ಗುಬ್ಬಿ
ಪ್ರಕೃತಿ ವಿಕೋಪ ಸೇರಿದಂತೆ ಆಕಸ್ಮಿಕ ಅವಘಡಗಳು ಸಂಭವಿಸಿದಾಗ ಲಯನ್ಸ್ ಸಂಸ್ಥೆ ಸಹಾಯ ಹಸ್ತ ನೀಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು, ಇತ್ತೀಚೆಗೆ ಮಡಿಕೇರಿ ಮತ್ತು ಕೊಡಗು ಭಾಗದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಂತ್ರಸ್ತರಿಗೆ ನೆರವು ನೀಡುವ ಸಲುವಾಗಿ ಗುಬ್ಬಿ ಲಯನ್ಸ್ ಸಂಸ್ಥೆ ವತಿಯಿಂದ 50 ಸಾವಿರ ರೂಗಳ ಚೆಕ್‍ನ್ನು ಲಯನ್ಸ್ ಜಿಲ್ಲಾ ರಾಜ್ಯಪಾಲ ರೇಣುಕುಮಾರ್ ಅವರಿಗೆ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಉಂಡೆ ರಾಮಯ್ಯ ಮತ್ತು ಪದಾಧಿಕಾರಿಗಳು ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಲಯನ್ಸ್ ಸಂಸ್ಥೆಯ ಅಭಿನಂದನಾ ಕಾರ್ಯಕ್ರಮದಲ್ಲಿ ನೀಡಿದರು.
ಗುಬ್ಬಿ ಲಯನ್ಸ್ ಸಂಸ್ಥೆಯು ಆರೋಗ್ಯ, ಶಿಕ್ಷಣ, ಪರಿಸರ ಸೇರಿದಂತೆ ವಿವಿಧ ಸಮಾಜ ಸೇವಾ ಕಾರ್ಯ ಮಾಡುವಲ್ಲಿ ಉತ್ತಮ ಸೇವಾ ಕಾರ್ಯಗಳನ್ನು ಮಾಡಿದ್ದು ಲಯನ್ಸ್ ಜಿಲ್ಲಾ ರಾಜ್ಯ ಪಾಲರು ಉತ್ತಮ ಲಯನ್ಸ್ ಸಂಸ್ಥೆ ಎಂದು ಗುರುತಿಸಿ ಅಭಿನಂದಿಸಿದರು.
ಲಯನ್ಸ್ ಉಪರಾಜ್ಯಪಾಲರುಗಳಾದ ಡಾ:ರಮೇಶ್, ನಾಗರಾಜು ಡೈರಿ, ಡಾ:ಚೇತನ್, ಪದಾಧಿಕಾರಿಗಳಾದ ಜಿ.ಬಿ.ಮಲ್ಲಪ್ಪ, ಸಿದ್ದಪ್ಪಗುಜ್ಜರಿ, ಎ.ಎಸ್.ರೇಣುಕಯ್ಯ, ಡಿ.ಆರ್.ಕೀರ್ತಿರಾಜ್, ಪ್ರೇಮಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
