ಚಿತ್ರದುರ್ಗ;
ಅಯ್ಯುಪ್ಪ ಸೇವಾ ಸಮಾಜಂ ಹಾಗೂ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಮೆದೇಹಳ್ಳಿ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಶುಕ್ರವಾರದಂದು ಲೋಕ ಕಲ್ಯಾಣಾರ್ಥವಾಗಿ ಅಯ್ಯಪ್ಪಸ್ವಾಮಿಗೆ ಅಭಿಷೇಕ, ಅಲಂಕಾರ ಹಾಗೂ ಗಣ ಹೋಮವನ್ನು ಹಮ್ಮಿಕೊಳ್ಳಲಾಯಿತು.
ಪೂರ್ಣಾವತಿಯ ಪೂಜೆಗೆ ರೇಷ್ಮೆ ಸೀರೆ, ಅಕ್ಕಿ, ಬೆಳೆ, ಬೆಲ್ಲ, ಜೇನುತುಪ್ಪ, ತೆಂಗಿನಕಾಯಿ ಹಾಗೂ ಹಣ್ಣು ಇತ್ಯಾದಿಗಳನ್ನು ಭಕ್ತಾಧಿಗಳು ಹೋಮಕ್ಕೆ ಭಕ್ತಿ ಪೂರ್ವಕವಾಗಿ ಅರ್ಪಿಸಲಾಯಿತು. ದೇವಸ್ಥಾನದಲ್ಲಿ 60 ದಿನ ಅಯ್ಯಪ್ಪ ಸ್ವಾಮಿ ಭಕ್ತಾಧಿಗಳು ವ್ರತವನ್ನು ಆಚರಿಸುತ್ತಾರೆ ಈ ಸಂದರ್ಭದಲ್ಲಿ ಮಾಲಾಧಾರಿ ಅಯ್ಯಪ್ಪಗಳಿಗೆ ಉಚಿತ ಅನ್ನದಾನವು ಇರುತ್ತದೆ.
ಈ ಅನ್ನದಾನದ ಕಾಯ್ರಕ್ರಮವನ್ನು ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್ ಆಡಳಿತಾಧಿಕಾರಿ ಎಂ.ಸಿ. ರಘುಚಂದನ್ ಹಾಗೂ ಐಶ್ವರ್ಯಪೋರ್ಟ್ ಮಾಲೀಕರಾದ ಅರುಣ್‍ಕುಮಾರ್‍ರವರು, ಹುಬ್ಬಳಿಯ ಶಿವಾನಂದಬಾರ್ಕಿಯವರು ಉದ್ಘಾಟಿಸಿದರು.
ಶಬರಿಮಲೆಯ ಯಾತ್ರೆಯ ಸಂದರ್ಭದಲ್ಲಿ ರಾಜ್ಯದ ಹಾಗೂ ಹೊರ ರಾಜ್ಯದ ಐಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಯಾವುದೇ ತೊಂದರೆ ಉಂಟಾದಲ್ಲಿ ಜಿಲ್ಲಾ ಅಧ್ಯಕ್ಷರಾದ ಶರಣ್‍ಕುಮಾರ್ ಇವರನ್ನು ಸಂಪರ್ಕಿಸಬಹುದು ಮೊಬೈಲ್ ನಂ:9448664865
ದೇವಸ್ಥಾನದ ಗುರುಸ್ವಾಮಿಗಳಾದ ಸತೀಶ್‍ಶರ್ಮ, ಶರಣ್‍ಕುಮಾರ್, ಮಲ್ಲಿಕಾರ್ಜುನ್, ಎಂ.ಪಿ.ವೆಂಕಟೇಶ್ ಇನ್ನು ಮುಂತಾದ ಸದಸ್ಯರು ಹಾಗೂ ನೂರಾರು ಭಕ್ತಾಧಿಕಗಳು ಭಾಗವಹಿಸಿದ್ದರು.
19ನೇ ವರ್ಷದ ಬ್ರಹ್ಮೋತ್ಸವ ಕಾರ್ಯಕ್ರಮ ದಿನಾಂಕ:15-12-2018 ರಿಂದ 20-12-2018ರವರೆಗೆ ಅಯ್ಯಪ್ಪಸ್ವಾಮಿ ಪಡಿಪೂಜೆ ದಿನಾಂಕ:19-12-2018ನೇ ಬುಧವಾರ ಸಂಜೆ 6.30ಕ್ಕೆ, ಮಹಾ ಅನ್ನದಾನ ಕಾರ್ಯಕ್ರಮ ದಿನಾಂಕ:23-12-2018, ಆಭರಣ ಮೆರವಣಿಗೆ ದಿನಾಂಕ:13-01-2019ರ ಭಾನುವಾರ ಸಂಜೆ ನಡೆಯಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
