ಬರಗೂರಿನಲ್ಲಿ ಶೇ. 68 ಮತದಾನ

ಬರಗೂರು

      ಲೋಕಸಭೆಗೆ ಗುರುವಾರ ನಡೆದ ಮೊದಲ ಸುತ್ತಿನ ಚುನಾವಣೆಗೆ ಸಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯಲ್ಲಿನ ಗೋಣಿಹಳ್ಳಿ, ಹಂದಿಕುಂಟೆ, ಕೆ.ಕೆ.ಪಾಳ್ಯ ಗ್ರಾಮಗಳಲ್ಲಿ ಬೆಳಗ್ಗೆ 7ಕ್ಕೆ ಆರಂಭವಾಗುವ ಸಂದರ್ಭದಲ್ಲಿ ಇವಿಎಂ ಯಂತ್ರದ ತಾಂತ್ರಿಕ ದೋಷದಿಂದ ಮತದಾನ ಆರಂಭವಾಗುವುದು 30 ನಿಮಿಷ ತಡವಾಯಿತು. ಇದು ಬಿಟ್ಟರೆ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ಮತದಾರರು ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ.

      ಬರಗೂರು ಗ್ರಾಮದಲ್ಲಿ ಶೇ. 68%ರಷ್ಟು ಮತದಾನ ನಡೆದಿದ್ದು, 66ನೇ ಬೂತ್‍ನಲ್ಲಿ 589, 67ರಲ್ಲಿ 503, 68ರಲ್ಲಿ 520 ಮತದಾನವಾಗಿದ್ದು 2207 ಮತದಾರರಲ್ಲಿ ಒಟ್ಟು 1612ರಷ್ಟು ಮತದಾರರು ತಮ್ಮ ಮತದಾನವನ್ನು ಚಲಾಯಿಸಿದ್ದಾರೆ. ದೊಡ್ಡಬಾಣಗೆರೆ ಬೂತ್1ರಲ್ಲಿ 658 ಮತಗಳಲ್ಲಿ 389 ಚಲಾವಣೆಗೊಂಡಿದೆ 59.11% ರಷ್ಟು ಮತದಾನ ಆಗಿದೆ. ಬೂತ್ 2ರಲ್ಲಿ 809ಗೆ 523 ಮತದಾವಾಗಿದೆ 62.16% ರಷ್ಟು ವiತದಾನವಾಗಿದೆ. ಸುಡುವ ರಣ ಬಿಸಿಲಿನಲ್ಲೂ ಜನರು ತಮ್ಮ ಹಕ್ಕನ್ನು ಚಲಾಯಿಸಲು ಮುಂದಾಗಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link