ಚೇಳೂರು
ನಮ್ಮ ಗ್ರಾಮ ಪಂಚಾಯ್ತಿಯ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಲು ನನಗೆ ಎಲ್ಲರ ಸಹಕಾರ ಮುಖ್ಯವಾಗಿ ಬೇಕಾಗಿದೆ. ಅದರ ಮುಖಾಂತರ ನಮ್ಮ ಗ್ರಾಮಪಂಚಾಯ್ತಿಯನ್ನು ತಾಲ್ಲೂಕಿನಲ್ಲಿಯೇ ಮಾದರಿಯಾಗಿ ಮಾಡಬಹುದು ಎಂದು ನೂತನವಾಗಿ ಬಿದರೆ ಗ್ರಾಪಂಗೆ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಬಿ.ಎಸ್.ರಮೇಶ್ ಹೇಳಿದರು.
ಇವರು ಈ ಗ್ರಾಪಂಗೆ ಹಿಂದೆ ಇದ್ದ ಅಧ್ಯಕ್ಷ ರಾಮಕೃಷ್ಣಯ್ಯನವರ ರಾಜಿನಾಮೆಯಿಂದ ತೆರವಾಗಿದ್ದ ಆ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ ಮಾತನಾಡುತ್ತಾ, ನಾವುಗಳು ಈ ಸ್ಥಾನದಲ್ಲಿರುವಷ್ಟು ದಿನ ಸಾರ್ವಜನಿಕರ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿಕೊಡುವುದೇ ನಮ್ಮಗಳ ಮುಖ್ಯವಾದ ಉದ್ದೇಶವಾಗಿದೆ. ಅದಕ್ಕೆ ಸಂಬಂಧಪಟ್ಟವರ ಸಹಕಾರಗಳು ಅತಿಮುಖ್ಯವಾಗಿದೆ. ನಮ್ಮ ಗ್ರಾಮಗಳು ಅಭಿವೃದ್ಧಿಯಾದರೆ ಅದು ಮುಂದಿನ ಪೀಳಿಗೆಯವರಿಗೆ ನಾವು ದಾರಿಯನ್ನು ಮಾಡಿಕೊಟ್ಟಂತಾಗುತ್ತದೆ. ಅವರು ಮುಂದೆ ಮತ್ತಷ್ಟು ಅಭಿವೃದ್ಧಿಯನ್ನು ಮಾಡಲು ಸಹಾಯವಾಗುತ್ತದೆ ಎಂದರು.
ಈ ಚುನಾವಣೆಯನ್ನು ತಹಶೀಲ್ದಾರ್ ಎಂ.ಮಮತಾ, ಚುನಾವಣಾಧಿಕಾರಿ ಗೋವಿಂದರಾಜು, ಕಂದಾಯಧಿಕಾರಿ ನಟರಾಜ್, ಕೆ.ವಿ.ನಾರಾಯಣ್, ಗ್ರಾಮಲೆಕ್ಕಿಗ ತಾರಕಚಂದ್ರ ನೇತೃತ್ವದಲ್ಲಿ ನಡೆಯಿತು.ಈ ಕಾರ್ಯಕ್ರಮದಲ್ಲಿ ಪ್ರಭಾರ ಪಿಡಿಒ ಎಂ.ಕೆ.ರವಿ, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಮೈಲಾರಪ್ಪ, ಉಮೇಶ್, ರಾಮಕೃಷ್ಣಯ್ಯ, ಹನುಮಂತಪ್ಪ, ಸಿದ್ದಲಿಂಗಯ್ಯ, ಉಪಾಧ್ಯಕ್ಷೆ ಮಹಾಲಕ್ಷಮ್ಮ ಹಾಗೂ ಗ್ರಾಪಂ ಸದಸ್ಯರುಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
