ಕೊರಟಗೆರೆ
ಪಟ್ಟಣದ ಶಿವಗಂಗಾ ಚಿತ್ರಮಂದಿರದ ಹಿಂಭಾಗದಲ್ಲಿರುವ ಗುಡಿಸಲಿಗೆ ಇದ್ದಕ್ಕಿದ್ದ ಹಾಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿ, ಗುಡಿಸಲಿನಲ್ಲಿದ್ದ ದವಸ ಧಾನ್ಯಗಳು ಸೇರಿದಂತೆ ಇನ್ನೂ ಹೆಚ್ಚಿನ ದಿನಬಳಕೆಯ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಗುಡಿಸಲಿನಲ್ಲಿ ವಾಸವಿದ್ದ ದಂಪತಿ ರಾಮಚಂದ್ರಯ್ಯ ಮತ್ತು ಅವರ ಪತ್ನಿ ಗಂಗಮ್ಮ ತಮ್ಮ ದಿನನಿತ್ಯದ ಕೆಲಸಕ್ಕಾಗಿ ಹೊರಗೆ ಹೋದಂತಹ ಸಂದರ್ಭದಲ್ಲಿ ಈ ದುರ್ಘಟನೆ ಜರುಗಿದೆ.ರಾಮಚಂದ್ರಪ್ಪ ಪಟ್ಟಣದ ಅಂಚೆ ಕಚೇರಿಯ ಮುಂಭಾಗ ಹೊಟ್ಟೆ ಪಾಡಿಗಾಗಿ ಸೌತೆಕಾಯಿಯ ವ್ಯಾಪಾರ ಮತ್ತು ಆತನ ಹೆಂಡತಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎನ್ನಲಾಗಿದೆ.
ಬೆಂಕಿ ಹೊತ್ತಿಕೊಳ್ಳುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಕೂಡಲೆ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ ಕೂಡಲೆ ಸ್ಥಳಕ್ಕೆ ಧಾವಿಸಿ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ .ರಾಮಚಂದ್ರಯ್ಯ ತೀರಾ ಬಡವರಾಗಿದ್ದು, ಇವರಿಗೆ ಜನಪ್ರತಿನಿಧಿಗಳು, ಪಪಂ ಅಧಿಕಾರಿಗಳು ತುರ್ತಾಗಿ ಏನಾದರೂ ಸಹಾಯ ಮಾಡಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.