ಬೆಂಗಳೂರು
ಸುಪ್ರೀಂಕೊರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು, ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವ, ಹಿರಿಯ ಪತ್ರಕರ್ತರಾದ ಜಿ.ಎನ್.ರಂಗನಾಥ್ ರಾವ್, ಬಸವರಾಜ ಸ್ವಾಮಿ, ಚಿತ್ರನಟ ಜೈಜಗದೀಶ್, ಖ್ಯಾತ ನಿರ್ದೇಶಕ ಭಾರ್ಗವ, ಯಕ್ಷಗಾನ ಕಲಾವಿದ ಹಿರಿಯಡ್ಕ ಗೋಪಾಲರಾವ್ ಸೇರಿದಂತೆ 63 ಸಾಧಕರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ರಿವಾಜಿನಂತೆ ಪ್ರತಿವರ್ಷ ನ.1ರಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ರಾಜ್ಯದಲ್ಲಿ ನಡೆದ ಐದು ಉಪಚುನಾವಣೆಗಳ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಕಾರಣದಿಂದ ಪ್ರಶಸ್ತಿ ಪ್ರಕಟವಾಗಿರಲಿಲ್ಲ.
ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಈ ರೀತಿ ಇದೆ-
ಸಾಹಿತ್ಯ – ಎಂ.ಎಸ್.ಪ್ರಭಾಕರ (ಕಾಮರೂಪಿ), ಹಸನ್ ನಯೀಂ ಸುರಕೋಡ್, ಚ.ಸರ್ವಮಂಗಳ, ಚಂದ್ರಶೇಖರ ತಾಳ್ಯ
ರಂಗಭೂಮಿ- ಎಸ್.ಎನ್. ರಂಗಸ್ವಾಮಿ, ಪುಟ್ಟಸ್ವಾಮಿ, ಪಂಪಣ್ಣ ಕೋಗಳಿ
ಸಂಗೀತ- ಅಣ್ಣು ದೇವಾಡಿಗ
ನೃತ್ಯ- ಎಂ.ಆರ್.ಕೃಷ್ಣಮೂರ್ತಿ
ಜಾನಪದ- ಗುರುವ ಕೊರಗ, ಗಂಗ ಹುಚ್ಚಮ್ಮ, ಚನ್ನಮಲ್ಲೇಗೌಡ, ಶರಣಪ್ಪ ಬೂತೇರ, ಶಂಕ್ರಮ್ಮ ಮಹಾದೇವಪ್ಪಾ, ಬಸವರಾಜ ಅಲಗೂಡ, ಚೂಡಾಮಣಿ ರಾಮಚಂದ್ರ
ಶಿಲ್ಪಕಲೆ- ಯಮನಪ್ಪ ಚಿತ್ರಗಾರ, ಬಸಣ್ಣ ಕಾಳಪ್ಪ ಕಂಚಗಾರ
ಚಿತ್ರಕಲೆ- ಬಸವರಾಜ ರೇವಣ್ಣ ಸಿದ್ದಪ್ಪ ಉಪ್ಪಿನ
ಕ್ರೀಡೆ- ಕೆನೆತ್ ಪೊವೆಲ್, ವಿನಯ ವಿ.ಎಸ್, ಚೇತನ್ ಆರ್
ಯಕ್ಷಗಾನ -ಹಿರಿಯಡ್ಕ ಗೋಪಾಲರಾವ್, ಸೀತಾರಾಮ ಕುಮಾರ ಕಟೀಲು
ಬಯಲಾಟ- ಯಲ್ಲವ್ವಾ ರೊಡ್ಡಪ್ಪನವರ, ಭೀಮರಾಯ ಬೋರಗಿ
ಚಲನಚಿತ್ರ- ಭಾರ್ಗವ, ಜೈಜಗದೀಶ್, ರಾಜನ್, ದತ್ತರಾಜ್
ಶಿಕ್ಷಣ- ಗೀತಾ ರಾಮಾನುಜಂ, ಎ.ವಿ.ಎಸ್ ಮೂರ್ತಿ, ಡಾ. ಕೆ.ಪಿ.ಗೋಪಾಲಕೃಷ್ಣ, ಶಿವಾನಂದ ಕೌಜಲಗಿ
ಇಂಜಿನಿಯರಿಂಗ್- ಪ್ರೊ. ಸಿ.ಇ.ಜಿ.ಜಸ್ಟೋ
ಸಂಕೀರ್ಣ- ಆರ್.ಎಸ್.ರಾಜಾರಾಂ, ಮೇಜರ್ ಪ್ರದೀಪ್ ಆರ್ಯ, ಸಿ.ಕೆ.ಜೋರಾಪುರ, ನರಸಿಂಹಯ್ಯ, ಡಿ.ಸುರೇಂದ್ರಕುಮಾರ್, ಶಾಂತಪ್ಪನವರ್ ಪಿ.ಬಿ, ನಮಶಿವಾಯಂ ರೇಗುರಾಜ್, ಪಿ.ರಾಮದಾಸ್, ಎಂ.ಜೆ.ಬ್ರಹ್ಮಯ್ಯ
ಪತ್ರಿಕೋದ್ಯಮ- ಜಿ.ಎನ್.ರಂಗನಾಥರಾವ್, ಬಸವರಾಜಸ್ವಾಮಿ, ಅಮ್ಮೆಂಬಳ ಆನಂದ
ಸಹಕಾರ- ಸಿ.ರಾಮು
ಸಮಾಜಸೇವೆ-ಆನಂದ್ ಸಿ.ಕುಂದರ್, ರಾಚಪ್ಪ ಹಡಪದ, ಕೃಷ್ಣಕುಮಾರ ಪೂಂಜ, ಮಾರ್ಗರೇಟ್ ಆಳ್ವ
ಕೃಷಿ- ಮಹಾದೇವಿ ಅಣ್ಣಾರಾವ ವಣದೆ, ಮೂಕಪ್ಪ ಪೂಜಾರ್
ಪರಿಸರ – ಕಲ್ಮನೆ ಕಾಮೇಗೌಡ
ಸಂಘ ಸಂಸ್ಥೆ- ರಂಗದೊರೆ ಸ್ಮಾರಕ ಆಸ್ಪತ್ರೆ
ವೈದ್ಯಕೀಯ- ಡಾ.ನಾಡಗೌಡ ಜೆ.ವಿ, ಡಾ.ಸೀತಾರಾಮ ಭಟ್ , ಪಿ.ಮೋಹನ್‍ರಾವ್, ಡಾ.ಎಂ.ಜಿ.ಗೋಪಾಲ್
ನ್ಯಾಯಾಂಗ -ಎಚ್.ಎಲ್.ದತ್ತು
ಹೊರನಾಡು- ಡಾ.ಎ.ಎ.ಶೆಟ್ಟಿ
ಸ್ವಾತಂತ್ರ ಹೋರಾಟಗಾರರು-ಬಸವರಾಜ ಬಿಸರಳ್ಳಿ