ತಿಪಟೂರು :
ಹಸಿದ ಹೊಟ್ಟೆ, ಖಾಲಿ ಜೋಬು ಇದು ಮನುಷ್ಯನಿಗೆ ನೂರಾರು ವಿದ್ಯೆಗಳನ್ನು ಕಲಿಸುತ್ತದೆ, ಮಾನವನ ಅವಶ್ಯಕತೆಗಳನ್ನು ಪೂರಿಕೊಳ್ಳಲು ಇಂದಿನ ವಿಜ್ಞಾನದ ಉಗಮಕ್ಕೆ ಕಾರಣ ಎಂದು ಗುಬ್ಬಿ ಸ.ಪ್ರ.ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ ಕೃಷ್ಣಪ್ಪ ತಿಳಿಸಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ, ವಿಜ್ಞಾನ ವೇದಿಕೆ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇವರಿಂದ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ಪ್ರಪಂಚ ವಿಶಾಲವಾಗಿದ್ದು ಯಾವುದೇ ಕ್ಷೇತ್ರದಲ್ಲಿ ಬೇಕಾದರು ಸಾಧನೆ ಮಾಡಬಹುದು ವಿದ್ಯಾರ್ಥಿಗಳಲ್ಲಿ ಒಂದು ತಪ್ಪು ಕಲ್ಪನೆ ಇದೆ ಯಾವ ತಕ್ಷಣ ಪಡೆದರು ಕೆಲಸ ಸಿಗುವುದಿಲ್ಲಾ ಎಂದು ಕೊಂಡಿರುತ್ತಾರೆ, ಶಿಕ್ಷಣವಿರುವುದು ಅಹಂಕಾರ ಪಡುವುದಕ್ಕಲ್ಲಾ ವಿದ್ಯೆಗೆ ವಿನಯವೇ ಭೂಷಣ ಇದರಿಂದ ಮಾನವೀಯ ಮೌಲ್ಯಗಳನ್ನು ಆಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕೆಂದು ಕರೆ ನೀಡಿದರು.
ತಿಪಟೂರು ಸ.ಪ್ರ.ದ. ಕಾಲೇಜು ಪ್ರಾಂಶುಪಾಲ ಕೆ.ಎಂ ರಾಜಣ್ಣ ಮಾತನಾಡಿ ಹುಟ್ಟಿದ್ದಕ್ಕಾಗಿ ಏನಾದರು ಸಾಧಿಸಬೇಕು ಆಗಲೆ ನಮ್ಮ ಜನ್ಮ ಸಾರ್ಥಕ, ನದಿಯೂ ಸಾಗರವನ್ನು ಹುಡುಕಿಕೊಂಡು ಹೋಗುವಂತೆ, ನಾವು ಜ್ಞಾನವನ್ನು ಅರಸಿ ಹೋಗಬೇಕೆ ವಿನಹಃ ಜ್ಞಾನವು ನಮ್ಮ ಬಳಿ ಬರುವುದಿಲ್ಲ, ಜ್ಞಾನಸಾಗರದಲ್ಲಿ ಮಿಂದೆದ್ದರೆ ನಮ್ಮ ಗುರಿಯನ್ನು ತಲುಪಬಹುದೆಂದರು. ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮಾಡಿದ್ದ ವಿಜ್ಞಾನದ ಮಾದರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಾಧ್ಯಪಕರುಗಳಾದ ಡಾ.ಕೆ.ಬಿ ಸರಸ್ವತಿ, ಎಸ್.ಅರ್ ನಾಗಭೂಷಣ್, ಹೆಚ್.ಜಿ ರಮೇಶ್, ಜೆ,ಟಿ ಮಹೇಶ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
