರಿಯಬೇಕಿದೆ ಎಂದರು.

      ತಾ.ಪಂ. ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್ ಮಾತನಾಡಿ, ಶ್ರೀರಾಮನಿರುವ ದೇವಾಲಯದಲ್ಲಿ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರವಿರಬೇಕು ಎಂಬ ಕೆಲ ವಿಮರ್ಶಕರ ಮಾತು ನಿಜಕ್ಕೂ ಮೆಚ್ಚುವಂತಾದ್ದು. ಮಹರ್ಷಿಯನ್ನು ಪೂಜನೀಯ ಭಾವನೆಯಲ್ಲಿ ಕಾಣುವ ಕೆಲಸ ಮೊದಲಾಗಬೇಕು. ಮಕ್ಕಳು ಮಹರ್ಷಿ ವಾಲ್ಮೀಕಿಯವರ ಜೀವನ ಚರಿತ್ರೆಯನ್ನು ಸಮಗ್ರವಾಗಿ ತಿಳಿಯುವಂತಾಗಬೇಕು ಎಂದರು.
ಉಪನ್ಯಾಸಕ ಗೋವಿಂದರಾಜು ವಿಶೇಷ ಉಪನ್ಯಾಸ ನೀಡಿ, ಇಂದು ವಾಲ್ಮೀಕಿ ಮಹರ್ಷಿ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಇತಿಹಾಸದ ಕಾಲ ಗರ್ಭದಲ್ಲಿ ಹುದುಗಿ ಹೋಗಿದ್ದ ರಾಮ ಹಾಗೂ ಆಂಜನೇಯರನ್ನು ರಾಮಾಯಣದ ಮೂಲಕ ಬೆಳಕಿಗೆ ತಂದಿದ್ದು ವಾಲ್ಮೀಕಿ ಮಹರ್ಷಿ ಅನ್ನುವುದನ್ನು ಯಾರೂ ಕೂಡ ಮರೆಯಬಾರದು. ಜಗತ್ತಿನ ಪ್ರತಿಯೊಂದು ಭಾಷೆಗಳಲ್ಲೂ ರಾಮನ ಬಗ್ಗೆ ಕೃತಿಗಳು ಹೊರ ಬಂದಿದ್ದು, ಅದಕ್ಕೆ ಮೂಲ ಪ್ರೇರಣೆಯೇ ವಾಲ್ಮೀಕಿ ಮಹರ್ಷಿಗಳು. ವಾಲ್ಮೀಕಿ ಓರ್ವ ಕವಿ ಕುಲದ ಗುರುವೂ ಹೌದು ಎಂದರು.

       ತಹಸೀಲ್ದಾರ್ ಸಿದ್ಧಲಿಂಗರೆಡ್ಡಿ, ತಾ.ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ರಾಮಚಂದ್ರಯ್ಯ, ನಗರಸಭೆಯ ಅಧ್ಯಕ್ಷ ಅಮಾನುಲ್ಲಾಖಾನ್, ಧರಣಿಕುಮಾರ್ ಮಾತನಾಡಿದರು.

        ಡಿ.ಎಸ್.ಪಿ.ವೆಂಕಟೇಶನಾಯ್ಡು, ಬಿ.ಇ.ಓ. ವಿಜಯ್‍ಕುಮಾರ್, ಜ್ಞಾನಪೂರ್ಣಮ್ಮ, ದಯಾನಂದಸಾಗರ್, ಪ್ರಸನ್ನಕುಮಾರ್, ಅಜೇಯ್‍ಕುಮಾರ್, ಡಿ.ರಾಕೇಶ್‍ಬಾಬು, ರಂಗರಾಜು, ಗಂಗಾಧರ್, ಮಣಿಕಂಠ, ಜೆ.ಎನ್.ರಾಜಸಿಂಹ, ಗಿರಿಯಪ್ಪ, ಟೈರ್ ರಂಗನಾಥ್, ಶೀಬಿ ರಂಗಯ್ಯ, ಮುಕುಂದಪ್ಪ, ಪಡಿ ರಮೇಶ್, ಕೋಟೆ ರವಿ, ಧರಣಿಕುಮಾರ್, ಲಿಂಗೇಗೌಡ, ಮನೋಹರನಾಯ್ಕ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link