ದ್ವಿಚಕ್ರ ವಾಹನ ಆಯಾತಪ್ಪಿ ಮೋರಿಗೆ ಬಿದ್ದು ಸಾವು

ಕೊರಟಗೆರೆ;-

      ದ್ವಿಚಕ್ರ ವಾಹನದಲ್ಲಿ ವೇಗವಾಗಿ ಚಲಿಸುತ್ತಿದ್ದ ಯುವಕರು ಆಯಾತಪ್ಪಿ ರಸ್ತೆ ಬದಿಯ ಮೋರಿಗೆ ಬಿದ್ದು ಹಿಂಬದಿಯ ಸವಾರನಿಗೆತೀವ್ರತರದ ಪೆಟ್ಟಾಗಿಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯೆ ಕೊನೆಯುಸಿರೆಳೆದ ಘಟನೆಕೊರಟಗೆರೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿಜರುಗಿದೆ.

        ಕೊರಟಗೆರೆ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಮುಂಭಾಗ ಈ ದುರ್ಘಟನೆ ಜರುಗಿದ್ದು, ಜೆಟ್ಟಿ ಅಗ್ರಹಾರ ಗ್ರಾಮದ ಹನುಮಂತರಾಯ (29 ವರ್ಷ) ಎಂಬ ಯುವಕನೆ ಈ ಘಟನೆಯಲ್ಲಿ ಸಾವಿಗೀಡಾದ ದುರ್ದೈವಿಯಾಗಿದ್ದು, ಈತನ ಸ್ನೇಹಿತ ಥರಟಿ ಗ್ರಾಮದ ನರಸಿಂಹ ಎಂಬುವನಿಗೆ ಸಣ್ಣ ಪುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾನೆಎನ್ನಲಾಗಿದೆ.

        ಈ ಇಬ್ಬರು ಯುವಕರು ಕೊರಟಗೆರೆಗೆ ಕೆಲವೊಂದು ಕಾರ್ಯನಿಮಿತ್ತ ಬಂದುತಮ್ಮ ಗ್ರಾಮಗಳಾದ ಜೆಟ್ಟಿಅಗ್ರಹಾರ ಹಾಗೂ ಥರಟಿಗೆ ಹಿಂತಿರುಗುವಾಗ ದ್ವಿಚಕ್ರ ವಾಹನದಲ್ಲಿಅತೀವೇಗ ಹಾಗೂ ಅಜಾಗರೂಕತೆಯೇ ಈ ಘಟನೆಗೆಕಾರಣಎನ್ನಲಾಗಿದೆ.

        ಈ ಸಂಬಂದ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣಧಾಖಲಾಗಿದ್ದು, ಸಿ ಪಿ ಐ ಮುನಿರಾಜು ಹಾಗೂ ಪಿ ಎಸೈ ಮಂಜುನಾಥ್ ಸ್ಥಳ ಪರಿಶೀಲನೆ ನಡೆಸಿ ಹೆಚ್ಚಿನತನಿಖೆ ನಡೆಸುತ್ತಿದ್ದಾರೆಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link