ತಿಪಟೂರು
ಸರ್ಕಾರಿ ಕಚೇರಿಗಳ ಸೂಚನಾ ಫಲಕದಲ್ಲಿ ಹಾಗೂ ಅಧಿಕಾರಿಗಳು ಕುಳಿತುಕೊಳ್ಳುವ ಜಾಗದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಪೋಸ್ಟರ್‍ಗಳನ್ನು ಕಡ್ಡಾಯವಾಗಿ ಹಾಕಬೇಕು ಎಂದು ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‍ಪಿ ರಘುಕುಮಾರ್ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ತಾಲ್ಲೂಕಿನ ನಗರಸಭೆಯಲ್ಲಿ ಕಳೆದ ಬಾರಿ ಭೇಟಿ ನೀಡಿದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಪೋಸ್ಟರ್‍ಗಳನ್ನು ಹಾಕುವಂತೆ ಸ್ವಷ್ಟವಾಗಿ ತಿಳಿಸಿದರೂ, ಇನ್ನೂ ಯಾವ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ತಿಳಿದು ಇನ್ನೂ ಎರಡು ದಿನಗಳ ಕಾಲಾವಧಿಯಲ್ಲಿ ಹಾಕುವಂತೆ ಹಾಗೂ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯ ಹೆಸರು, ಹುದ್ದೆಯ ಮಾಹಿತಿಗಳನ್ನು ಇಲಾಖೆಗೆ ತಿಳಿಸುವಂತೆ ಸೂಚಿಸಿದರೂ ಬೇಜವಾಬ್ದಾರಿ ವರ್ತನೆಯು ಸರಿಯಿಲ್ಲ ಎಂದು ನಗರಸಭೆಯ ಎಇಇ ನಾಗೇಶ್ ತಿಳಿಸಿ ಅತಿ ಶೀಘ್ರದಲ್ಲಿ ದಾಖಲೆಗಳನ್ನು ನೀಡಬೇಕು ಎಂದು ಎಚ್ಚರಿಕೆಯನ್ನು ನೀಡಿದರು.
ನಗರಸಭೆ, ತಾಲ್ಲೂಕು ಪಂಚಾಯಿತಿಯ ಆವರಣದಲ್ಲಿ ಹಾಗೂ ಎಲ್ಲಾ ಗ್ರಾಮ ಪಂಚಾಯಿತಿ ಕಾರ್ಯಾಲಯದ ಗೋಡೆಗಳಲ್ಲಿ ಪೋಸ್ಟರ್‍ಗಳನ್ನು ಕಡ್ಡಾಯವಾಗಿ ಹಾಕಿ ಗೋಡೆ ಬರಹವನ್ನು ಬರೆಸುವಂತೆ ಕಾರ್ಯನಿರ್ವಹಣಾಧಿಕಾರಿಗೆ ತಿಳಿಸಿದ್ದಲ್ಲದೆ ಮುಖ್ಯವಾಗಿ ತಾ.ಪಂ. ಜಾಹಿರಾತು ಫಲಕದಲ್ಲಿ ಸ್ವತಃ ತಾವೆ ಹಾಕುವುದಾಗಿ ತಿಳಿಸಿದರು.
ಸಾರ್ವಜನಿಕರ ಅಹವಾಲು ಸಭೆಯಲ್ಲಿ ಕೇವಲ ಮೂರು ಸಮಸ್ಯೆಗಳು ಬಂದಿದ್ದು ತಹಸೀಲ್ದಾರ್ ಕಚೇರಿಯಲ್ಲಿ ಕಂಚಾಘಟ್ಟ ಗ್ರಾಮದ ಸರ್ವೇ ನಂಬರ್‍ನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಬೇರೆಯವರ ಹೆಸರಿಗೆ ಜಮೀನುಗಳನ್ನು ಅಕ್ರಮವಾಗಿ ನೋಂದಣಿ ಮಾಡಿದ್ದಾರೆ ಎಂದು ದೂರು ಸಲ್ಲಿಸಿದ್ದರು.
ತಡಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗದಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆಯ ನಿರ್ಮಾಣದ ವೇಳೆ ಗುತ್ತಿಗೆದಾರ ರಸ್ತೆಗೆ ಹಾಕಿದ್ದ ಚಪ್ಪಡಿ ಕಲ್ಲುಗಳನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಇದರ ಬಗ್ಗೆ ಪಿ.ಡಿ.ಒ ಯಾವ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರಿಂದ ದೂರು ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಪಿ.ಡಿ.ಓ ನಾನು ಹರಾಜು ಹಾಕಲು ಹೋದಾಗ ಗುತ್ತಿಗೆದಾರರು ದೊಂಬಿಮಾಡಿದ್ದು ಇದರ ಬಗ್ಗೆ ತಾ.ಪಂ. ಇ.ಓ ಮತ್ತು ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ತಿಳಿಸಿದೆನು. ಸ್ಥಳಕ್ಕೆ ಬಂದ ಪಿಡಬ್ಲ್ಯೂಡಿನವರು ನಾನು ಇದಕ್ಕೆ ಇನ್ನೆರಡು ದಿನಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮತೆಗೆದುಕೊಳ್ಳುವುದಾಗಿ ತಿಳಿಸಿದರು. ಇದಕ್ಕೆ ಎಸಿಬಿಯವರು ಇನ್ನು ಒಂದುವಾರದಲ್ಲಿ ಇತ್ಯರ್ಥವಾಗಿ ಸರ್ಕಾರಕ್ಕೆ ಬರಬೇಕಾದ ಹಣ ಬಂದು ಸೇರಬೇಕು ಇದು ಮುಂದುವರೆದರೆ ನಾನು ನಿಮ್ಮ ಸಂಬಂಳದಲ್ಲಿ ಕಟಾಯಿಸಲಾಗುವುದೆಂದು ಎಚ್ಚರಿಸಿದರು.
ನಾನು ಕೃಷಿ ಇಲಾಖೆ ವತಿಯಿಂದ ನರೇಗಾ ಯೋಜನೆಯಲ್ಲಿ ಎರೆಹುಳು ತೊಟ್ಟಿ ನಿರ್ಮಾಣ ಮಾಡಿ ಎರಡು ವರ್ಷಗಳು ಕಳೆದರೂ ನಮಗೆ ಹಣ ಬಂದಿಲ್ಲ ಎಂದು ಫಲಾನುಭವಿಯು ಕೈಮುಗಿದು ಬೇಡಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ