ಭಾರಿ ಮಳೆ : 50ಕ್ಕೂ ಹೆಚ್ಚು ಮನೆ ಭಾಗಶಃ ಕುಸಿತ

ಹರಪನಹಳ್ಳಿ,

ತಾಲೂಕಿನಲ್ಲಿ  ಸುರಿದ ಮಳೆ ಗಾಳಿಗೆ  ಲಕ್ಷಾಂತರ ರು.ಗಳ ಬೆಳೆ ಹಾನಿ ಹಾಗೂ 50ಕ್ಕೂ ಹೆಚ್ಚು ಮನೆಗಳು ಬಾಗಶಃ ಕುಸಿತ ಗೊಂಡ ಜರುಗಿದೆ.
     ಹಿರೇಮೇಗಳಗೇರಿಯಲ್ಲಿ 1050 ಎಕರೆ ಭತ್ತ, 100 ಎಕರೆ ಅಡಿಕೆ, ವಡ್ಡಿನಹಳ್ಳಿಯಲ್ಲಿ 10 ಮನೆಗಳು, ಹಿರೇಮೇಗಳಗೇರಿಯಲ್ಲಿ 5 ಮನೆಗಳು ಭಾಗಶಃ ಕುಸಿತ ಕಂಡಿವೆ. ವಡ್ಡಿನಹಳ್ಳಿಯ ರೈತರಾದ ಪಿ.ಆನಂದಪ್ಪ, ಪಿ.ಶಂಕರ, ಪಿ.ನಾಗರಾಜ, ಡಿ.ಕರಿಬಸಪ್ಪ, ಡಿ.ಭರ್ಮನಗೌಡ, ಡಿ.ಶಿವಾನಂದಪ್ಪ ಸೇರಿದಂತೆ ಇತರ ರೈತರ 3 ಸಾವಿರ ಹೆಕ್ರೇರ ಭತ್ತ ಹಾಗೂ 40 ಎಕರೆ ಅಡಿಕೆ ಬೆಳೆ ಹಾನಿ ಸಂಭವಿಸಿದೆ.
     ಅಡಿಕೆ ಎಕರೆಗೆ 80-100 ಗಿಡಗಳು ನಾಶಗೊಂಡಿವೆ, ಭತ್ತದ ಬೆಳೆ  ನೀರಲ್ಲಿ ನೆಲಕ್ಕರುಳಿವೆ, ಇನ್ನು ಬೆಳೆ ಬರುವುದಿಲ್ಲ, ಎಂದು ಅವರು ಹೇಳಿದರು.
      ನಂದಿಬೇವೂರಲ್ಲಿ 4 ಮನೆಗಳು, ಮೈದೂರಲ್ಲಿ 6 ಮನೆಗಳು, ಉಚ್ಚಂಗಿದುರ್ಗದಲ್ಲಿ 3 ಮನೆಗಳು, ಮತ್ತಿಹಳ್ಳಿಯಲ್ಲಿ 5 ಮನೆಗಳು, ಲಕ್ಷ್ಮೀಪುರದಲ್ಲಿ 6 ಮನೆಗಳು ಹೀಗೆ ಅಲ್ಲಲ್ಲಿ ಮನೆಗಳು ಬಾಗಶಃ ಜಖಂಗೊಂಡಿವೆ. , ಕೆಲವೊಂದು ಕಡೆ ಸಂಪೂರ್ಣವಾಗಿ ಚಾವಣೆ ಹಾರಿ ಹೋಗಿವೆ. ಲಕ್ಷ್ಮೀಪುರದಲ್ಲಿ 2 ಎಕರೆ ಪಪ್ಪಾಯಿ, 350 ಎಕರೆ ಭತ್ತ ನಾಶ ಗೊಂಡಿದೆ. ಒಟ್ಟಿನಲ್ಲಿ ತಾಲೂಕಿನ ವಿವಿಧೆಡೆ ಅಂದಾಜು 40 ಮನೆಗಳು  ಮಳೆ, ಗಾಳಿಗೆ ಹಾನಿಗೀಡಾಗಿವೆ. 
 
     ಉಚ್ಚಂಗಿದುರ್ಗದ ಗುಡ್ಡದ ಮೇಲಿನ ಮರಿಯಪ್ಳ ಮಂಜುನಾಥ ಎಂಬುವವರ ಮನೆಯ ಹಾಗೂ ಹೋಟೆಲ್ ನ ತಗಡುಗಳು ಹಾರಿ ಹೋಗಿವೆ, ಮೆಳ್ಳೆಕಟ್ಟಿ  ಅಂಗವಿಕಲ ಮಲ್ಲಪ್ಪ, ಮನೆ ಜಖಂ, ನೀಲಪ್ಪ ಎಂಬುವವರ ತಗಡುಗಳು ಹಾರಿ ಹೋಗಿವೆ. ಮಳೆ  ಪ್ರಮಾಣ  ಈ ರೀತಿ ಇದ್ದು, ಹರಪನಹಳ್ಳಿ – 29.2 ಮಿಮೀ, ಅರಸಿಕೇರಿ -23 ಮಿಮೀ, ಚಿಗಟೇರಿ -22ಮಿಮೀ, ಹಿರೇಮೇಗಳಗೇರಿ -53.2ಮಿಮೀ, ಉಚ್ಚಂಗಿದುರ್ಗ -29.4ಮಿಮೀ, ಮಳೆಯಾಗಿದ್ದು, ತೆಲಿಗಿ, ಹಲುವಾಗಲು ಭಾಗದಲ್ಲಿ ಮಾತ್ರ ಮಳೆಯಾಗಿಲ್ಲ.
       ಈ ಕುರಿತು ಪ್ರತಿಕ್ರಿಯೆ ನೀಡಿದ ವಡ್ಡಿನಹಳ್ಳಿ ರೈತ ಪಿ.ಆನಂದಪ್ಪ ಅವರು ಸಾಕಷ್ಟು ಹಣ ಸುರಿದು ಬೀಜಗೊಬ್ಬರ ಹಾಕಿ ಬೆಳೆಸಿದ ಬೆಳೆ ನಾಶಗೊಂಡಿದ್ದು, ಲಕ್ಷಾಂತರ ನಷ್ಟ  ಸರ್ಕಾರ ಸೂಕ್ತ ಪರಿಹಾರ ನೀಡಿದರೆ ಸ್ವಲ್ಪ ನೆಮ್ಮದಿಯಾದೀತು ತಹಶೀಲ್ದಾರ ಎ.ಎಸ್ ಪ್ರಸಾದ್ ಪ್ರತಿಕ್ರಿಯೆ ನೀಡಿ ಮಳೆ ಹಾನಿ ಮಾಹಿತಿ ಸಂಗ್ರಹಿಸಲು ಆಯಾ ಭಾಗದ ಗ್ರಾಮಲೆಕ್ಕಿಗರ ಸಂಪೂರ್ಣ ವರದಿ ಬಂದ ನಂತರ  ಮನೆಗಳು ಹಾಗೂ ಬೆಳೆ ನಷ್ಟಕ್ಕೆ ಪ್ರಕೃತಿ ವಿಕೋಪ ನಿಯಮದಡಿ ಪರಿಹಾರ ನೀಡಲಾಗುವುದು ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap