ಪಟಾಕಿ ಸಿಡಿದು: 80 ಜನರಿಗೆ ಗಾಯ..!

ಬೆಂಗಳೂರು

     ದೀಪಾವಳಿ ಹಬ್ಬದ ಎರಡನೇ ದಿನದ ಸಂಭ್ರಮದಲ್ಲಿ ನಗರದಲ್ಲಿ ಪಟಾಕಿ ಸಿಡಿಸಲು ಹೋದ 33 ಮಂದಿ ಗಾಯಗೊಂಡಿದ್ದು ಇಲ್ಲಿಯವರೆಗೆ ಪಟಾಕಿ ಸಿಡಿತದಿಂದ ಗಾಯಗೊಂಡವರ ಸಂಖ್ಯೆ 80 ಕ್ಕೇರಿದೆ. ದೀಪಾವಳಿ ಹಬ್ಬದ ಅರಂಭದಿಂದ ಇಲ್ಲಿಯವರೆಗೆ 47 ಮಂದಿ ಗಾಯಗೊಂಡಿದ್ದು ತಡರಾತ್ರಿಯವವರೆಗೆ ಮತ್ತೆ 80  ಮಂದಿ ಗಾಯಗೊಂಡು ಮಿಂಟೋ ಇನ್ನಿತರ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

     ಮನೋಜ್ ಎಂಬ 8 ವರ್ಷದ ಬಾಲಕನೋರ್ವ ಪಟಾಕಿ ಸಿಡಿಸಲು ಕಣ್ಣಿಗೆ ಗಾಯಮಾಡಿಕೊಂಡಿದ್ದು ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಪುಲಕೇಶಿನಗರದಲ್ಲಿ ಕೆಲ ಹುಡುಗರ ಗುಂಪು ರಸ್ತೆಯಲ್ಲಿ ಡಬ್ಬದೊಳಗೆ ಪಟಾಕಿಯಿಟ್ಟು ಸಿಡಿಸಿದ್ದು, ದೂರಕ್ಕೆ ಹಾರಿದ ಡಬ್ಬ ರಸ್ತೆಯಲ್ಲಿ ಹೋಗುತ್ತಿದ್ದ 17 ವರ್ಷದ ಫರ್ಹಾನ್ ಎಂಬಾತನ ಎಡಗಣ್ಣಿಗೆ ತಗುಲಿ ಗಾಯಗೊಂಡಿದ್ದಾನೆ.

    ಆತ ಸಮೀಪದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆದಿದ್ದಾನೆ.ಪರೀಕ್ಷೆ ಬರೆದು ರಜೆ ಇದ್ದಿದ್ದರಿಂದ ನೆಂಟರ ಮೆನೆಗೆ ಹೋಗಿ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಣ್ಣಿಗೆ ಗಂಭೀರವಾದ ಗಾಯವಾಗಿದೆ. ಶಸ್ತ್ರಚಿಕಿತ್ಸೆ ಮಾಡಬೇಕಾದ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.

     ಚಾಮರಾಜಪೇಟೆಯಲ್ಲಿ ಮನೆಯ ಬಳಿ ಹುಡುಗರು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಹಚ್ಚುತ್ತಿದ್ದು ದನ್ನು ನೋಡುತ್ತ ನಿಂತಿದ್ದ ಏಳು ವರ್ಷದ ಮದನ್, ಹಚ್ಚಿದ ಪಟಾಕಿ ಹೊತ್ತಿಕೊಳ್ಳದ್ದನ್ನು ನೋಡಿ ಅದನ್ನು ಕೈಗೆ ಎತ್ತಿಕೊಂಡಾಗ ಸಿಡಿದು ಎಡಗಣ್ಣಿಗೆ ಗಾಯವಾಗಿದೆ. ಹನುಮಂತ ನಗರ ನಿವಾಸಿ 13 ವರ್ಷದ ಬಾಲಕಿ ಪುಣ್ಯ ಹೂಕುಂಡ ಪಟಾಕಿ ಸರಿಯಾಗಿ ಹೊತ್ತಿಕೊಳ್ಳಲಿಲ್ಲ ಎಂದು ಪುನಃ ಹಚ್ಚಲು ಹೋದಾಗ ಅದು ಸಿಡಿದು ಕಿಡಿ ಕಣ್ಣಿಗೆ ತಾಗಿ ಗಾಯಗೊಂಡಿದ್ದಾಳೆ. ಮಿಂಟೋ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ಕೊಡಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಸ್ನೇಹಿತರೊಂದಿಗೆ ಪಟಾಕಿ ಸಿಡಿಸಲು ಹೋಗಿದ್ದಾಗ ಅವಘಡ ನಡೆದಿದೆ.

        ನಾಗೇಂದ್ರ ಬ್ಲಾಕ್‍ನ ನಿವಾಸಿ ವಿಜಯಕುಮಾರ್ ಅವರ ಎರಡೂವರೆ ವರ್ಷದ ಬಾಲಕಿ ಯುಕ್ತಶ್ರೀ ಹೂ ಕುಂಡ ಉರಿಯುವುದನ್ನು ನೋಡಲು ಹೋದಾಗ ಅದರ ಕಿಡಿ ಹಾರಿ ಗಾಯಗೊಂಡಿದ್ದಾಳೆ.ಆಕೆಯ ಮುಖವೂ ಸುಟ್ಟಿದ್ದು, ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಳೆ. ಪಟಾಕಿ ಸಿಡಿತದಿಂದ ಗಾಯಗೊಂಡವಲ್ಲಿ ಬಹುತೇಕರು ಮಕ್ಕಳಾಗಿದ್ದು, ಪಾಲಕರು ಜತೆಯಲ್ಲಿಲ್ಲದ ವೇಳೆ ಪಟಾಕಿ ಹಚ್ಚಲು ಹೋಗಿ ಅವಘಡಕ್ಕೆ ತುತ್ತಾಗಿದ್ದಾರೆ. ಉಳಿದಂತೆ ರಸ್ತೆಯಲ್ಲಿ ಹೋಗುತ್ತಿದ್ದವರು, ಮನೆಯ ಹೊರಗೆ ಕುಳಿತವರೂ ಅನ್ಯರು ಹಚ್ಚಿದ ಪಟಾಕಿಗಳ ಕಿಡಿ ತಾಗಿ ಗಾಯಗೊಂಡಿದ್ದಾರೆ. ಕಣ್ಣಿಗೆ ಗಾಯಗೊಂಡವರು ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಸುಟ್ಟ ಗಾಯಗಳಾದವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಕಣ್ಣಿಗೆ ಗಾಯಗೊಂಡವರಲ್ಲಿ 10 ಮಂದಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap