ಪೊಲೀಸ್ ರಕ್ಷಣಾ ಸಾಮಗ್ರಿ ಖರೀದಿಗೆ 5 ಕೋಟಿ ಬಿಡುಗಡೆ

ಬೆಂಗಳೂರು

     ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಅಗತ್ಯ ರಕ್ಷಣಾ ಸಾಮಗ್ರಿ ಖರೀದಿಸಲು ಕಂದಾಯ ಇಲಾಖೆಯು 5 ಕೋಟಿ ರೂಗಳ ಅನುದಾನ ನೀಡಿದೆ.ಕೊರೋನಾ ವೈರಸ್ ಹರಡುವಿಕೆ ತಡೆಯಲು ಹಗಲಿರುಳು ಕಾರ್ಯ ನಿರ್ವಹಿಸುತ್ತಿರುವ ಪೊಲೀಸರು ಪ್ರತಿನಿತ್ಯ ರಸ್ತೆಗಳಲ್ಲಿ ಬಂದೋಬಸ್ತ್ ನಲ್ಲಿ ತೊಡಗಿರುವ

      ಪೊಲೀಸರಿಗೆ ಸೋಂಕು ತಗಲದಂತೆ ಎಚ್ಚರ ವಹಿಸುವ ಸಲುವಾಗಿ ರಕ್ಷಣಾ ಸಾಮಗ್ರಿ ಖರೀದಿಗೆ 5 ಕೋಟಿ ಹಣ ಬಿಡುಗಡೆ ಮಾಡಲಾಗಿದೆ.

     ಪೊಲೀಸರ ಆರೋಗ್ಯ ಮತ್ತು ರಕ್ಷಣೆ ಸಲುವಾಗಿ 10 ಕೋಟಿ ಹಣ ನೀಡುವಂತೆ ಪೊಲೀಸ್ ಇಲಾಖೆ ಮನವಿ ಮಾಡಿತ್ತು
ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಹಣ ಬಿಡುಗಡೆಗೆ ಪೊಲೀಸ್ ಇಲಾಖೆ ಮಾಡಿದ ಮನವಿ ಪರಿಗಣಿಸಿ 5 ಕೋಟಿ ಹಣವನ್ನು ಕಂದಾಯ ಇಲಾಖೆ ಮೂರು ಷರತ್ತುಗಳನ್ನ ವಿಧಿಸಿ ಎಸ್ ಡಿಆರ್ ಎಫ್ ನಿಧಿಯಲ್ಲಿ ಹಣ ಬಿಡುಗಡೆ ಮಾಡಿದೆ.ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಮತ್ತು ಪ್ರೊಟೆಕ್ಟ್ ಸೂಟ್ ಖರೀದಿಗೆ ಹಣ ಬಳಸಿಕೊಳ್ಳುವ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap