ಮಿಡಿಗೇಶಿ
ಮಧುಗಿರಿ-ಪಾವಗಡ ರಾಜ್ಯ ಹೆದ್ದಾರಿಯ ನಲ್ಲೇಕಾಮನಹಳ್ಳಿ ಬಳಿ ಆ.4 ರಂದು ಬೆಳಗ್ಗೆ 7-15 ರ ಸಮಯದಲ್ಲಿ ಇಂಡಿಕಾ ಕಾರು (ಕೆಎ 04 ಎಂಎಂ 2354) ಅಪಘಾತಕ್ಕೆ ಈಡಾಗಿದೆ. ಬೆಂಗಳೂರಿನಿಂದ ಪಾವಗಡಕ್ಕೆ ಕನ್ನಡಿಗರ ರಕ್ಷಣಾ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ರಮೇಶ್, ಭಾಸ್ಕರ್, ಗುರು, ಈಶ್ವರಪ್ಪ (ತಾತ) ಹಾಗೂ ಬಸವರಾಜು ಪ್ರಯಾಣಿಸುತ್ತಿದ್ದರು.
ಅತಿ ವೇಗದ ಚಾಲನೆಯಿಂದ ಕಾರು ರಸ್ತೆಯನ್ನು ಬಿಟ್ಟು ಸುಮಾರು 200 ಮೀಟರ್ ದೂರದ ಜಮೀನಿಗೆ ಬಿದ್ದಿದೆ. ರಮೇಶ್ ಎಂಬುವರಿಗೆ ಕಾಲು ಮುರಿದಿದ್ದು, ಇನ್ನುಳಿದ ನಾಲ್ವರಿಗೆ ಬಲವಾದ ಪೆಟ್ಟುಗಳು ಬಿದ್ದಿರುವ ಬಗ್ಗೆ ವರದಿಯಾಗಿದೆ. ಘಟನಾ ಸ್ಥಳಕ್ಕೆ ಮಿಡಿಗೇಶಿಯ ಪೋಲೀಸ್ ಸಿಬ್ಬಂದಿ ಆಗಮಿಸಿ ಗಾಯಾಳುಗಳನ್ನು ಕೆ.ಶಿಪ್ ಆ್ಯಂಬ್ಯುಲೆನ್ಸ್ ಮೂಲಕ ಮಧುಗಿರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ .ಅಪಘಾತಕ್ಕೀಡಾಗಿ ನುಚ್ಚು ನೂರಾಗಿರುವ ಕಾರನ್ನು ಪೋಲೀಸರು ವಶಕ್ಕೆ ಪಡೆದು, ತನಿಖೆ ಕೈ ಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ