ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಶೇ. 65 ರಷ್ಟು ಮತದಾನ

ಬೆಂಗಳೂರು

       ದೇಶದಾದ್ಯಂತ ಮೂರನೇ ಹಂತದ ರಾಜ್ಯದ ಎರಡನೇ ಹಂತದ ಮತದಾನ ಬಹುತೇಕ ಮುಕ್ತಾಯಗೊಂಡಿದೆ. ಮಳೆ, ಗಲಾಟೆ, ಕೈಕೊಟ್ಟ ಮತಯಂತ್ರದ ನಡುವೆ ಮತದಾನ ಮುಕ್ತಾಯಗೊಂಡಿದೆ. ರಾಜ್ಯದಲ್ಲಿ ಶೇ. 65 ರಷ್ಟು ಮತದಾನವಾಗಿದೆ.

        ಕೆಲವೆಡೆ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಉಳಿದೆಡೆ ಶಾಂತಿಯುತ ಮತದಾನ ನಡೆದಿದೆ. ಬೆಳಗ್ಗೆ ಚುರುಕಿನಿಂದ ನಡೆದ ಮತದಾನ, ಮಧ್ಯಾಹ್ನ ಬಿರು ಬಿಸಿಲಿನ ಪರಿಣಾಮ ಮಂದಗತಿಯಲ್ಲಿ ಸಾಗಿತ್ತು. ಸಂಜೆಯ 6 ಗಂಟೆಯ ವೇಳೆಗೆ ಮತದಾನ ಕೊನೆಗೊಡಿದ್ದು. ಮತದಾನದ ಪ್ರಮಾಣ ಶೇ.65ರಷ್ಟು ದಾಟಿತ್ತು.

         ಅಲ್ಲಲ್ಲಿ ಕೈಕೊಟ್ಟ ಮತ ಯಂತ್ರ, ಹಲವೆಡೆ ಕೆಲ ಕಾಲ ಮತದಾನ ಸ್ಥಗಿತ, ಕೆಲವೆಡೆ ತಡವಾಗಿ ಆರಂಭವಾದ ಮತದಾನ, ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಸೇರಿದಂತೆ ಸಣ್ಣ ಪುಟ್ಟ ಗೊಂದಲ ಹೊರತುಪಡಿಸಿದರೆ ರಾಜ್ಯದ ಎರಡನೇ ಹಂತದ ಮತದಾನ ಶಾಂತಿಯುತವಾಗಿ ನಡೆದಿದೆ. ಭಾರತದ ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಸಂಜೆ ವೇಳೆಗೆ ಒಟ್ಟು ಶೇ.65 ರಷ್ಟು ಮತದಾನವಾಗಿದ್ದು, ಪೂರ್ಣ ಮಾಹಿತಿ ಬಂದ ನಂತರ ಮತದಾನದ ಪ್ರಮಾಣ ಮತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

         ಪ್ರಜಾಪ್ರಭುತ್ವದ ಹಬ್ಬವೆಚಿದೇ ಕರೆಯಲ್ಪಡುವ ಈ ಚುನಾವಣೆಯಲ್ಲಿ ಮತದಾರ ಪ್ರಭು ಘಟಾನುಘಟಿ ನಾಯಕರುಗಳಾದ ಮಲ್ಲಿಕಾರ್ಜುನಖರ್ಗೆ, ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್, ಹಿರಿಯ ನಾಯಕರುಗಳಾದ ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ, ಪ್ರಕಾಶ್ ಹುಕ್ಕೇರಿ ಸೇರಿದಂತೆ 237 ಅಭ್ಯರ್ಥಿಗಳ ರಾಜಕೀಯ ಭವಿಷ್ಯಕ್ಕೆ ಮುದ್ರೆ ಒತ್ತಿದ್ದಾನೆ.

          ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್‍ಮೈತ್ರಿಕೂಟ ಹಾಗೂ ಬಿಜೆಪಿ ನಡುವಿನ ಜಿದ್ದಾಜಿದ್ದಿಯೆಂದೇ ಬಿಂಬಿತವಾಗಿರುವ ಈ ಚುನಾವಣೆಯ 2ನೇ ಹಂತದ ಮತದಾನ 14 ಕ್ಷೇತ್ರಗಳಲ್ಲಿ ನಿನ್ನೆ ನಡೆದಿದ್ದು, ಏ. 18ರಂದು ಮೊದಲಹಂತದಲ್ಲಿ 14 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು.

         ಬೆಳಗಾವಿ, ಚಿಕ್ಕೋಡಿ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ಹಾವೇರಿ, ವಿಜಯಪುರ, ಧಾರವಾಡ, ಕಲಬುರಗಿ, ಉತ್ತರ ಕನ್ನಡ, ರಾಯಚೂರು, ದಾವಣಗೆರೆ, ಬೀದರ್, ಶಿವಮೊಗ್ಗ ಜಿಲ್ಲೆಗಳಲ್ಲಿ ಮತದಾರರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದುದು ಕಂಡು ಬಂದಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಭದ್ರತೆ ಕೈಗೊಳ್ಳಲಾಗಿತ್ತು. ಅಭ್ಯರ್ಥಿಗಳು ಹಾಗೂ ಗಣ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಯಲ್ಲಿ ಕುಟುಂಬದವರೊಂದಿಗೆ ಆಗಮಿಸಿ ಮತ ಚಲಾಯಿಸಿದರು.ಇನ್ನೂ ಮತದಾನದ ವೇಳೆ ಮಳೆರಾಯನ ಆಗಮನವಾಗಿದ್ದು, ಮತದಾನಕ್ಕೆ ಅಡ್ಡಿಯಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap