6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಹೊಳಲ್ಕೆರೆ:

       ಹೊಳಲ್ಕೆರೆ ತಾಲೂಕಿನ ಶಿವಪುರ ಗ್ರಾಮದಲ್ಲಿ ಜ.31 ರಂದು ನಡೆಯಲಿರುವ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಸಾಹಿತಿ, ಲೇಖಕ, ಅನುವಾದಕಾರ ಡಾ.ಎಚ್.ಶಿವಲಿಂಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ ತಿಳಿಸಿದರು.ತಾಲೂಕಿನ ಕುಡಿನೀರಕಟ್ಟೆ ಬಳಿಯ ಒಂಟಿಕಂಬದ ಮಠದಲ್ಲಿ ತಾಲೂಕು ಕಸಾಪ ಸಮಿತಿ ಹಮ್ಮಿಕೊಂಡಿದ್ದ ಸಮ್ಮೇಳನಾಧ್ಯಕ್ಷರ ಆಯ್ಕೆ ಸಭೆಯಲ್ಲಿ ಮಾತನಾಡಿದರು.

        ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಆಯ್ಕೆ ಸಂದರ್ಭದಲ್ಲಿ 10 ಜನ ಸಾಹಿತಿಗಳ ಹೆಸರುಗಳು ಪ್ರಸ್ತಾಪಕ್ಕೆ ಬಂದಿದ್ದವು. ಈ ಸಂದರ್ಭದಲ್ಲಿ ಆಯ್ಕೆ ತುಂಬ ಕ್ಲಿಸ್ಟಕರವಾಗಿತ್ತಾದರೂ ಸಾಕಷ್ಟು ಪರಿಶೀಲನೆ ನಡೆಸಿ, ಸಾಹಿತ್ಯ ಹಾಗೂ ಇತರೆ ಕ್ಷೇತ್ರದಲ್ಲಿ ಅತಿ ಹೆಚ್ಚು ಶ್ರಮಿಸಿದವರನ್ನು ಪರಿಗಣನೆ ಮಾಡಲಾಯಿತು. ಡಾ.ಎಚ್.ಶಿವಲಿಂಗಪ್ಪ ಅವರು ಸಾಹಿತಿಗಳಾಗಿ, ಲೇಖಕರಾಗಿ, ಅನುವಾದಕಾರರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಪರೀಕ್ಷಾ ಮಂಡಳಿಯಲ್ಲಿ 3 ಬಾರಿ ಸದಸ್ಯರಾಗಿ, 3 ಬಾರಿ ಚೇರ್ಮನ್ ಆಗಿ ಕಾರ್ಯನಿರ್ವಹಿಸಿದ್ದು, ಸಮಿತಿಯ ಸದಸ್ಯರ ಸರ್ವಾನುಮತದ ಆಯ್ಕೆಯಲ್ಲಿ ಅಧ್ಯಕ್ಷರ ಆಯ್ಕೆ ಮಾಡಲಾಯಿತು ಎಂದರು.

       ತಾಲೂಕು ಕಸಾಪ ಅಧ್ಯಕ್ಷ ಲೋಕೇಶ್ ಮಾತನಾಡಿ, ಡಾ.ಎಚ್.ಶಿವಲಿಂಗಪ್ಪ ಅವರು 1990ರ ಗಣರಾಜ್ಯೋತ್ಸವದ ದೆಹಲಿ ಸಮಾರಂಭದಲ್ಲಿ ಕರ್ನಾಟಕ-ಗೋವಾ ರಾಜ್ಯಗಳ ಎನ್‍ಸಿಸಿ ಡೈರಕ್ಟರೇಟ್ ಪರವಾಗಿ ಕಂಟಿನ್‍ಜೆಂಟ್ ಕಮಾಂಡರ್ ಆಗಿ ಕೆಲಸ ಮಾಡಿದ್ದು, 10 ವರ್ಷಗಳಲ್ಲಿ 23 ಅತ್ಯುತ್ತಮ ಪಾರಿತೋಷಕವನ್ನು ತಂದುಕೊಟ್ಟ ಕೀರ್ತಿ ಅವರಿಗಿದೆ. ಹೀಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಅವರ ಅನೇಕ ಸಾಧನೆಗಳನ್ನು ಗುರುತಿಸಿ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link