ಶಾಲೆಗಳಿಗೆ ಡೆಸ್ಕ್ ಖರೀದಿಗೆ 50 ಲಕ್ಷಅನುದಾನ

ಚಿತ್ರದುರ್ಗ;

        ಮೊಳಕಾಲ್ಮುರು ತಾಲ್ಲೂಕಿನಲ್ಲಿನ ಸರ್ಕಾರಿ ಶಾಲೆಗಳಿಗೆ ಡೆಸ್ಕ್‍ಖರೀದಿಗೆ ಶಾಸಕರ ಸ್ಥಳೀಯ ಅಭಿವೃದ್ದಿ ನಿಧಿಯಿಂದ ಐವತ್ತು ಲಕ್ಷ ನೀಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯರಜಿ.ರಘುಆಚಾರ್ ಪ್ರಕಟಿಸಿದರು.

          ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳೊಂದಿಗೆ ಅಭಿವೃದ್ದಿಕುರಿತಚರ್ಚೆಯ ವೇಳೆ ಅನುದಾನ ನೀಡಲು ಪ್ರಕಟಿಸಿದರು.ಮೊಳಕಾಲ್ಮುರು ತಾಲ್ಲೂಕಿನಲ್ಲಿ ಮಕ್ಕಳು ಹೆಚ್ಚಾಗಿ ಸರ್ಕಾರಿ ಶಾಲೆಗಳಲ್ಲಿಯೇ ವ್ಯಾಸಂಗ ಮಾಡುತ್ತಿದ್ದಾರೆ.ಮಕ್ಕಳು ನೆಲದ ಮೇಲೆ ಕುಳಿತುಕೊಳ್ಳಬಾರದೆಂಬ ಉದ್ದೇಶದಿಂದ ಶಾಲೆಗಳಿಗೆ ಡೆಸ್ಕ್ ನೀಡಲು ಉದ್ದೇಶಿಸಲಾಗಿದೆ ಎಂದರು.

         ಈ ಹಿಂದೆಚಿತ್ರದುರ್ಗತಾಲ್ಲೂಕಿನಲ್ಲಿನ ಸರ್ಕಾರಿ ಶಾಲೆಗಳಿಗೆ ಕೊರತೆಇರುವ ಕೊಠಡಿಗಳ ನಿರ್ಮಾಣ ಹಾಗೂ ದುರಸ್ಥಿಗಾಗಿ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಹೆಚ್ಚಿನಅನುದಾನಒದಗಿಸಲಾಗಿತ್ತು.ನಗರದಲ್ಲಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದುಇಲ್ಲಿ ಕೊಠಡಿಗಳ ಕೊರತೆಯಿಂದ ಬೆಳಗಿನ ವೇಳೆ ಪಿ.ಯುಕಾಲೇಜು ಹಾಗೂ ನಂತರ ಪ್ರೌಢಶಾಲೆಯನ್ನು ನಡೆಸಲಾಗುತ್ತಿದೆ.

   ಇದನ್ನು ಮನಗಂಡು ರೂ.80 ಲಕ್ಷಗಳ ಅನುದಾನವನ್ನುಎಂಟು ತಿಂಗಳ ಹಿಂದೆಯೇ ಕೊಡಿಸಲಾಗಿತ್ತು . ಆದರೆ ಕಾಮಗಾರಿ ಇನ್ನೂ ಆರಂಭವಾಗದಿರುವುದಕ್ಕೆ ತೀವ್ರಅಸಮಧಾನ ವ್ಯಕ್ತಪಡಿಸಿ ಶೀಘ್ರ ಕಾಮಗಾರಿಆರಂಭಿಸಲುಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.

       ಶಾಲಾ ಮಕ್ಕಳಿಗೆ ಈಗಾಗಲೇ ಮಧ್ಯಾಹ್ನದ ಬಿಸಿ ಊಟವನ್ನು ನೀಡಲಾಗುತ್ತಿದ್ದು ಶುದ್ದಕುಡಿಯುವ ನೀರನ್ನುಒದಗಿಸಬೇಕಗಿದೆ.ಎಲ್ಲಾ ಶಾಲೆಗಳಿಗೆ ಸಂಖ್ಯೆಯನ್ನಧಾರಿಸಿ ಬೇಕಾಗುವ ಕುಡಿಯುವ ನೀರು ಹಾಗೂ ಅಡುಗೆ ಮಾಡಲು ಸಹ ಶುದ್ದಕುಡಿಯುವ ನೀರನ್ನು ಒದಗಿಸಬೇಕು . ಈ ನಿಟ್ಟಿನಲ್ಲಿಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದಕ್ರಮ ಕೈಗೊಳ್ಳಲು ಅವಕಾಶ ಇದೆ.ನಾನು ಸಹ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಡಿ ಸಾಕಷ್ಟು ಕಡೆ ಶುದ್ದಕುಡಿಯುವ ನೀರಿನ ಘಟಕಗಳನ್ನು ಒದಗಿಸಲುಅನುದಾನ ನೀಡಿದ್ದೇನೆಎಂದರು.
ಚಿತ್ರದುರ್ಗ ನಗರದಲ್ಲಿರಸ್ತೆಅಗಲೀಕರಣ ಸೇರಿದಂತೆ ಸಾಕಷ್ಟು ಅಭಿವೃದ್ದಿಯಾಗಬೇಕಾಗಿದೆ. ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಗರದ ಅಭಿವೃದ್ದಿಗೆ ನಾಲ್ಕು ಕೋಟಿಅನುದಾನ ಲಭ್ಯವಿದ್ದುರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಮಠದ ಮುಂಭಾಗದಲ್ಲಿನಕೆರೆ ಹಾಗೂ ಚಂದ್ರವಳ್ಳಿ ಕೆರೆಯನ್ನು ಅಭಿವೃದ್ದಿಪಡಿಸಿ ಪ್ರವಾಸಿತಾಣವನ್ನಾಗಿಸಲು ಮುಂದಾಗಬೇಕೆಂದು ತಿಳಿಸಿದರು.

      ವಿಧಾನ ಪರಿಷತ್ ಸದಸ್ಯನಾಗಿಜಿಲ್ಲೆಯಅಭಿವೃದ್ದಿಗೆ ಹೆಚ್ಚಿನಒತ್ತು ನೀಡುವುದು ನನ್ನ ಮುಖ್ಯಉದ್ದೇಶವಾಗಿದೆ. ಅಧಿಕಾರಿಗಳು ಆಯಾ ಇಲಾಖೆಗಳಿಗೆ ಸಂಬಂಧಿಸಿದಂತೆ ಅಭಿವೃದ್ದಿಗೆ ಬೇಕಾದ ಸಹಕಾರವನ್ನು ನನ್ನಿಂದ ಪಡೆಯಬಹುದಾಗಿದೆಎಂದರು.

      ಜಿಲ್ಲಾಧಿಕಾರಿಆರ್.ಗಿರೀಶ್ ಮಾತನಾಡಿ ಶಾಲೆಗಳಿಗೆ ಬಿಸಿ ಊಟವನ್ನು ನೀಡಲಾಗುತ್ತಿದ್ದು ಮಕ್ಕಳ ಆರೋಗ್ಯದೃಷ್ಟಿಯಿಂದ ಶುದ್ದಕುಡಿಯುವ ನೀರುಒದಗಿಸಬೇಕಾಗಿದೆ.ಆಯಾಗ್ರಾಮ ಪಂಚಾಯಿತಿಯಿಂದ ಶಾಲೆಗಳಿಗೆ ಬೇಕಾದ ನೀರುಒದಗಿಸಲುಕ್ರಮ ಕೈಗೊಳ್ಳಬೇಕಾಗಿದೆ.ಈ ಬಗ್ಗೆ ಜಿಲ್ಲಾ ಪಂಚಾಯಿತಿಯಿಂದ ಸುತ್ತೋಲೆಯನ್ನು ನೀಡಲು ತಿಳಿಸಿದರು.ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಡಾ; ಅರುಣ್.ಕೆ, ಉಪವಿಭಾಗಾಧಿಕಾರಿ ವಿಜಯಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯಯೋಜನಾಧಿಕಾರಿ ಪಿ.ಶಶಿಧರ್, ಯೋಜನಾ ನಿರ್ದೇಶಕರಾಜಶೇಖರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ