ತುಮಕೂರು:
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ದಿನಾಂಕ: 14/10/2018 ರಂದು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 62ನೇ ಬೌದ್ಧ ಧಮ್ಮ ದೀಕ್ಷಾ ಮಹೋತ್ಸವವನ್ನು ತುಮಕೂರು ನಗರದ ಟೌನ್‍ಹಾಲ್‍ನಲ್ಲಿ 10.30 ಗಂಟೆಗೆ ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಬಿ.ಎಸ್.ದಿನೇಶ್, ಅಸ್ಪøಶ್ಯತೆ ಆಚರಣೆಯಿಂದ ಹಿಂದೂ ಧರ್ಮದ ಬಗ್ಗೆ ಮನನೊಂದಿದ್ದ ಅಂಬೇಡ್ಕರ್ ಅವರು ವಿಚಾರವಾದಿ ಗೌತಮ ಬುದ್ಧನ ವಿಚಾರಗಳಿಂದ ಪ್ರಭಾವಿತರಾಗಿ ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ 62 ವರ್ಷಗಳ ಹಿಂದೆಯೇ ಬೌದ್ಧ ಧರ್ಮ ಸ್ವೀಕರಿಸುವ ಮೂಲಕ ಹೊಸ ಚಳವಳಿಗೆ ನಾಂದಿ ಹಾಡಿದರು.
ಅಂದು ದೇಶದಲ್ಲಿ ಎಲ್ಲೆ ಮೀರಿದ್ದ ಜಾತಿ, ಸಂಪ್ರದಾಯ, ಆಚಾರಗಳು ದೇಶದ ತುಳಿತಕ್ಕೊಳಗಾದ ಸಮುದಾಯಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿಯಿಂದ ಬೇಸತ್ತಿದ್ದ ಅಂಬೇಡ್ಕರ್ ಹಿಂದೂವಾಗಿ ಹುಟ್ಟಿದ್ದರೂ ಹಿಂದುವಾಗಿ ನನ್ನ ಜೀವನ ಅಂತ್ಯಗೊಳಿಸಲು ನನಗೆ ಇಷ್ಟವಿಲ್ಲ, ಹಾಗಾಗಿ ಬೌದ್ಧ ಧರ್ಮವನ್ನು ಸ್ವೀಕರಿಸಿ ಬೌದ್ಧ ಧರ್ಮದ ಮೂಲಕ ಮೋಕ್ಷ ಪಡೆಯುತ್ತೇನೆ ಎಂದು ಹೇಳಿದ ವಿಚಾರಗಳನ್ನು ಕಾರ್ಯಕ್ರಮಗಳಲ್ಲಿ ನೆನೆಪಿಸಿಕೊಂಡರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡಿ, ಬಾಬಾ ಸಾಹೇಬ್ ಅವರು ಅಸ್ಪಶ್ಯತೆಯಿಂದ ನೊಂದು ಎಲ್ಲ ಧರ್ಮಗಳ ಬಗ್ಗೆ ಅರಿತು, ಬೌದ್ಧ ಧರ್ಮದಲ್ಲಿದ್ದ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಅರ್ಥಮಾಡಿಕೊಂಡ ಅಂಬೆಡ್ಕರ್ ಅವರು ಹಿಂದು ಧರ್ಮದ ಮೇಲು-ಕೀಳು ಎನ್ನುವ ಸಾಮಾಜಿಕ ಅಸಮಾನತೆಯನ್ನು ಹೊಗಲಾಡಿಸಲು ಎಷ್ಟೇ ಪ್ರಯತ್ನ ಪಟ್ಟರೂ ಪ್ರಯೋಜನವಿಲ್ಲ ಎನ್ನುವುದನ್ನು ಮನಗಂಡು, ದೇಶ ಸ್ವಾತಂತ್ರ್ಯಗೊಂಡ 9 ವರ್ಷಗಳಲ್ಲೇ ಅಂದರೆ 14/10/1956ರಂದು ಬೌದ್ಧ ಧರ್ಮ ದೀಕ್ಷೆ ಪಡೆದರು ಅಂದಿನ ಪರಿಸ್ಥಿತಿ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಎಸ್‍ಸಿ/ಎಸ್‍ಟಿ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣ, ಕೆ.ಗೋವಿಂದರಾಜು, ಸಿ.ಭಾನುಪ್ರಕಾಶ್, ಸಿದ್ದಲಿಂಗಯ್ಯ, ಛಲವಾದಿ ಶೇಖರ್, ಜಿ.ಆರ್.ಸುರೇಶ್, ಮಾರುತಿ ಪ್ರಸಾದ್, ಜಿ.ಆರ್.ಗಿರೀಶ್, ಎನ್.ಬಿ.ಸೋಮಶೇಖರ್, ಹೆಚ್.ವಿ.ರಾಜೇಶ್, ಪಿ.ಎನ್.ರಾಮಯ್ಯ, ಶಿವಾಜಿ.ಪಿ, ನಾಗೇಶ್, ಸಿದ್ದರಾಜು.ಕೆ.ಜಿ, ರೆಡ್ಸ್ ರಂಗಯ್ಯ, ಎ.ರಂಜನ್, ರಾಜಣ್ಣ.ಡಿ, ಮಾರುತಿ ಇತರರು ಭಾಗವಹಿಸಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ