ಬೆಂಗಳೂರು:
ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸಲಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಗುರುವಾರ ಬೆಳಗ್ಗೆಯಿಂದ ಮತದಾನ ನಡೆಯುತ್ತಿದ್ದು, ಮಧ್ಯಾಹ್ನದ ನಂತರ ಮತದಾನ ಚುರುಕುಗೊಂಡಿದೆ.
ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾಗಿರುವ ಮತದಾನ ಸಂಜೆ 5 ಗಂಟೆಯವರೆಗೆ ಒಟ್ಟು ಶೇ.60 ರಷ್ಟು ಮತದಾನವಾಗಿದೆ
ಅಥಣಿ- ಶೇ.70.73,ಕಾಗವಾಡ- ಶೇ.69.76 ,ಗೋಕಾಕ್- ಶೇ.66.64,ಯಲ್ಲಾಪುರ- ಶೇ.72.23 ,ಹಿರೇಕೆರೂರು- ಶೇ.72.42,ರಾಣೇಬೆನ್ನೂರು- ಶೇ.67.92,ವಿಜಯನಗರ- ಶೇ.59.93 ,ಚಿಕ್ಕಬಳ್ಳಾಪುರ- ಶೇ.79.08,ಕೆ.ಆರ್ ಪುರಂ- ಶೇ.37.05,ಯಶವಂತಪುರ- ಶೇ.48.34 ,ಮಹಾಲಕ್ಷ್ಮಿ ಲೇಔಟ್- ಶೇ.40.47,ಶಿವಾಜಿನಗರ- ಶೇ.41.13 ,ಹೊಸಕೋಟೆ- ಶೇ.76.19,ಕೆ.ಆರ್ ಪೇಟೆ- ಶೇ.75.87
ಹುಣಸೂರು- ಶೇ.74.47
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ