ತುರುವೇಕೆರೆ:
ಪಟ್ಟಣ ಪಂಚಾಯ್ತಿ 14 ವಾರ್ಡ್‍ಗಳ ಸದಸ್ಯರ ಆಯ್ಕೆಗೆ ಚುನಾವಣೆಯಲ್ಲಿ ಬುಧವಾರ ಮತದಾನ ಶಾಂತಿಯುತವಾಗಿ ನೆಡೆದಿದ್ದು ಶೇ77.74 ರಷ್ಟು ಮತದಾನವಾಗಿದೆ.ಬುಧವಾರ ಬೆಳಿಗ್ಗೆ ಬಿರುಗಾಳಿ ಸಮೇತ ಮಳೆ ಬಂದ ಕಾರಣ ಕೆಲವು ಗಂಟೆ ಮತದಾನ ನೀರಸ ಪ್ರತಿಕ್ರೀಯೆ ಕಂಡು ಬಂತು. 9 ಗಂಟೆವರೆಗೆ ಕೇವಲ 5.88 ಮಾತ್ರ ಮತದಾನವಾಗಿತ್ತು. 11 ಕ್ಕೆ ಶೇ 21.85 ಮತದಾನ ಚುರುಕುಗೊಂಡು ಮದ್ಯಾಹ್ನ 1 ಗಂಟೆಗೆ ಶೇ.43.79, 3 ಗಂಟೆಗೆ 60.99, ಸಂಜೆ 5 ಗಂಟೆಗೆ ಶೇ 77.74 ಮತದಾನವಾಗಿದೆ.
ಅಂತಿಮವಾಗಿ 11161 ಮತದಾರರಲ್ಲಿ 8677 ಮತ ಚಲಾವಣೆಯಾಗಿದ್ದು ಶೇಕಡಾ 77.74 ರಷ್ಟು ಮತದಾನವಾಗಿದೆ. ಪಟ್ಟಣದ 14 ಮತಘಟ್ಟೆಯಲ್ಲಿಯೂ ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತವಾಗಿ ಮತದಾನ ನೆಡೆದಿದೆ. ಕೆಲವು ಮತಘಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಇನ್ನುಳಿದಂತೆ ಯಾವುದೇ ನೂಕು ನುಗ್ಗಲು ಇಲ್ಲದೆ ಮತದಾನ ಮಾಡಿದರು.
ಶಾಸಕ ಮಸಾಲ ಜಯರಾಮ್, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಎಐಸಿಸಿ ಸದಸ್ಯ ಸುಬ್ರಮಣಿಶ್ರೀಕಂಠೆಗೌಡ, ಕಾಂಗ್ರೇಸ್ ಮುಖಂಡ ಚೌದ್ರಿ ರಂಗಪ್ಪ ಸೇರಿದಂತೆ ಅನೇಕ ಮುಖಂಡರುಗಳು ಪಟ್ಟಣದ ಮತಗಟ್ಟೆಗಳಿಗೆ ಬೇಟಿ ನೀಡಿ ಕಾರ್ಯಕರ್ತರ ಜೊತೆ ಮಾತನಾಡಿ ಮತದಾನದ ಬಗ್ಗೆ ಚರ್ಚಿಸಿದರು. ಪ್ರತಿ ಬೂತ್‍ಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
