ಬೆಂಗಳೂರು
ಮನೆಯಲ್ಲಿ ದೋಷ, ಗಂಡಾಂತರವಿದೆ ಆರೋಗ್ಯದ ಸಮಸ್ಯೆ ಎದುರಾಗಲಿದೆ ಎಂದು ಹೆದರಿಸಿ ನಿವಾರಿಸುವ ಹೋಮ ಪೂಜೆ ಮಾಡಿ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಆಂಧ್ರರದ ಇಬ್ಬರು ಖತರ್ನಾಕ್ ಕಳ್ಳರು ಸೇರಿ ಸೇರಿ 7 ಮಂದಿಯನ್ನು ಬಂಧಿಸಿರುವ ವಿವಿಪುರಂ ಉಪವಿಭಾಗದ ಪೊಲೀಸರು 63 ಲಕ್ಷ ಮೌಲ್ಯದ 2 ಕೆಜಿ ಚಿನ್ನಾಭರಣಗಳು ಕಾರು ಬೈಕ್‍ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶದ ಆದೋನಿಯ ಚೇತನ್ ಚಂದ್ರಖಾನ್ ಧಾಗೆ (37),ರಾಜೇಶ್ ಗಣಪತ್ ರಾವ್ ಥಾಂಬೆ (55)ನನ್ನು ಬಂಧಿಸಿ 925 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುವ ವಿವಿಪುರಂ ಪೊಲೀಸರು ಪೂನಾದಲ್ಲಿ ತಲೆಮರೆಸಿಕೊಂಡಿರುವ ಖತರ್ನಾಕ್ ಗೂರೂಜಿ ಬಂಧನಕ್ಕೆ ತೀವ್ರ ಶೋಧ ನಡೆಸಿದ್ದಾರೆ.
ಬಂಧಿತ ಚಂದ್ರಖಾನ್ ಧಾಗೆ ಹಾಗೂ ಗಣಪತ್ ರಾವ್ ಥಾಂಬೆ ಮಹಾರಾಷ್ಟ್ರದ ಪೂನಾದ ಅವಿನಾಶ್ ಸುರೇಶ್ ಕಾನ್‍ವಿಲ್ಕರ್ ಅಲಿಯಾಸ್ ಗುರೂಜಿ ಎಂಬಾತನ ಜೊತೆ ಸೇರಿಕೊಂಡು ಚೆನ್ನಮ್ಮನ ಕೆರೆ ಅಚ್ಚುಕಟ್ಟು, ಗಿರಿನಗರ, ಸುಬ್ರಮಣ್ಯಪುರ, ವಿವಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಚರಿಸುತ್ತ ಒಂಟಿಯಾಗಿರುವ ಶ್ರೀಮಂತರ ಮನೆಯನ್ನು ಗುರುತಿಸಿ ನಿಮ್ಮ ಮನೆಯಲ್ಲಿ ದೋಷ, ಗಂಡಾಂತರವಿದೆ. ಆರೋಗ್ಯ, ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆಯಿದೆ ಎಂದು ಬೆದರಿಸುತ್ತಿದ್ದರು.
ನಿಮಗೆ ಎದುರಾಗಿರುವ ಗಂಡಾಂತರ, ತೊಂದರೆಯನ್ನು ನಿವಾರಿಸಲು ಹೋಮ-ಪೂಜೆ ಮಾಡಿ ಎಂದು ನಂಬಿಸಿ ಪೂಜಾ ಕೈಂಕರ್ಯಗಳನ್ನು ನಡೆಸುವ ವೇಳೆ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗುತ್ತಿದ್ದರುವಿವಿಪುರಂನಲ್ಲಿ ನಡೆದಿದ್ದ ಪೂಜೆಯ ವೇಳೆ ಚಿನ್ನಾಭರಣಗಳನ್ನು ದೋಚಿದ ಪ್ರಕರಣವನ್ನು ಬೆನ್ನು ಹತ್ತಿದ ಇನ್ಸ್‍ಪೆಕ್ಟರ್ ಶಿವ್‍ಶಂಕರ್ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕೃತ್ಯದ ಪ್ರಮುಖ ಆರೋಪಿ ಗುರೂಜಿ ಪುಣೆಯಲ್ಲಿ ಅಡಗಿರುವ ಮಾಹಿತಿ ಇದ್ದು, ಆತನ ಬಂಧನಕ್ಕೆ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದ್ದು, ಆದಷ್ಟು ಶೀಘ್ರ ಬಂಧಿಸಲಾಗುವುದು ಎಂದು ದಕ್ಷಿಣ ವಿಭಾಗದ ಡಿಸಿಪಿ ಕೆ. ಅಣ್ಣಾಮಲೈ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
