ಕೊರಟಗೆರೆ : ಬಲೆಗೆ ಸಿಲುಕಿದ್ದ ಕರಡಿ ಸಾವು..!

ಕೊರಟಗೆರೆ

     ಅರಣ್ಯಪ್ರದೇಶ ಮತ್ತು ಬೆಟ್ಟಗುಟ್ಟದ ಅಂಚಿನಲ್ಲಿ ಕಾಡಿನ ಪ್ರಾಣಿಗಳನ್ನು ಬೇಟೆಯಾಡಲು ಬೇಟೆಗಾರ ಅಳವಡಿಸಿರುವ ಉರುಳಿನ ಬಲೆಗೆ ಸಿಲುಕಿರುವ 8 ವರ್ಷದ ಗಂಡು ಕರಡಿಯೊಂದು 10 ದಿನಗಳ ಕಾಲ ನರಳಾಟ ನಡೆಸಿ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೇ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.

      ತಾಲ್ಲೂಕಿನ ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಎ.ವೆಂಕಟಾಪುರ ಬೆಟ್ಟದ ಸಮೀಪ ತೀವ್ರವಾಗಿ ಗಾಯಗೊಂಡ ಕರಡಿಯೊಂದು ಪತ್ತೆಯಾಗಿದೆ. ಬೆಟ್ಟದ ಮೇಲೆ ಬೇಟೆಗಾರ ಅಳವಡಿಸಿರುವ ಉರುಳಿಗೆ ಕರಡಿಯ ಬಲಗಾಲು ಸಿಲುಕಿಕೊಂಡು 10 ದಿನ ಚೀರಾಟ ನಡೆಸಿ ಗಾಯಗೊಂಡು ತಪ್ಪಿಸಿಕೊಂಡಿದೆ.

      ಉರುಳಿನಿಂದ ಬಿಡಿಸಿಕೊಂಡ 8 ವರ್ಷದ ಗಂಡುಕರಡಿ ತೀವ್ರವಾಗಿ ಗಾಯಗೊಂಡು ನಡೆಯಲು ಆಗದೇ ಆಹಾರಕ್ಕಾಗಿ ಪರದಾಟ ನಡೆಸಿದೆ. ಹತ್ತಾರು ದಿನ ಆಹಾರವಿಲ್ಲದೇ ನಿಶಕ್ತಿಯಾಗಿ ರಸ್ತೆಯ ಬದಿಯಲ್ಲಿ ಬಿದ್ದಿದೆ. ಕರಡಿಯನ್ನು ನೋಡಿದ ಸ್ಥಳೀಯರ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿವರ್ಗ ಪಶು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

     ಕೊರಟಗೆರೆ ವಲಯ ಅರಣ್ಯಾಧಿಕಾರಿ ಸತೀಶಚಂದ್ರ ಮಾತನಾಡಿ, ಗಾಯಗೊಂಡು ಮೃತಪಟ್ಟ ಕರಡಿಯನ್ನು ಹಿರೆಬೆಟ್ಟದ ಅರಣ್ಯದಲ್ಲಿ ಮೇಲಧಿಕಾರಿಗಳ ಸಮಕ್ಷಮ ಅಂತ್ಯಕ್ರಿಯೆ ನಡೆಸಲಾಗಿದೆ. ಕಾಡಿನ ಪ್ರಾಣಿಗಳನ್ನು ಹಿಡಿಯಲು ಅರಣ್ಯ ಪ್ರದೇಶದಲ್ಲಿ ಉರುಳು ಹಾಕುವುದೆ ಕಾನೂನು ಬಾಹಿರ ಚಟುವಟಿಕೆ ಆಗಿದೆ. ಪ್ರಾಣಿಗಳನ್ನು ಹಿಡಿಯುವುದು ಕಂಡು ಬಂದರೆ ತಕ್ಷಣ ಅರಣ್ಯ ಇಲಾಖೆ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

     ಅರಣ್ಯ ಪ್ರದೇಶದಲ್ಲಿ ಉರುಳು ಹಾಕುವ ಬೇಟೆಗಾರರ ವಿರುದ್ದ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಮಧುಗಿರಿ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಎನ್.ಎರಡೋಣಿ, ಕೊರಟಗೆರೆ ಅರಣ್ಯ ಸಿಬ್ಬಂದಿಯಾದ ನಾಗರಾಜು, ಹನುಮಂತಯ್ಯ, ನಂದೀಶ್, ನೇಹಜುಲ್ ತಸ್ಮೀಯಾ, ನರಸಿಂಹಯ್ಯ, ಮಂಜುನಾಥ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link