ಹರಪನಹಳ್ಳಿ
ರಾಜ್ಯಾದ್ಯಂತ ನೆರೆ ಹಾವಳಿಗೆ ತುತ್ತಾದ ಸಂತ್ರಸ್ಥರನ್ನು ರಕ್ಷಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ 5 ತಂಡಗಳು ರಚಿಸಲಾಗಿದ್ದು ರಕ್ಷಣೆ ಕಾರ್ಯವನ್ನು ತ್ವರಿತ ಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಬಿಜೆಪಿ ಶಾಸಕ ಶ್ರೀರಾಮಲು ಹೇಳಿದರು.
ಹೆಚ್‍ಕೆಡಿಬಿ ಪ್ರದೇಶಗಳ ನೆರೆಯನ್ನು ಪರಿಶೀಲಿಸಲು ನೇತೃತ್ವವಹಿಸಿರುವ ಅವರು ತಾಲ್ಲೂಕಿನ ತುಂಗಭದ್ರ ನದಿ ತೀರದ ಗ್ರಾಮಗಳು ನೆರೆ ಸಮೀಕ್ಷೆಯನ್ನು ಪರಿಶೀಲಿಸಲು ತೆರಳುವ ಮಾರ್ಗದ ಮಧ್ಯ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 17 ಜಿಲ್ಲೆಗಳ 84 ತಾಲ್ಲೂಕು 80 ತಾಲ್ಲೂಕುಗಳ 1702 ಗ್ರಾಮಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ.
31 ಜನರು ಹಾಗೂ 343 ಜಾನುವಾರುಗಳು ಮೃತಪಟ್ಟಿವೆ. 924 ಗಂಜಿ ಕೇಂದ್ರಗಳನ್ನು ತೆರಯಲಾಗಿದೆ. 3 ಲಕ್ಷದ 15 ಸಾವಿರ ಜನರನ್ನು ರಕ್ಷಣೆ ಮಾಡಲಾಗಿದೆ. 2 ಲಕ್ಷ 18 ಸಾವಿರ ಸಂತ್ರಸ್ಥರಿಗೆ ಪರಿಹಾರ ಕೇಂದ್ರಗಳಲ್ಲಿ ಆಸರೆ ನೀಡಲಾಗಿದೆ. 4 ಲಕ್ಷದ 16 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ. 20 ಎನ್‍ಆರ್‍ಎಫ್ ತಂಡಗಳು, 10 ಪ್ಯಾರ ಮಿಲಿಟರಿ ತಂಡ, ಹಾಗೂ 5 ನೌಕ ಸೇನೆ ತಂಡಗಳು ರಕ್ಷಣೆ ಕಾರ್ಯದಲ್ಲಿ ತೊಡಗಿವೆ.
ಎಲ್ಲಾ ನೆರೆ ಸಂತ್ರಸ್ಥರಿಗೆ ರಕ್ಷಣೆ ಜೊತೆ ಹೊಸ ಬದುಕು ಕಟ್ಟಿಕೊಳ್ಳು ಸರ್ಕಾರಗಳು ಭದ್ದವಾಗಿವೆ.ನೆರೆ ಹಾವಳಿಯನ್ನು ಎದುರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಟೊಂಕಟ್ಟಿ ನಿಂತಿವೆ. ರಾಜ್ಯ ಸರ್ಕಾರ 100 ಕೋಟಿ ಹಾಗೂ ಕೇಂದ್ರ ಸರ್ಕಾರ 200 ಕೋಟಿ ಹಣವನ್ನು ತುರ್ತು ನೆರೆ ಪರಿಹಾರಕ್ಕೆ ಬಿಡುಗಡೆಯಾಗಿದೆ ಎಂದರು.
ತಾಲ್ಲೂಕಿನಲ್ಲಿ ತುಂಗಭದ್ರ ನದಿ ಪ್ರವಾಹದಿಂದ ಉಂಟಾಗುವೆ ನೆರೆಯನ್ನು ಎದುರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಶಾಸಕ ಜಿ.ಕರುಣಾಕರರೆಡ್ಡಿ ಹಾಗೂ ಸಂಸದ ವೈ.ದೇವೇಂದ್ರಪ್ಪ ಕಾರ್ಯನೋಮ್ಮುಖವಾಗಿದ್ದು ತಾಲ್ಲೂಕು ಆಡಳಿತ ತ್ವರಿತ ರಕ್ಷಣೆ ಪಡೆಯನ್ನು ಸಿದ್ದವಾಗಿಟ್ಟಿದೆ. ತಾಲ್ಲೂಕಿನಲ್ಲಿ ಸುರಿದ ಮಳೆಯಿಂದ 147 ಮನೆಗಳು ಹಾನಿಯಾಗಿವೆ. ಶೀಘ್ರ ಪರಿಹಾರ ಚೆಕ್ ಗಳನ್ನು ವಿತರಿಸಲಾಗುವುದು. ನೆರೆ ಸಮಸ್ಯೆಯನ್ನು ಪರಿಹರಿಸಲು 75 ಲಕ್ಷ ಅನುದಾನ ಸಿದ್ದವಾಗಿದೆ. ಈಗಾಗಲೇ 10 ಲಕ್ಷ ಹಣ ಬಿಡುಗಡೆ ಮಾಡಿಲಾಗಿದೆ ಎಂದರು.
ಸಚಿವ ಸಂಪುಟ ವಿಸ್ತರಣೆಗೆ ನೆರೆ ಹಾಗೂ ಬಿಜೆಪಿ ಹಿರಿಯ ನಾಯಕಿ ಸುಷ್ಮ ಸುರಾಜ್ ಅವರ ಅಕಾಲಿಕ ಮರಣದಿಂದ ವಿಳಂಬವಾಗಿದೆ. ನೆರೆ ಪರಿಹಾರಕ್ಕೆ ಯಾವುದೇ ತೊಂದರೆಯಾಗದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ತಂಡ ಎಚ್ಚರಿಕೆವಹಿಸಿದೆ.
ರಾಜ್ಯದ ಪರಿಶಿಷ್ಟ ಪಂಗಡಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಶೇ.7.5ರಷ್ಟು ಮೀಸಲಾತಿಯನ್ನು ನೀಡಲು ಪಾದಯಾತ್ರೆ ಮೂಲಕ ವಾಲ್ಮೀಕಿ ಸಮಾಜ ಸಲ್ಲಿಸಿದ್ದ ಬೇಡಿಕೆ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರ ಯಾವ ಕ್ರಮ ಜರುಗಿಸಿದೆ ಎಂದು ಕೇಳಿದ ಪ್ರಶ್ನೆಗೆ ಶೀಘ್ರದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಬಹುದಿನಗಳ ನಂತರ ಶಾಸಕ ಜಿ.ಕರುಣಾಕರರೆಡ್ಡಿ ಸಹೋದರ ಸೋಮಶೇಕರರೆಡ್ಡಿ ಹಾಗೂ ಶ್ರೀರಾಮುಲು ಒಟ್ಟಿಗೆ ಸುದ್ಧಿಗೋಷ್ಠಿ ನಡೆಸಿದ್ದ ಇಂದಿನ ವಿಶೇಷವಾಗಿತ್ತು.
ಸುದ್ಧಿ ಗೋಷ್ಠಿಯಲ್ಲಿ ಎಸಿ ಪ್ರಸನ್ನಕುಮಾರ ಕೆ., ಶಾಸಕರಾದ ಜಿ.ಕರುಣಾಕರರೆಡ್ಡಿ, ಸೋಮಶೇಖರ ರೆಡ್ಡಿ, ಬಳ್ಳಾರಿ ಜಿಲ್ಲೆ ಸಂಸದ ವೈ.ದೇವೇಂದ್ರಪ್ಪ, ಜಿಲ್ಲಾಧ್ಯಕ್ಷ ಚನ್ನಬಸವನಗೌಡ್ರು, ಬಿಜೆಪಿ ಮುಖಂಡರಾದ ಎಂ.ಪಿ.ನಾಯ್ಕ್, ಕೋಡಿಹಳ್ಳಿ ಭೀಮಪ್ಪ, ಬಿ.ವೈ.ವೆಂಕಟೇಶ್, ಸಣ್ಣ ಹಾಲಪ್ಪ, ಲೋಕೇಶ್ ಹಾಗೂ ಇತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
