ವಾರ್ಡ್ ಸಮಿತಿ: 554 ಅರ್ಜಿ ಸ್ವೀಕಾರ

ತುಮಕೂರು
     ತುಮಕೂರು ಮಹಾನಗರ ಪಾಲಿಕೆಯ 35 ವಾರ್ಡ್‍ಗಳ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿ ರಚಿಸುವ ಸಂಬಂಧ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸ್ವೀಕಾರಕ್ಕೆ ಕೊನೆಯ ದಿನವಾಗಿದ್ದ ಜ.21 ರ ಸಂಜೆಯವರೆಗೆ ಪಾಲಿಕೆಗೆ ಒಟ್ಟು 554 ಅರ್ಜಿಗಳು ಸ್ವೀಕೃತವಾಗಿವೆ. 
    ಈ ಮೊದಲು ಜ.10 ರಂದು ಪಾಲಿಕೆ ಆಯುಕ್ತ ಟಿ.ಭೂಬಾಲನ್ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಅರ್ಜಿ ಸಲ್ಲಿಕೆಗೆ ಜ.17 ರ ಸಂಜೆಯವರೆಗೂ ಕಾಲಾವಕಾಶ ನೀಡಿದ್ದರು. ಆದರೆ ಸಾರ್ವಜನಿಕರ ಕೋರಿಕೆ ಮೇರೆಗೆ ಮತ್ತೊಂದು ಪ್ರಕಟಣೆ ಹೊರಡಿಸಿ, ಅರ್ಜಿ ಸಲ್ಲಿಕೆಗೆ ಜ.21 ರವರೆಗೆ ಕಾಲಾವಕಾಶ ನೀಡಿದ್ದರು. ಈ ಅವಧಿಯಲ್ಲಿ 554 ಅರ್ಜಿಗಳು ಸಂದಾಯವಾಗಿವೆ.
    ಪ್ರತಿ ವಾರ್ಡ್‍ನಲ್ಲೂ ಆಯಾ ವಾರ್ಡ್‍ನ ಕಾರ್ಪೊರೇಟರ್ ಅಧ್ಯಕ್ಷತೆಯಲ್ಲಿ ವಾರ್ಡ್ ಸಮಿತಿ ರಚನೆಯಾಗಲಿದೆ. ಈ ಸಮಿತಿಯಲ್ಲಿ ಸಾಮಾಜಿಕ ನ್ಯಾಯಕ್ಕನುಗುಣವಾಗಿ ಎಲ್ಲ ವರ್ಗಗಳಿಂದ ಒಟ್ಟಾರೆ 10 ಜನ ಸದಸ್ಯರುಗಳು ಇರುತ್ತಾರೆ. ಇದೀಗ ಈ ಸಮಿತಿಗೆ ಅರ್ಜಿ ಸಲ್ಲಿಸಿರುವ ನಾಗರಿಕರ ಪೈಕಿ 10 ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಬೇಕಾಗಿದೆ. ಈ ಆಯ್ಕೆ ಹೇಗೆ ನಡೆಯುತ್ತದೆಂಬ ಕುತೂಹಲ ಅರ್ಜಿದಾರರಲ್ಲಿ ಉಂಟಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link