ಬೆಂಗಳೂರು:
ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು 1 ಸಾವಿರದ 512 ಫ್ಲೈಯಿಂಗ್ ಸ್ಕ್ವಾಡ್, 1 ಸಾವಿರದ 837 ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು ಕಾರ್ಯನಿರ್ವಹಿಸುತ್ತಿದೆ.ಇದುವರೆಗೆ ಎಲ್ಲಾ ತಂಡಗಳಿಂದ 62 ಕೋಟಿ ರೂಪಾಯಿ ಮೊತ್ತದ ನಗದು, ಇತರೆ ಮದ್ಯೆ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
320 ಅಬಕಾರಿ ತಂಡಗಳು ಹಾಗೂ 180 ವಾಣಿಜ್ಯ ತೆರಿಗೆ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟಾರೆ 95 ಸಾವಿರ ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 8 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು, 8 ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಪಡಿಸಲಾಗಿದೆ, ಮತದಾರರ ಸಹಾಯವಾಣಿ ಮೂಲಕ 58 ಸಾವಿರ ಮತದಾರರು ಮಾಹಿತಿ ಕೋರಿದ್ದಾರೆ, ಸಿ ವಿಜಿಲ್ ಅಪ್ಲಿಕೇಷನ್ ಮೂಲಕ 1 ಸಾವಿರದ 600 ದೂರುಗಳನ್ನು ಸ್ವೀಕರಿಸಲಾಗಿದ್ದು. 432 ದೂರುಗಳು ನಿಜವಂದು ಕಂಡುಬಂದಿದ್ದು ಸೂಕ್ತಕ್ರಮ ಜರುಗಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/money.gif)