ಶಾಲಾ ಪಠ್ಯ ಪುಸ್ತಕದಲ್ಲಿ ಕೊರೋನಾ ಕುರಿತು ಪಾಠ : ಸುರೇಶ್ ಕುಮಾರ್

ಕಲಬುರಗಿ:

      ಪ್ರಸಕ್ತ ವರ್ಷ ಭೂಮಂಡಲದ ಮೇಲೆ ತನ್ನ ಕ್ರೂರವಾದ ಪರಿಣಾಮ ಬೀರಿರುವ ಕೊರೋನಾ ವೈರಸ್ ಕುರಿತಾದ ವಿಷಯವು ಈ ವರ್ಷದ ಪಠ್ಯ ಪುಸ್ತಕದಲ್ಲಿ ಇರಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಈ ವಿಷಯವನ್ನು ಖುದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. ಆ ಪಾಠದಲ್ಲಿ  ಇಂತಹ ರೋಗಗಳ ಬಗ್ಗೆ ಇತಿಹಾಸ, ಅವುಗಳ ಪರಿಣಾಮ ಸಮಾಜದ ಮೇಲೆ, ಮಾಸ್ಕ್ ಧರಿಸುವ ಅಗತ್ಯ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈ ತೊಳೆಯುವುದು, ಶುಚಿಯಾಗಿರುವುದರ ಬಗ್ಗೆ ವಿವರಣೆಯಿರುತ್ತದೆ.

     ಈಗಾಗಲೇ ಪ್ರಸಕ್ತ ಶೈಕ್ಷಣಿಕ ವರ್ಷದ ಪಠ್ಯಪುಸ್ತಕ ಮುದ್ರಣವಾಗಿದೆ, ಹೀಗಾಗಿ ಕೋವಿಡ್-19 ಬಗ್ಗೆ ಪ್ರತ್ಯೇಕ ಕೈಪಿಡಿಯನ್ನು ತಯಾರಿಸುವ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಲಾಗುವುದು. ಈ ವಿಷಯದ ಮೇಲೆ ಮಕ್ಕಳಿಗೆ ಪರೀಕ್ಷೆ ಕೂಡ ಇರುತ್ತದೆ ಎಂದರು.ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದ ಬಗ್ಗೆ ಸರ್ಕಾರ ಇನ್ನೂ ನಿರ್ಧರಿಸಿಲ್ಲ. ಇಂದಿನಿಂದ ಪೋಷಕರು, ಶಿಕ್ಷಕರು ಮತ್ತು ಇತರ ಸಂಬಂಧಪಟ್ಟವರ ಜೊತೆ ಸಭೆಗಳು ಆರಂಭವಾಗಲಿದ್ದು ಅದರಲ್ಲಿ ಬಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.

     ಈ ವರ್ಷ ಪಠ್ಯಕ್ರಮ ಮತ್ತು ಶೈಕ್ಷಣಿಕ ಅವಧಿ ಬದಲಾಗುವ ಸಾಧ್ಯತೆಯಿದೆ. ರಜಾದಿನಗಳಲ್ಲಿ ಮತ್ತು ಚಳಿಗಾಲದಲ್ಲಿ ಕೂಡ ತರಗತಿಗಳನ್ನು ನಡೆಸುವ ಬಗ್ಗೆ ಶಿಕ್ಷಕರು ಈಗಾಗಲೇ ಒಪ್ಪಿದ್ದಾರೆ. ಸಿಲೆಬಸ್ ಗಳನ್ನು ಕಡಿತ ಮಾಡಲಾಗುವುದು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link