ದಾವಣಗೆರೆ:
ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಗಾಂಗಾ ಮಾರಾಟ ಮಾಡುತ್ತಿದ್ದ ಮಹಿಳೆಯು ಸೇರಿದಂತೆ ಆರು ಜನ ಆರೋಪಿಗಳನ್ನು ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರನ್ನು ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಜಾದ ನಗರ ನಿವಾಸಿ ಸೈಯದ್ ಖುದ್ದೂಸ್ ಅಲಿಯಾಸ್ ಲಂಗಡು, ಹುಬ್ಬಳ್ಳಿ ನಿವಾಸಿ ಗಿರಿಧರ್ ಅಲಿಯಾಸ್ ಗಿರೀಶ್, ಚಿತ್ರದುಗ್ ಜಿಲ್ಲೆಉ ಸುಲ್ತಾನಿಪುರ ನಿವಾಸಿ ಶ್ರೀಮತಿ ಚಮನ್.ಬಿ, ದಾವಣಗೆರೆ ಗಾಂಧಿ ನಗರ ನಿವಾಸಿ ಅಮಜದ್ ಖಾನ್, ಬೇತೂರು ರಸ್ತೆ ನಿವಾಸಿ ಸಿಖಂದರ್ ಅಲಿಯಾಸ್ ಮಂಗೂಸ್, ಶಿವನಗರ ನಿವಾಸಿ ಸೈಯದ್ ಚಾಂದ್‍ಪೀರ್ ಅಲಿಯಾಸ್ ಗೂಸ್ ಬಂಧಿತರಾಗಿದ್ದು, ಇವರಿಂದ 4 ಸಾವಿರ ರೂ. ಮೌಲ್ಯದ 250 ಗ್ರಾಂ ಗಾಂಜಾ ಸೊಪ್ಪು, 1 ಆಕ್ಟಿವ್ ಹೊಂಡಾ, ನಾಲ್ಕು ಮೊಬೈಲ್‍ಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಜಿಎಂಐಟಿ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಚೇತನ್ ಆರ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜಿ.ಉದೇಶ್ ಮಾರ್ಗದರ್ಶನದಲ್ಲಿ ಡಿಸಿಆರ್‍ಬಿ ಡಿವೈಎಸ್‍ಪಿ ಗೋಪಾಲ್ ಕೃಷ್ನ ಬಿ ಗೌಡರ್ ನೇತೃತ್ವದಲ್ಲಿ ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ., ಹಾಗೂ ಸಿಬ್ಬಂದಿಗಳಾದ ಹೆಚ್.ಪ್ರಕಾಶ್, ರವಿ ವೈ.ಬಿ, ಪ್ರಕಾಶ್‍ರಾವ್, ಈಶ್ವರಪ್ಪ, ಸುರೇಶ್‍ಬಾಬು, ವೀರಭದ್ರಪ್ಪ, ರಮೇಶ್, ಲೋಹಿತ್ ಎಸ್, ಮಂಜುನಾಥ ಇ.ಎಚ್, ಮಾರುತಿ ಬಿ,, ಆನಂದ ಬಿ, ಅನಂದ ಸಿ., ಸಂಗೇನಹಳ್ಳಿ ದೇವರಾಜ್, ಮಂಜುನಾಥ ಮಠೋಳಿ, ಕೊಟ್ರೇಶ್ ಅವರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ