ಬೆಂಗಳೂರು :
ಅಕ್ರಮವಾಗಿ ಭಾರತಕ್ಕೆ ವಲಸೆ ಬರುವ ರೋಹಿಂಗ್ಯ ಮುಸ್ಲಿಂಮರನ್ನು ಇಲ್ಲಿ ಚುನಾವಣಾ ದೃಷ್ಟಿಯಿಂದಾಗಲಿ ಮತ್ತು ಇನ್ನು ಹಲವು ಕಾರಣಗಳಿಂದಾಗಿ ರಾಜಕಾರಣಿಗಳು ಗೌಪ್ಯವಾಗಿ ಪೋಷಿಸುತ್ತಾರೆ.
ಅವರು ಇಲ್ಲಿ ಕೆಲವು ವರ್ಷಗಳ ಕಾಲ ಇಲ್ಲಿ ಹಣ ಸಂಪಾದನೆಯ ನೆಪದಲ್ಲಿ ಇಲ್ಲೆ ಉಳಿದುಕೊಳ್ಳತ್ತಾರೆ ನಂತರದಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡು ವಿದೇಶಗಳಿಗೆ ಹಾರಿಬಿಡುತ್ತಾರೆ ಅಂಥದ್ದೇ ಒಂದು ಪ್ರಕರಣ ಬೆಂಗಳೂರು ಪೊಲೀಸರಯು ಹಿಡಿದ್ದಾರೆ ಮ್ಯಾನ್ಮಾರ್ ದೇಶದ ಏಳು ಮಂದಿ ರೋಹಿಂಗ್ಯ ಮುಸ್ಲಿಮರು ಗುರುವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಸಿಸಿಬಿ ಬಲೆಗೆ ಬಿದ್ದಿದ್ದಾರೆ.
ಮ್ಯಾನ್ಯಾರ್ ದೇಶದಿಂದ ಅಕ್ರಮವಾಗಿ ವಲಸೆ ಬಂದಿದ್ದ ಆಸ್ಮಾ ಬೇಗಂ, ಮಹಮದ್ ತಾಹೀರ್, ಓಂಕಾರ್ ಫಾರೂಕ್, ಮಹಮದ್ ಹಾಲೆಕ್, ರೆಹನಾ ಬೇಗಂ, ಮಹಮದ್ ಮುಸ್ತಾಫ ಹಾಗೂ ರಜತ್ ಮಂಡಲ್ ಬಂಧಿತ ಆರೋಪಿಗಳು. ಈ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಮತ್ತೊಬ್ಬ ಅಬ್ದುಲ್ ಅಲೀಮ್ ಸೇರಿದಂತೆ ಇತರರ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿಕೊಂಡು ಅಕ್ರಮವಾಗಿ ಕೆಐಎ ಮೂಲಕ ಮಲೇಶಿಯಾಕ್ಕೆ ಪ್ರಯಾಣಿಸಲು ಆರೋಪಿಗಳು ಯತ್ನಿಸಿರುವ ಕುರಿತು ಸಿಸಿಬಿಗೆ ಕೇಂದ್ರ ತನಿಖಾ ಸಂಸ್ಥೆ ಮಾಹಿತಿ ನೀಡಿತ್ತು. ಈ ಸುಳಿವು ಆಧರಿಸಿ ಕಾರ್ಯಾಚರಣೆಗಿಳಿದ ಸಿಸಿಬಿ ಎಸಿಪಿ ವೋಹನ್ ಕುಮಾರ್ ನೇತೃತ್ವದ ತಂಡವು, ಕೆಐಎ ವಲಸೆ ವಿಭಾಗದ ನೆರವು ಪಡೆದು ರೋಹಿಂಗ್ಯಗಳನ್ನು ಸೆರೆ ಹಿಡಿದಿದೆ.
ಈ ಬಂಧಿತರ ಪೈಕಿ ರಜನ್ ಮಂಡಲ್ ಪಶ್ಚಿಮ ಬಂಗಾಳದ ವಿಳಾಸದಲ್ಲಿ ದಾಖಲೆ ಸೃಷ್ಟಿಸಿದ್ದಾನೆ. ಇನ್ನುಳಿದ ಆರು ಮಂದಿ ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ನಿವಾಸಿಗಳೆಂದು ಪಾಸ್ ಪೋರ್ಟ್ ಪಡೆದಿದ್ದರು. ಈ ಹಿಂದೆ ಸಹ ಕೆಐಎ ಮೂಲಕ ಪ್ರಯಾಣಿಸಿರುವ ಕುರಿತು ಆರೋಪಿಗಳಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿನ್ನೆಲೆ:
ಮ್ಯಾನ್ಮಾರ್ ದೇಶದಿಂದ ಗಡಿಪಾರಿಗೆ ಒಳಗಾಗಿರುವ ಈ ಏಳು ಮಂದಿ ರೋಹಿಂಗ್ಯಗಳು, ಆರು ವರ್ಷಗಳ ಹಿಂದೆ ಅಕ್ರಮವಾಗಿ ಪಶ್ಚಿಮ ಬಂಗಾಳದ ಗಡಿ ಹಾದು ಭಾರತಕ್ಕೆ ನುಸುಳಿದ್ದರು. ಅಲ್ಲಿಂದ ಕೊನೆಗೆ ಹೈದರಾಬಾದ್‌ನಲ್ಲಿರುವ ‘ರೋಹಿಂಗ್ಯ ನಿರಾಶ್ರಿತರ ಶಿಬಿರ’ ಸೇರಿದ್ದರು. ಹೀಗಿರುವಾಗ ಕೆಲ ರೋಹಿಂಗ್ಯಗಳು, ಸ್ಥಳೀಯ ಪಾಸ್‌ಪೋರ್ಟ್ ಏಜೆಂಟ್‌ಗಳ ನೆರವು ಪಡೆದು ಭಾರತೀಯರ ಹೆಸರಿನಲ್ಲಿ ಪಾಸ್‌ಪೋರ್ಟ್ ಮತ್ತು ವೀಸಾ ಮಾಡಿಸಿಕೊಂಡು ವಿದೇಶಕ್ಕೆ ಹೋಗಿ ನೆಲೆಸಿದ್ದರು. ಅದರಲ್ಲಿ ಬಂಧಿತರ ಸಂಬಂಧಿಕರು ಸಹ ಸೇರಿದ್ದರು ಎಂದು ಬಂಧಿತರು ತಿಳಿಸಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
