ಸಾಗುವಾನಿ ಮರ ಕಳ್ಳ ಸಾಗಾಣಿಕೆ : 6 ಜನರ ಬಂಧನ

ಹಾನಗಲ್ಲ :

     ತಾಲೂಕಿನ ಗಡಿಯಂಕನಹಳ್ಳಿ ಗ್ರಾಮದ ವಂಶಿ ಫಾರ್ಮಹೌಸ್‍ನಲ್ಲಿ ಕತ್ತರಿಸಿಡಲಾಗಿದ್ದ ಲಕ್ಷಾಂತರ ರೂಗಳ ಮೌಲ್ಯದ 60 ಸಾಗವಾನಿ ಕಟ್ಟಿಗೆ ತುಂಡುಗಳನ್ನು ರಾತ್ರಿ ಸಮಯದಲ್ಲಿ ಕಳವು ಮಾಡಿದ್ದ 6 ಜನರ ತಂಡವನ್ನು ಹಾನಗಲ್ಲ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

    ಗಡಿಯಂಕನಹಳ್ಳಿ ಗ್ರಾಮದ ಆರೋಪಿಗಳಾದ ಮಾಲತೇಶ ನೀಲಪ್ಪ ಹರಿಜನ, ಮಲ್ಲೇಶಪ್ಪ ಚನಬಸಪ್ಪ ಕಳಲಿ, ಮಾಲತೇಶ ತಿಪ್ಪಣ್ಣ ಮನ್ನೂರ, ಅಭಿಷೇಕ ಪರಶುರಾಮ ಹರಿಜನ, ಕುಮಾರ ಹಾಲಪ್ಪ ಬಾರ್ಕಿ, ಕಾಳಪ್ಪ ಮಾನಪ್ಪ ಬಡಿಗೇರ ಬಂಧಿತ ಆರೋಪಿಗಳು. ಹಾವೇರಿ ನಿವಾಸಿ ಆರ್.ಪ್ರತಾಪ್ ಎಂಬುವವರಿಗೆ ಸೇರಿದ ಗಡಿಯಂಕನಹಳ್ಳಿ ಗ್ರಾಮದ ವಂಶಿ ಫಾರ್ಮನಲ್ಲಿ ಸಾಗವಾನಿ ಗಿಡಗಳನ್ನು ಕತ್ತರಿಸಿಡಲಾಗಿತ್ತು . ಸೆ.24 ರಂದು ರಾತ್ರಿ ಆರೋಪಿಗಳು ಸುಮಾರು 60 ನಾಟಾಗಳನ್ನು ಕದ್ದೊಯ್ದಿದ್ದರು.

    ಈ ಕುರಿತು ಹಾನಗಲ್ಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಿಪಿಐ ಶಿವಶಂಕರ ಗಣಾಚಾರಿ ಅವರ ನೇತೃತ್ವದಲ್ಲಿ ಪಿಎಸ್‍ಐ ಶ್ರೀಶೈಲ ಪಟ್ಟಣಶೆಟ್ಟಿ, ಸಿಬ್ಬಂದಿಗಳಾದ ಮಹೇಶ ಹೊರಕೇರಿ, ಕಿರಣ ಸಣ್ಣಗೌಡರ, ಜುಂಜಪ್ಪ ವಗ್ಗಣ್ಣನವರ, ಆನಂದ ಪಾಟೀಲ, ಆರ್.ಆರ್.ಬಳ್ಳಾರಿ, ಪಿ.ಬಿ.ಹೊಸಮನಿ, ಹನುಮಂತ ಜನಗೇರಿ, ಈರಣ್ಣ ಲಂಗೋಟಿ ಅವರನ್ನೊಳಗೊಂಡ ತಂಡ ಪ್ರಕರಣವನ್ನು ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ, ಕಟ್ಟಿಗೆಯನ್ನು ಒಶಪಿಸಿಕೊಂಡಿದ್ದಾರೆ. ಕಟ್ಟಿಗೆಯನ್ನು ಕಳ್ಳತನ ಮಾಡಿದ ಐವರು ಹಾಗೂ ಕಟ್ಟಿಗೆಯನ್ನು ಖರೀದಿಸಿದ್ದ ಕಾಳಪ್ಪ ಬಡಿಗೇರ ಸಹಿತ ಆರು ಜನ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link