ಹಾಸ್ಟೆಲ್ ವಾರ್ಡನ್ ಎಸಿಬಿ ದಾಳಿ…!!

ಬೆಂಗಳೂರು

        ಸುಮಾರು 250 ಕೋಟಿ ರೂ. ಮೀರಿದ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದ ಕನಕಪುರ ತಾಲೂಕಿನ ಹುಣಸನಹಳ್ಳಿ ಸರ್ಕಾರಿ ಹಾಸ್ಟೆಲ್ ವಾರ್ಡನ್ ಬಿ.ನಟರಾಜ್‍ನನ್ನು ಸೇವೆಯಿಂದ ಆಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

        ನಟರಾಜ್ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಿಸಿ ಎಸಿಬಿ ತನಿಖೆ ಕೈಗೊಂಡ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು À್ನು ಸೇವೆಯಿಂದ ಆಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

       1995 ರಲ್ಲಿ ನಟರಾಜ್ ಚನ್ನಪಟ್ಟಣ ತಾಲೂಕಿನ ವಿದ್ಯಾರ್ಥಿ ನಿಲಯದಲ್ಲಿ ದಿನಗೂಲಿ ನೌಕರನಾಗಿ ಕೆಲಸಕ್ಕೆ ಸೇರಿಕೊಂಡಿದ್ದಾಗ ಈತನಿಗೆ ಮಾಸಿಕ ವೇತನ 700 ರೂ. ಇತ್ತು. ಪಿತ್ರಾರ್ಜಿತವಾಗಿ ಕನಕಪುರ ತಾಲೂಕಿನ ಏರಂಗೆರೆ ಗ್ರಾಮದಲ್ಲಿ ಸರ್ವೇ ನಂಬರ್ 80 ರಲ್ಲಿ 4 ಎಕರೆ ಜಮೀನಿತ್ತು. ಇದೀಗ 250 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಸಂಪಾದಿಸಿದ್ದಾನೆ.

        ಈ ಬಗ್ಗೆ ಕನಕಪುರ ಸಿವಿಲ್ ನ್ಯಾಯಾಲಯ ರಾಮನಗರ ಎಸಿಬಿಗೆ ತನಿಖೆ ನಡೆಸುವಂತೆ ಸೂಚಿಸಿದೆ. ರಾಮನಗರ ಎಸಿಬಿ ಯಿಂದ ನಟರಾಜ್ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಇದೀಗ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ವಿಕಾಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಎಸಿಬಿಯಿಂದ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap