ಇತರೆ ಪಕ್ಷಗಳು, ಪಕ್ಷೇತರರು ಪಡೆದ ಮತಗಳು 55648

ತುಮಕೂರು:

    ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು 596127 ಮತಗಳನ್ನು ಪಡೆದು ಜಯಶಾಲಿಯಾಗಿದ್ದರೆ, ತಮ್ಮ ಸಮೀಪದ ಸ್ಪರ್ಧಿ ಹೆಚ್.ಡಿ.ದೇವೇಗೌಡ ಅವರು ಪಡೆದ ಮತಗಳು 582788. ಜಿ.ಎಸ್.ಬಸವರಾಜು 12370 ಮುನ್ನಡೆಯ ಮತಗಳನ್ನು ಪಡೆದಿದ್ದಾರೆ.

      ಬಿಜೆಪಿ ಹಾಗೂ ಮೈತ್ರಿ ಅಭ್ಯರ್ಥಿಗಳಲ್ಲದೆ ಇತರೆ ಪಕ್ಷಗಳು ಹಾಗೂ ಪಕ್ಷೇತರರಾಗಿ ಒಟ್ಟು 15 ಮಂದಿ ಕಣದಲ್ಲಿದ್ದರು (ಬಿಜೆಪಿ ಮೈತ್ರಿ ಅಭ್ಯರ್ಥಿ ಸೇರಿಕೊಂಡಂತೆ). ಇವರಲ್ಲಿ ಅತಿ ಹೆಚ್ಚಿನ ಮತಗಳನ್ನು ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾದಿಂದ ಸ್ಪರ್ಧಿಸಿದ್ದ ಕಮ್ಯುನಿಷ್ಟ್ ಮುಖಂಡ ಎನ್.ಶಿವಣ್ಣ 17227 ಪಡೆದಿದ್ದಾರೆ. ಕಾರ್ಮಿಕ ಸಂಘಟನೆಗಳನ್ನೊಳಗೊಂಡ ಪಕ್ಷವಾಗಿರುವ ಸಿಪಿಐ ಮತ್ತು ಸಿಪಿಎಂಗೆ ಜಿಲ್ಲೆಯಾದ್ಯಂತ ಶಾಖೆಗಳಿವೆ. ಅವರ ಲೆಕ್ಕಾಚಾರದಂತೆ ಕನಿಷ್ಠ 50 ಸಾವಿರ ಮತಗಳಾದರೂ ಬರಬೇಕಿತ್ತು. ಆದರೆ ಬಹುಪಾಲು ಕಾರ್ಮಿಕರ ಮತಗಳು ಅನ್ಯ ಪಕ್ಷಗಳಿಗೆ ಹಂಚಿ ಹೋಗಿವೆ.

       ಎನ್. ಶಿವಣ್ಣ ಅವರನ್ನು ಹೊರತುಪಡಿಸಿದರೆ ಉಳಿದಂತೆ ಪಕ್ಷೇತರರಲ್ಲಿ ಅತಿ ಹೆಚ್ಚು ಮತ ಪಡೆದಿರುವವರು ಟಿ.ಬಿ.ಸಿದ್ದರಾಮೇಗೌಡ. ಇವರು 7637 ಮತಗಳನ್ನು ಪಡೆದಿದ್ದಾರೆ. ಬಹುಜನ ಸಮಾಜ ಪಾರ್ಟಿಯ ಹನುಮಂತರಾಯ ಅವರು 6013, ಉತ್ತಮ ಪ್ರಜಾಕೀಯ ಪಾರ್ಟಿಯ ಛಾಯಾ ರಾಜಶಂಕರ್ 4398, ಅಂಬೇಡ್ಕರ್ ಸಮಾಜ್ ಪಾರ್ಟಿಯ ಮಹಾಲಕ್ಷ್ಮೀ ಸಿ.ಪಿ. 4211, ಪಕ್ಷೇತರರಾದ ಕಪನಿಗೌಡ 1136, ಟಿ.ಎನ್.ಕುಮಾರಸ್ವಾಮಿ 2566, ಜಿ.ನಾಗೇಂದ್ರ 3050, ಪ್ರಕಾಶ್ ಆರ್.ಎ.ಜೈನ್ 1277, ಬಿ.ಎಸ್. ಮಲ್ಲಿಕಾರ್ಜುನಯ್ಯ 1269, ಡಿ.ಶರದಿಶಯನ 1452, ಕೆ.ವಿ.ಶ್ರೀನಿವಾಸ್ ಕಲ್ಕೆರೆ 1959, ಜೆ.ಕೆ.ಸಮಿ 3453 ಮತಗಳನ್ನು ಪಡೆದಿದ್ದಾರೆ.

       ತುಮಕೂರು ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು 1608545 ಮತದಾರರಿದ್ದು, ಇದರಲ್ಲಿ 1234563 ಮತಗಳು ಚಲಾವಣೆಯಾಗಿವೆ. ನೋಟಾಗೆ 10295 ಮತಗಳು ಲಭ್ಯವಾಗಿವೆ. 611 ಮತಗಳು ತಿರಸ್ಕತಗೊಂಡಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap