ಮಧುಗಿರಿ
ಹೊಸಕೆರೆ ಗ್ರಾಮದ ನಿವಾಸಿಯೊಬ್ಬರು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ತಮ್ಮ ಜಮೀನಿನಲ್ಲಿ ರೇಷ್ಮೆ ನಾಟಿ ಮಾಡಿ, ಹನಿ ನೀರಾವರಿ ಅಳವಡಿಸಿಕೊಂಡಿದ್ದು, ಹನಿ ನೀರಾವರಿ ಅಳವಡಿಸಲು ಸಾಮಗ್ರಿಗಳು ಹಾಗೂ ಕೂಲಿಯ ವೆಚ್ಚಗಳನ್ನು ಮರುಪಾವತಿ ಮಾಡಿಕೊಡಲುಕೋರಿ ಮಧುಗಿರಿ ರೇಷ್ಮೆ ವಲಯಾಧಿಕಾರಿಗಳ ಕಛೇರಿಗೆ ಅರ್ಜಿಯನ್ನು ಸಲ್ಲಿಸಿಕೊಂಡಿರುತ್ತಾರೆ. ಶ್ರೀ.ಎಂ.ವಿ.ರಾಮಕೃಷ್ಯಣಯ್ಯ, ರೇಷ್ಮೆ ವಲಯಾಧಿಕಾರಿ, ಮಧುಗಿರಿ ರವರು ರೂ.33,000/- ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿರುತ್ತಾರೆ
ದಿನಾಂಕ:18/03/2019 ರಂದು ಶ್ರೀ.ಎಂ.ವಿ.ರಾಮಕೃಷ್ಣಯ್ಯ ರವರು ದೂರುದಾರರಿಂದ ರೂ.33,000/- ಲಂಚದ ಹಣವನ್ನು ಪಡೆಯುತ್ತಿದ್ದಾಗ ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ ಆರೋಪಿತರನ್ನು ದಸ್ತಗಿರಿ ಮಾಡಿ, ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ, ತನಿಖೆ ಮುಂದುವರೆದಿದೆ.