ಹೊಳಲ್ಕೆರೆ:
ನವಂಬರ್ 1ರಂದು ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಗೈರು ಹಾಜರಾದ ಸರ್ಕಾರಿ ಇಲಾಖೆಗಳ ಮುಖ್ಯಸ್ಥರ ವಿರುಧ್ದ ತೀವ್ರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ಎಚ್ಚರಿಕೆ ನೀಡಿದರು.ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ತಾಲ್ಲುಕು ಕಚೇರಿಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಪ್ರತಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಮುಂಚಿತವಾಗಿ ಸಭೆಯ ಸುತ್ತೋಲೆಯನ್ನು ಕಳುಹಿಸಿದ್ದರು ಸಹ ಸಭೆಗೆ ಒಂದಿಲ್ಲ ಒಂದು ನೆಪ ಹೇಳಿ ಗೈರು ಹಾಜರಾಗುವುದು ನಿರಂತರವಾಗಿ ನಡೆಯುತ್ತಿದೆ. ಈ ಪೂರ್ವಭಾವಿ ಸಭೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆದರು ಸಭೆಗೆ ಸರ್ಕಾರಿ ಮುಖ್ಯಸ್ಥರು ಗೈರು ಹಾಜರಾಗಿರುವುದರಿಂದ ಸಭೆಯಲ್ಲಿ ಶಾಸಕರು ಆಕ್ರೋಶ ವ್ಯಕ್ತಪಡಿಸಿ ಸಭೆಯ ಗೌರವಕ್ಕೆ ಮಾನ್ಯತೆ ನೀಡದ ಅಧಿಕಾರಿಗಳನ್ನು ಮುಂದೆ ತರಾಟೆ ತೆಗೆದುಕೊಳ್ಳುವುದಾಗಿ ಗುಡುಗಿದರು.
ತಹಶೀಲ್ದಾರ್ ಕೆ.ನಾಗರಾಜ್ ಮಾತನಾಡಿ ಎಂದಿನಂತೆ ಕನ್ನಡ ರಾಜ್ಯೊಥ್ಸವ ಸಮಾರಂಭ ನವಂಬರ್ 1ರಂದು ಬೆಳಿಗ್ಗೆ 8-30ಕ್ಕೆ ತಾಲ್ಲುಕು ಕಚೇರಿಯಿಂದ ಕನ್ನಡ ಭುವನೇಶ್ವರಿ ಭಾವ ಚಿತ್ರದೊಂದಿಗೆ ಮೆರವಣಿಗೆಯನ್ನು ಡೊಳ್ಳು, ವೀರಗಾಸೆ, ತಂಡದಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ಹೋರಟು ಕೊಟ್ರೆ ನಂಜಪ್ಪ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಸೇರಲಾಗುವುದು.ಈ ಕಾರ್ಯಕ್ರಮದಲ್ಲಿ ವಿವಿಧ ಸ್ತಬ್ಧ ಚಿತ್ರಗಳು, ಪೂರ್ಣಕುಂಭ, ಸ್ವಾಗತ ಮತ್ತು ವಿವಿಧ ಕನ್ನಡ ಪರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಪ.ಪಂ. ಸದಸ್ಯ ಕೆ.ಸಿ.ರಮೇಶ್, ಪ.ಪಂ ಮುಖ್ಯಾಧಿಕಾರಿ ವಾಸೀಂ, ಕ.ರ.ವೇ ಅಧ್ಯಕ್ಷ ಹನುಮಂತಪ್ಪ, ಮತ್ತು ಸರ್ಕಾರಿ ಇಲಾಖೆಗಳ ಮುಖ್ಯಸ್ಥರು ಮತ್ತು ಕನ್ನಡ ಭಾಷೆಯ ಅಭಿಮಾನಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ