ಬೆಂಗಳೂರು
ಕಾರಿನಲ್ಲಿ ಬರುವ ಶ್ರೀಮಂತರ ಗಮನ ಬೇರೆಡೆ ಸೆಳೆದು ಐವರು ದುಷ್ಕರ್ಮಿಗಳ ಗ್ಯಾಂಗ್ 8 ಲಕ್ಷ ರೂ ದೋಚಿ ಪರಾರಿಯಾಗಿರುವ ಘಟನೆ ಕಲಾಸಿಪಾಳ್ಯದಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಾಪಿಂಗ್‍ಗೆ ಬಂದ ಉದ್ಯಮಿ ಮೇಲೆ ದೋಚಲು ಸಂಚು ರೂಪಿಸುವ ಗ್ಯಾಂಗ್‍ನಲ್ಲಿ ಮೊದಲಿಗೆ ಕಾರಿನಲ್ಲಿ ಬಂದವರನ್ನ ಮಾತನಾಡಿಸೋಕೆ ಒಬ್ಬ, ಗಮನಿಸಲು ಇಬ್ಬರು, ಗಮನ ಬೇರೆಡೆ ಸೆಳೆಯೋಕೆ ಒಬ್ಬ, ಬ್ಯಾಗ್ ಎಗರಿಸೋಕೆ ಇನ್ನೊಬ್ಬ ಹೀಗೆ ಈ ಕಳ್ಳರ ಗ್ಯಾಂಗ್ ಕಾರಿಂದ ಬರೋಬ್ಬರಿ 8 ಲಕ್ಷ ಎಗರಿಸಿದ್ದಾರೆ. ಕಳ್ಳರ ಕೈಚಳಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದುಬಾರಿ ಕಾರಿನಲ್ಲಿ ಶಾಪಿಂಗ್‍ಗೆ ಬರುವವರನ್ನು ಗಮನಿಸಿ ಕಳ್ಳತನಕ್ಕೆ ಸಂಚು ರೂಪಿಸುವ ಗ್ಯಾಂಗ್ ಶ್ರೀಮಂತರ ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲಿ ಹಣ ಎಗರಿಸಿ ಪರಾರಿಯಾಗುತ್ತಾರೆ. ನೋಡಲು ಸಾಮಾನ್ಯರಂತೆ ಕಾಣುವ ಗ್ಯಾಂಗ್ ಕೃತ್ಯ ನೋಡುಗರನ್ನು ಬೆಚ್ಚಿ ಬೀಳಿಸುತ್ತದೆ.
ಕಾರಿನ ಬಳಿ ಒಬ್ಬ ಕಳ್ಳ ಬಂದು ಸ್ವಲ್ಪ ಸಮಯಗಳ ಕಾಲ ಕಾರಿನ ಪಕ್ಕದಲ್ಲೇ ನಿಂತು ಗಮನಿಸುತ್ತಿರುತ್ತಾನೆ. ಈ ವೇಳೆ ಕಾರಿನ ಚಾಲಕನ ಗಮನ ಬೇರೆಡೆ ಇರುತ್ತದೆ. ಇದೇ ಸಂದರ್ಭವನ್ನು ನೋಡಿಕೊಂಡು ಕಳ್ಳ ಕಾರಿನಲ್ಲಿದ್ದ 5 ಲಕ್ಷದ ರೂ. ಹಣವಿದ್ದ ಬ್ಯಾಗ್ ಅನ್ನು ಕಾರಿನ ಡೋರ್ ತೆಗೆದು ಎಗರಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
