ತುಮಕೂರು:
ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಮಂಗಳವಾರ 52 ಸೋಂಕಿತ ಪ್ರಕರಣಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದೆ. ಕಳೆದ 2 ದಿನಗಳಿಂದ 25 ಹಾಗೂ 35 ಪ್ರಕರಣಗಳು ವರದಿಯಾಗಿದ್ದು, ಮಂಗಳವಾರ ಈ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಮಂಗಳವಾರದ 52 ಪ್ರಕರಣಗಳೂ ಸೇರಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 565 ಕೊರೊನಾ ಪಾಸಿಟೀವ್ ಪ್ರಕರಣಗಳು ದೃಢಪಟ್ಟಿವೆ.
52 ಪ್ರಕರಣಗಳ ಪೈಕಿ ತುಮಕೂರು ತಾಲ್ಲೂಕಿನಲ್ಲಿಯೇ 31 ಪ್ರಕರಣಗಳು ಕಂಡುಬಂದಿವೆ. ತುರುವೇಕೆರೆ ತಾಲ್ಲೂಕು, ತಿಪಟೂರು ತಾಲ್ಲೂಕುಗಳಲ್ಲಿ ತಲಾ 5, ಪಾವಗಡ ತಾಲ್ಲೂಕಿನಲ್ಲಿ 4, ಕುಣಿಗಲ್ ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ ತಲಾ 2, ಕೊರಟಗೆರೆ, ಮಧುಗಿರಿ ಹಾಗೂ ಶಿರಾಗಳಲ್ಲಿ ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ.
ಮಂಗಳವಾರ 17 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇದರಿಂದಾಗಿ ಈವರೆಗೆ ಒಟ್ಟು 154 ಸೋಂಕಿತರು ಬಿಡುಗಡೆಯಾದಂತಾಗಿದೆ. ಇನ್ನು 395 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. 16 ಮಂದಿ ಮೃತಪಟ್ಟಿದ್ದಾರೆ. ಸೋಮವಾರ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬರು ಮರಣ ಹೊಂದಿದ್ದು, ಇವರೂ ಸೇರಿದಂತೆ ಒಟ್ಟು 16 ಮಂದಿ ಮೃತಪಟ್ಟಿರುತ್ತಾರೆ.
52 ಮಂದಿ ಸೋಂಕಿತರಲ್ಲಿ 48 ಮಂದಿ `ಎ’ ಸಿಂಪ್ಟಮ್ಯಾಟಿಕ್ (ರೋಗಲಕ್ಷಣ ರಹಿತ) ಪ್ರಕರಣಗಳಿದ್ದು, ಇವರನ್ನು ಕೋವಿಡ್ ಸೆಂಟರ್‍ಗಳಿಗೆ ಕಳುಹಿಸಲಾಗಿದೆ. ಸೋಂಕಿತರಲ್ಲಿ ಕೆಎಸ್‍ಆರ್‍ಟಿಸಿ ತುಮಕೂರಿನ ಸರ್ಕಾರಿ ಅಧಿಕಾರಿ ಒಬ್ಬರು, ರೋಗ ಲಕ್ಷಣ ಸಹಿತ ಪಾಸಿಟಿವ್ ಇರುವ 11 ಮಂದಿ, ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿರುವ ಇಬ್ಬರು, ದ್ವಿತೀಯ ಸಂಪರ್ಕದ ಒಬ್ಬರು, 10 ಮಂದಿ ಪೊಲೀಸರು, ಓರ್ವ ಜೈಲುವಾಸಿ ಸೇರಿದ್ದಾರೆ.
ಹೊಸ ಸೋಂಕಿತರ ಪೈಕಿ 10 ಮಂದಿ ಪೊಲೀಸರು ಇರುವುದರಿಂದ ತುಮಕೂರು ನಗರ, ಗ್ರಾಮಾಂತರ ಹಾಗೂ ಬಾರ್‍ಲೈನ್ ರಸ್ತೆಯ ಪೊಲೀಸ್ ಕ್ವಾರ್ಟಸ್‍ನ್ನು ಸೀಲ್‍ಡೌನ್ ಮಾಡಲಾಗಿದ್ದು, ಸಂಪೂರ್ಣ ಸ್ಯಾನಿಟೈಸರ್ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ