ಅನುದಾನ ರಹಿತ ಶಾಲೆಗಳಿಗೆ ಸಹಾಯ ಮಾಡಲು ಇಲಾಖೆ ಚಿಂತನೆ : ಸಚಿವ

ಬೆಂಗಳೂರು

     ಕೊರೋನಾ ಹಿನ್ನೆಲೆಯಲ್ಲಿ ಶಾಲೆಗಳು ಸಕಾಲಕ್ಕೆ ಬಾಗಿಲು ತೆರೆಯದೇ ಇರುವುದರಿಂದ ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದು,ಅವರಿಗಾಗಿ ಯಾವುದಾ ದರೂ ರೀತಿಯಲ್ಲಿ ಸಹಾಯ ಮಾಡಲು ಇಲಾಖೆ ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

     ಶಿಕ್ಷಕರ ಸದನದಲ್ಲಿ ಇಲಾಖೆಯ ಸಹಾಯವಾಣಿ- ಶಿಕ್ಷಣ ವಾಣಿ ಮತ್ತು ಶಿಕ್ಷಣ ಸಚಿವರ ಡ್ಯಾಷ್‍ಬೋರ್ಡ್-ಪರಿವ ರ್ತನಾ ಕೇಂದ್ರಗಳಿಗೆ ಚಾಲನೆ ನೀಡಿ, ಕರೆ ಕೇಂದ್ರದಲ್ಲಿ ಶಿಕ್ಷಕರೊಬ್ಬರ ಕರೆ ಸ್ವೀಕರಿಸಿ ಮಾತನಾಡಿದ ಅವರು,ಇಂ ತಹ ಶಾಲೆಗಳ ಅನೇಕ ಶಿಕ್ಷಕರು ತರಕಾರಿ ಮಾರಾಟ,ನರೇಗಾದಂತಹ ಕೆಲಸಗಳಿಗೆ ಹೋಗುವಂತಾದ ಸ್ಥಿತಿ ಕಂಡು ನಿಜಕ್ಕೂ ಬೇಸರವಾಗಿದೆ.ಅವರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಬೇಕೆಂಬ ಕುರಿತು ಈಗಾಗಲೇ ಅಂತಹ ಶಿಕ್ಷಕರು ಮತ್ತು ಆ ಶಾಲೆಗಳ ಸಿಬ್ಬಂದಿಯ ಅಂಕಿ-ಸಂಖ್ಯೆಗಳನ್ನು ಸಂಗ್ರಹಿಸಲಾಗುತ್ತಿದೆ. ಆದರೆ ಅವರ ಸಂಖ್ಯೆ ಸಾಕಷ್ಟು ದೊಡ್ಡಪ್ರಮಾಣದಲ್ಲಿರುವುದರಿಂದ ಆ ಬೃಹತ್ ಪ್ರಮಾಣದ ಸಂಖ್ಯೆಗೆ ಸಹಾಯ ಮಾಡುವುದರತ್ತ ಎಲ್ಲ ಆಯಾಮಗಳಿಂದಲೂ ಸರ್ಕಾರ ಚಿಂತನೆ ನಡೆಸಿದೆ ಎಂದು ಅವರು ಹೇಳಿದರು.

      ಶಾಲೆಗಳ ಆರಂಭದ ಕುರಿತು ಇನ್ನೂ ಯಾವುದೇ ಸೂಚನೆಗಳಿಲ್ಲ.ಈ ಮಾಸಾಂತ್ಯದ ವೇಳೆಗೆ ಶಾಲೆಗಳು ಯಾವಾ ಗ ಅರಂಭವಾಗಲಿವೆ ಎಂಬುದಕ್ಕೆ ಒಂದು ಸ್ಪಷ್ಟ ರೂಪ ದೊರೆಯಬಹುದಾಗಿದೆ.ಆ ತನಕವೂ ನಾವು ಶಾಲೆಗಳ ನ್ನು ಆರಂಭಿಸಲು ಆತುರಪಡುವುದಿಲ್ಲ.ಇಲಾಖೆಯ ಎಲ್ಲರ ಸಮರ್ಪಣಾ ಮನೋಭಾವ ಮತ್ತು ಪರಿಶ್ರಮಗಳಿಂ ದಾಗಿ ಇಲಾಖೆಯ ಸಾಧನೆ ಸಾಧ್ಯವಾಗಿದೆ.ಶಿಕ್ಷಕ ಮಿತ್ರ ಆಪ್ ಕುರಿತು ವಿವರಿಸಿದ ಸಚಿವರು,ಪ್ರತಿ ಹಂತದಲ್ಲೂ ಶಿಕ್ಷಕರ ಮೊಬೈಲ್‍ಗೆ ಪ್ರತಿ ಹಂತದ ಕ್ರಮಗಳ ಸಂದೇಶಗಳ ಲಭ್ಯವಾಗಲಿದೆ.

     ಮುಂದೆ ಇದೇ ಶಿಕ್ಷಕ ಮಿತ್ರ- ಆಪ್ ನಲ್ಲಿ ಪ್ರತಿಯೊಬ್ಬ ಶಿಕ್ಷಕರ ಸರ್ವ ಸೇವಾ ವಿವರ ಅಳವಡಿಕೆ ಮಾಡಲಾ ಗಿದೆ.ಕಳೆದ ಸಾಲಿನಲ್ಲಿ ಏನು ಭರವಸೆ ನೀಡಿದ್ದೆನೋ ಅದರಂತೆ ವರ್ಗಾವಣಾ ಪ್ರಕ್ರಿಯೆ ನಡೆಯಲಿದೆ.ಕಡ್ಡಾಯ ಮತ್ತು ಹೆಚ್ಚುವರಿ ಶಿಕ್ಷಕರಿಗೆ ಮೊದಲ ಆದ್ಯತೆ ದೊರೆಯಲಿದೆ.50 ವರ್ಷ ದಾಟಿದವರಿಗೆ ವರ್ಗಾವಣೆಯಿಂದ ವಿನಾಯ್ತಿ ಸೇರಿದಂತೆ ಶಿಕ್ಷಕ ಸ್ನೇಹಿ ವ್ಯವ ಸ್ಥೆಯಾಗಿದೆ ಎಂದರು.

    ಶಿಕ್ಷಕ ಮಿತ್ರ-ಆಪ್‍ನಲ್ಲಿ ಈಗಾಗಲೇ 2.50 ಲಕ್ಷ ಶಿಕ್ಷಕರ ಮಾಹಿತಿ ಅಪ್‍ಲೋಡ್ ಆಗಿದೆ.ಇದರಿಂದ ಇಡೀ ಪ್ರಕ್ರಿಯೆಗೆ ಪಾರದರ್ಶಕತೆ ಲಭ್ಯವಾಗಿದೆ.ತಂತ್ರಜ್ಞಾನಾಧಾರಿತ ವ್ಯವಸ್ಥೆಗೆ ಇದೇ ಮೊದಲ ಬಾರಿಗೆ ಇಲಾಖೆ ಸಜ್ಜುಗೊಂಡಿದೆ. ಶಿಕ್ಷಕರು ತಾವಿರವ ಸ್ಥಳದಿಂದಲೇ ಶಿಕ್ಷಕ ಮಿತ್ರ -ಆಪ್ ಡೌನ್‍ಲೋಡ್ ಮಾಡಿಕೊಂಡು ವರ್ಗಾವಣೆಗೆ ಅರ್ಜಿ ಸಲ್ಲಿ ಸುವ ತಾಂತ್ರಿಕ ಸೌಲಭ್ಯ.ಶಿಕ್ಷಕರಿಗೆ ಇಲಾಖೆಯ ಸೇವೆಗಳನ್ನು ಇಂತಿಷ್ಟೇ ದಿನಗಳೊಳಗೆ ನೀಡಬೇಕೆಂದು ಒಂ ದೊಂದು ಸೇವೆಗೆ ಪ್ರತ್ಯೇಕ ದಿನಗಳನ್ನು ನಿಗದಿಪಡಿಸಲಿದ್ದು,ಆ ದಿನಗಳೊಳಗೆ ಸೇವೆಗಳು ದೊರೆಯಲಿವೆ ಎಂದು ಅವರು ವಿವರಿಸಿದರು.

    ಪರಿಹಾರಕ್ಕೆ ಶಿಕ್ಷಣ ವಾಣಿ-ಸಹಾಯವಾಣಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಕುಂದುಕೊರತೆಗಳಿಗೆ ಸಂಬಂಧಿಸಿ ದಂತೆ ಸಹಾಯವಾಣಿ ಅಲ್ಲದೇ ವಾಟ್ಸ್ ಆಪ್ ಸೌಲಭ್ಯ.ಪ್ರತ್ಯೇಕ ಫ್ರೀ-ಟೋಲ್ ಸಂಖ್ಯೆಯ ಲಭ್ಯತೆ.ಮಾಹಿತಿ ಅರ್ಜಿದಾರರ ಮೊಬೈಲ್‍ಗೆ ಲಭ್ಯವಾಗಲಿದೆ.ಇದರ ವ್ಯವಸ್ಥಿತ ನಿರ್ವಹಣೆಯನ್ನು ನಾನೇ ಖುದ್ದಾಗಿ ನಿರಂತರ ವಾಗಿ ಪರಾಮರ್ಶಿಸಲಿದ್ದೇನೆ ಎಂದು ಅವರು ತಿಳಿಸಿದರು.

    ಇಲಾಖೆಯ ಆಡಳಿತ ಪ್ರಕ್ರಿಯೆಗೆ ತಾಂತ್ರಿಕ ಸ್ಪರ್ಷ ನೀಡಲು ಇ.ಎಂ.(ಶಿಕ್ಷಣ ಸಚಿವ) ಡ್ಯಾಷ್‍ಬೋರ್ಡ್-ಪರಿವರ್ತನ- ಸ್ಥಾಪನೆಯಾಗಿದೆ.ಇದರಲ್ಲಿ ಇಲಾಖೆಗೆ ಸಂಬಂಧಿಸಿದ ಎಲ್ಲ ವಿಷಯಗಳ ಪರಿಶೀಲನೆ.ಪ್ರತಿ ವಿದ್ಯಾರ್ಥಿಯ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ-ಎಸ್‍ಎಟಿಎಸ್ ಅಳವಡಿಕೆಯಾಗಿದೆ.ಕಳೆದ ಬಾರಿ ಕಡ್ಡಾಯ ವರ್ಗಾವಣೆ ಆಗಬೇ ಕಾದವರು ಮತ್ತು ಹೆಚ್ಚುವರಿ ಶಿಕ್ಷಕರೆಂದು ವರ್ಗಾವಣೆ ಆಗಬೇಕಾದವರಿಗೆ ಮೊದಲ ಆದ್ಯತೆ ದೊರೆಯಲಿದೆ.ಈ ಎಲ್ಲ ತಂತ್ರಜ್ಞಾನಾಧಾರಿತ ವ್ಯವಸ್ಥೆಯಿಂದ ಶಿಕ್ಷಕರು ಶಾಲೆ ಬಿಟ್ಟು ಬಿಇಒ/ಡಿಡಿಪಿಐ ಕಚೇರಿಗೆ ಅಲೆದಾಟ ನಿಲ್ಲ ಲಿದೆ.ಇದರಿಂದ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ. ಒಟ್ಟಾರೆ ಇಲಾಖೆಯ ಕಾರ್ಯ ಚಟುವಟಿಕೆಗಳಿಗೆ ಹೊಸ ದಿಕ್ಕು ದೊರೆಯಲಿದ್ದು,ನೂತನ ಶಿಕ್ಷಕ-ವಿದ್ಯಾರ್ಥಿ ಸ್ನೇಹಿ ವರ್ಗಾವಣೆ ಪ್ರಕ್ರಿಯೆ/ ಶಿಕ್ಷಕ ಮಿತ್ರ-ಆಪ್/ ಶಿಕ್ಷಣವಾಣಿ-ಸಹಾಯವಾಣಿಗಳಂತಹ ಈ ತಂತ್ರಜ್ಞಾ ನಾಧಾರಿತ ಹೊಸ ವ್ಯವಸ್ಥೆ ಶಿಕ್ಷಕರಲ್ಲಿ ಸಮರ್ಪಣಾ ಮನೋಭಾವ ಹೆಚ್ಚಿಸಲು ಸಹಾಯಕವಾಗಿವೆ.ಇದು ತರಗತಿಗಳಲ್ಲಿ ಪ್ರತಿಫಲನಗೊಳ್ಳಲಿದೆ.ಈ ಮೂಲಕ ಅದು ನಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಾಯವಾಗಲಿದೆ ಎಂದು ಅವರು ಶ್ಲಾಘನೆ ವ್ಯಕ್ತಪಡಿಸಿದರು

     ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ತುಮಕೂರಿನ ರಾಮಕೃಷ್ಣ ವಿವೇಕಾನಂದಾಶ್ರಮದ ಶ್ರೀ ವೀರೇಶಾನಂದ ಸ್ವಾಮೀಜಿ, ಸ್ವಾಮಿ ವಿವೇಕಾನಂದರು ಶಿಕ್ಷಣದ ಕುರಿತು ವಿವರಿಸಿದ ನೀತಿಯನ್ನು ನಾವು ಅಳವಡಿಸಿಕೊಳ್ಳಬೇಕಿ ದೆ.ವಿವೇಕಾನಂದರ ಚಿಂತನೆಯನ್ನು ವಿಶ್ವಸಂಸ್ಥೆ ಮತ್ತು ಯುನೆಸ್ಕೋಗಳು ಆಗಲೇ ಒಪ್ಪಿಕೊಂಡಿದ್ದವು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap