ಉದ್ಯಮಿಯ 8 ಲಕ್ಷ ಕದ್ದ ಕಳ್ಳರು..!!!

ಬೆಂಗಳೂರು

         ಕಾರಿನ ಬಳಿ ನಡೆದುಹೋಗುತ್ತಿದ್ದ ಉದ್ಯೋಗಿಯೊಬ್ಬರ 8 ಲಕ್ಷ ಹಣವಿದ್ದ ಬ್ಯಾಗನ್ನು ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಕ್ಷಣಾರ್ಧದಲ್ಲಿ ಕಸಿದು ಪರಾರಿಯಾಗಿರುವ ದುರ್ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಹಾಡುಹಗಲೇ ನಡೆದಿದೆ.

        ವೆಸ್ಟ್ ಆಫ್ ಕಾರ್ಡ್ ರಸ್ತೆಯ ವಿಜಯ ಬ್ಯಾಂಕ್‍ನಲ್ಲಿ ಮಾಗಡಿ ರಸ್ತೆಯ ಅಂಜನಾಪುರದ ಉದ್ಯಮಿ ಸುರೇಶ್ ಅವರು, ನಿನ್ನೆ ಮಧ್ಯಾಹ್ನ 3ರ ವೇಳೆ ಹಣ ಡ್ರಾ ಮಾಡಿಕೊಂಡು ಬ್ಯಾಕ್‍ನಲ್ಲಿ ಇಟ್ಟುಕೊಂಡು ಹೊರಭಾಗದಲ್ಲಿ ನಿಲ್ಲಿಸಿದ್ದ ಕಾರಿನ ಬಳಿಗೆ ನಡೆದು ಬರುತ್ತಿದ್ದರು.

         ಈ ವೇಳೆ ಕಪ್ಪುಬಣ್ಣದ ಪಲ್ಸರ್ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಸುರೇಶ್ ಅವರು ಹಣವಿಟ್ಟುಕೊಂಡು ಹೆಗಲಿಗೆ ನೇತುಹಾಕಿಕೊಂಡು ಹೋಗುತ್ತಿದ್ದ ಬ್ಯಾಗನ್ನು ಕ್ಷಣಾರ್ಧದಲ್ಲಿ ಕಸಿದು ಪರಾರಿಯಾಗಿದ್ದಾರೆ. ಸುರೇಶ್ ಅವರು ಏನಾಗಿದೆ ಎಂದು ನೋಡಿಕೊಳ್ಳುವಷ್ಟರಲ್ಲಿ ದುಷ್ಕರ್ಮಿಗಳು ಕೃತ್ಯ ನಡೆಸಿದ್ದು, ಪ್ರಕರಣ ದಾಖಲಿಸಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸರು, ಬ್ಯಾಂಕ್ ಹೊರಭಾಗದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ, ದುಷ್ಕರ್ಮಿಗಳ ಪತ್ತೆಗೆ ಶೋಧ ನಡೆಸಿದ್ದಾರೆ.

       ಸುರೇಶ್ ಅವರನ್ನು ಹಿಂಬಾಲಿಸಿ ಹೊಂಚುಹಾಕಿ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link